Asianet Suvarna News Asianet Suvarna News

ಸುಧಾರಾಣಿ ಅಣ್ಣ ನಾಗರಹಾವು ಸಾಕಿದ್ರಂತೆ! ತೆಂಗಿನಚಿಪ್ಪಲ್ಲಿ ಹಾಲು ಕುಡೀತಿದ್ದ ಅಚ್ಚರಿ ವಿಷ್ಯ ರಿವೀಲ್​

ನಟಿ ಸುಧಾರಾಣಿ ಅವರು ತಮ್ಮ ಅಣ್ಣ ಮುರಳಿ ನಾಗರಹಾವು ಸಾಕಿದ್ದ ಕುತೂಹಲದ ಘಟನೆಯನ್ನು ಹೇಳಿದ್ದಾರೆ. ಅವರು ಹೇಳಿದ್ದೇನು?
 

Sudharani told a curious incident in rajesh gowda channale where her elder brother Murali kept a cobra suc
Author
First Published Aug 20, 2024, 10:06 AM IST | Last Updated Aug 20, 2024, 10:06 AM IST

ನಟಿ ಸುಧಾರಾಣಿ ಇದೀಗ ಸೀರಿಯಲ್​ ಪ್ರೇಮಿಗಳ ಮೆಚ್ಚಿನ ನಟಿ.  ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ತುಳಸಿ ಅಮ್ಮ ಆಗಿಯೇ ಮಿಂಚುತ್ತಿದ್ದಾರೆ ನಟಿ.  ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ ಆಳಿದ ಬ್ಯೂಟಿ ಕ್ವೀನ್​ ಇವರು.  13ನೇ ವಯಸ್ಸಿನಲ್ಲಿಯೇ ನಾಯಕಿಯಾದ ಕನ್ನಡದ ಏಕೈಕ ನಟಿ ಕೂಡ. ನಡುವೆ ಬ್ರೇಕ್​ ಪಡೆದು ಮತ್ತೆ  ಕಮ್​ಬ್ಯಾಕ್​  ಮಾಡಿ ಈಗಲೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.  ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. ನಟಿ ಸುಧಾರಾಣಿ ಅವರಿಗೆ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಾಕಷ್ಟು ಬೇಡಿಕೆ ಇದೆ. ಈ ಮೊದಲು ಹೀರೋಯಿನ್ ಆಗಿ ಮಿಂಚುತ್ತಿದ್ದ ಅವರು ಈಗ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಯುವ’ ಸಿನಿಮಾದಲ್ಲಿ ಕಥಾ ನಾಯಕನ ತಾಯಿ ಪಾತ್ರ ಮಾಡಿದ್ದರು. ಅದೇ ರೀತಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.  

ಇದೀಗ ನಟಿ, ತಮ್ಮ ಜೀವನದ ಕೆಲವೊಂದು ಕುತೂಹಲದ ಘಟ್ಟದ ಕುರಿತು ಮಾತನಾಡಿದ್ದಾರೆ. ರಾಜೇಶ್​ ಗೌಡ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ  ನಟಿ ತಮ್ಮ ಅಣ್ಣಂದಿರ ಕುರಿತು ಮಾತನಾಡಿದ್ದಾರೆ. ನನಗೆ ಇಬ್ಬರು ಅಣ್ಣಂದಿರು. ಅರುಣ್​ ಮತ್ತು ಮುರಳಿ. ಅರುಣ್​ ಥೇಟ್ ನನ್ನ ಅಮ್ಮನ ಥರನೇ ಪ್ರೊಟೆಕ್ಟಿವ್​. ಅಂದ್ರೆ ನನ್ನ ಅಮ್ಮ ನನಗೆ ಹೇಗೆ ರಕ್ಷಣೆ ನೀಡ್ತಾರೋ ಅದೇ ರೀತಿ ಅರುಣ್​ ಅಣ್ಣ ಕೂಡ. ಯಾವಾಗ್ಲೂ ನನ್ನ ರಕ್ಷಣೆಗೆ ನಿಲ್ತಾನೆ. ಆದರೆ ಮುರುಳಿ ಮಾತ್ರ ತುಂಬಾ ಗೋಳು ಹೊಯ್ದುಕೊಳ್ತಿದ್ದ ಎನ್ನುತ್ತಲೇ ಈಗ ಅಣ್ಣ ಮುರುಳಿಯ ಕೆಲವೊಂದು ಇಂಟರೆಸ್ಟಿಂಗ್​ ವಿಷ್ಯ ನಟಿ ಸುಧಾರಾಣಿ ಹೇಳಿದ್ದಾರೆ.

