ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅವರ ಬಯೋಪಿಕ್‌ ತೆರೆ ಮೇಲೆ ಬರಲಿದೆಯೇ? ಅವರ ಸಿನಿಮಾ ಹಾಗೂ ರಾಜಕೀಯ ಪ್ರವೇಶದ ಸುತ್ತ ವೆಬ್‌ ಸರಣಿ ರೂಪಗೊಳ್ಳುತ್ತಿದೆಯೇ? ತೆರೆ ಮೇಲೂ ಸುಮಲತಾ ಹಾಗೂ ನಿಖಿಲ್‌ ಕುಮಾರ್‌ ಮುಖಾಮುಖಿ ಆಗಲಿದ್ದಾರೆಯೇ?

ಮೇಲಿನ ಈ ಮೂರು ಪ್ರಶ್ನೆಗಳು ಸದ್ಯ ಗಾಂಧಿನಗರದಲ್ಲಿ ತಣ್ಣಗೆ ಸದ್ದು ಮಾಡಲಾರಂಭಿಸಿವೆ. ಇದಕ್ಕೆ ಕಾರಣ ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರು ಸುಮಲತಾ ಅವರನ್ನು ಭೇಟಿ ಮಾಡಿರುವುದು. ತಮ್ಮ ನಿರ್ದೇಶನದ ತಂಡದ ಜತೆಗೆ ಇತ್ತೀಚೆಗೆ ಗುರು ದೇಶಪಾಂಡೆ ಅವರು ಸುಮಲತಾ ಅವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ.

ಫ್ಯಾಂಟಮ್‌ ಭಾರ ಹೆಚ್ಚಿಸಿದ ಬಾಲಿವುಡ್ ಬೆಡಗಿ: ಕಿಚ್ಚನಿಗೆ ನಟಿ ಜಾಕಿ ಜೋಡಿ

ಇದೇ ಸಂದರ್ಭದಲ್ಲಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ರೂಡ ಹಾಜರಿದ್ದರು. ಈ ಮಾತುಕತೆ ಸುಮಲತಾ ಅವರ ಜೀವನ ಪುಟಗಳನ್ನು ತೆರೆ ಮೇಲೆ ತರುವುದರ ಸುತ್ತ ಎಂಬುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾಹಿತಿ.

ಇದು ಸಿನಿಮಾನಾ ಅಥವಾ ವೆಬ್‌ ಸರಣಿಯಾ ಎಂಬುದು ಕೂಡ ಇನ್ನೂ ರಹಸ್ಯವಾಗಿದೆ. ಆದರೆ, ನಿರ್ದೇಶಕ ಗುರು ದೇಶಪಾಂಡೆ ಅವರು ಸುಮಲತಾ ಅವರ ಜೀವನ ಕತೆಯನ್ನು ತೆರೆ ಮೇಲೆ ತರುವುದು ಪಕ್ಕಾ ಎನ್ನಲಾಗುತ್ತಿದೆ.

15 ವರ್ಷಗಳ ನಂತ್ರ ಪ್ರಿಯತಮೆ ಮನೆಗೆ ಕಿಚ್ಚ.. ಆಟೋಗ್ರಾಫ್ ದಿನಗಳು! ವಿಡಿಯೋ

ಒಂದು ವೇಳೆ ಅವರ ರಾಜಕೀಯ ಪುಟಗಳು ತೆರೆ ಮೇಲೆ ಬಂದರೆ ಮಂಡ್ಯದಲ್ಲಿ ಅವರ ಪ್ರತಿಸ್ಪರ್ಧಿಯಾಗಿದ್ದ ನಿಖಿಲ್‌ ಕುಮಾರ್‌ ಅವರ ಪಾತ್ರವೂ ತೆರೆ ಮೇಲೆ ಬರಲಿದೆಯೇ ಎಂಬುದು ಮತ್ತೊಂದು ಕುತೂಹಲ.