ನಟ ಸುದೀಪ್‌ ಅವರ ‘ಫ್ಯಾಂಟಮ್‌’ ಚಿತ್ರದಲ್ಲಿ ಶ್ರೀಲಂಕಾ ಮೂಲದ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಜ್ಜೆ ಹಾಕುತ್ತಿದ್ದಾರೆ. ಸದ್ಯದಲ್ಲೇ ಈ ಹಾಡಿನ ಚಿತ್ರೀಕರಣ ನಡೆಯಲಿದೆ.

ಹಿಂದಿಯಲ್ಲೂ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ಬೇಡಿಕೆಯ ನಟಿಯನ್ನು ಕರೆಸಲಾಗಿದೆ ಎನ್ನಲಾಗಿದೆ. ಆ ಮೂಲಕ ಮೊದಲ ಬಾರಿಗೆ ಜಾಕ್ವೆಲಿನ್‌ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ.

15 ವರ್ಷಗಳ ನಂತ್ರ ಪ್ರಿಯತಮೆ ಮನೆಗೆ ಕಿಚ್ಚ.. ಆಟೋಗ್ರಾಫ್ ದಿನಗಳು! ವಿಡಿಯೋ

ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್‌ ತಿಂಗಳಲ್ಲಿ ಈ ಐಟಂ ಹಾಡಿನ ಚಿತ್ರೀಕರಣ ನಡೆಯಲಿದೆ. ಸದ್ಯಕ್ಕೆ ‘ಫ್ಯಾಂಟಮ್‌’ ಚಿತ್ರತಂಡ ಕೇರಳ ಶೆಡ್ಯೂಲ್‌ನಲ್ಲಿ ಶೂಟಿಂಗ್‌ ಮಾಡುವುದರಲ್ಲಿ ಬ್ಯುಸಿ ಆಗಿದೆ. ಜೆ.ಮಂಜು ನಿರ್ಮಾಣದ ಈ ಚಿತ್ರವನ್ನು ಅನೂಪ್‌ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ನಿರೂಪ್‌ ಭಂಡಾರಿ, ನೀತಾ ಅಶೋಕ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ರಿಯಲ್ ಆನೆಯನ್ನು ಹಾಡಿನಲ್ಲಿ ಬಳಸಿಕೊಳ್ಳುತ್ತಿರುವುದು, ದುಬಾರಿ ಕಾರನ್ನು ಬಳಸುವುದು ಸೇರಿದಂತೆ ಸ್ಪೆಷಲ್ ಫಿಷರ್‌ಗಳ ಮೂಲಕ ಫ್ಯಾಂಟಮ್ ಸುದ್ದಿ ಮಾಡುತ್ತಲೇ ಇದೆ. ಇದೀಗ ಜಾಕಿಯೂ ತಂಡ ಸೇರಿದ್ದು, ಸಿನಿಮಾ ಬಗ್ಗೆ ಇನ್ನಷ್ಟು  ಕುತೂಹಲ ಹೆಚ್ಚಾಗಿದೆ.