ಪಾರ್ವತಮ್ಮನವ್ರು ಹಾಗೆ ಯಾಕೆ ಮಾಡಿದ್ರಂತ ಕೊನೆಗೂ ಗೊತ್ತಾಗ್ಲೇ ಇಲ್ಲ! ಸುಧಾರಾಣಿ ಹೇಳಿದ್ದೇನು?

ಮುರುಳಿಗೆ ಪ್ರಾಣಿ ಪಕ್ಷಿ ಎಂದರೆ ಸಿಕ್ಕಾಪಟ್ಟೆ ಪ್ರೀತಿ. ನಮ್​ ಮನೆ ಮಿನಿ ಝೂ ರೀತಿ ಇತ್ತು. ಅಲ್ಲಿ ಸಿಕ್ಕಾಪಟ್ಟೆ ಹಕ್ಕಿ, ಪ್ರಾಣಿ ಎಲ್ಲಾ ಇದ್ವು. ಪಾರಿವಾಳ, ಗಿಳಿ, ಮೊಲ, ನಾಯಿ, ಬೆಕ್ಕು, ಗುಬ್ಬಚ್ಚಿ, ಅಳಿಲು ಇನ್ನು ಏನೇನೋ ಇದ್ವು. ಇವೆಲ್ಲಾ ಇದ್ದುದು ಗೊತ್ತೇ ಇತ್ತು. ಆದ್ರೆ ಡೇಲಿ ತೆಂಗಿನ ಚಿಪ್ಪಿನಲ್ಲಿ ಹಾಲು ಇಟ್ಟುಕೊಂಡು ಟೆರೇಸ್​ಗೆ ಹೋಗ್ತಿದ್ದ. ಯಾಕೆ ಅಂತನೇ ಗೊತ್ತಿರಲಿಲ್ಲ. ಆಮೇಲೆ ಹಿಂದೆನೇ ಹೋಗಿ ನೋಡಿದ್ರೆ ಅಲ್ಲಿತ್ತು ನಾಗರಹಾವು ಎಂದು ಶಾಕಿಂಗ್​ ವಿಷ್ಯ ತಿಳಿಸಿದ್ದಾರೆ ಸುಧಾರಾಣಿ. ಆ ಹಾವಿಗೆ ವಿಷದ ಹಲ್ಲು ಕಿತ್ತು ಹಾಕಲಾಗಿತ್ತು ಎನ್ನಿ.  ಆದ್ರೂ ಅಣ್ಣಂಗೆ ಆ ಹಾವಿನ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಇತ್ತು. ಡೇಲಿ ಅದಕ್ಕೆ ಹಾಲು ಹಾಕ್ತಿದ್ದ ಎಂದಿದ್ದಾರೆ. ಆಗಲೇ ಅಪ್ಪ-ಅಮ್ಮ ಮತ್ತೆ ನಮಗೆಲ್ಲಾ ಗೊತ್ತಾಗಿದ್ದು, ಅವನು ಹಾವುನೂ ಸಾಕ್ತಾ  ಇದ್ದಾನೆ ಅಂತ. ಹಾಗಿದ್ದ ನಮ್ಮಣ್ಣ ಎಂದಿದ್ದಾರೆ ಸುಧಾರಾಣಿ.

 ಹಿಂದೆ ನಟಿ, ತಮ್ಮ ದಾಂಪತ್ಯ ಜೀವನದ ಕುರಿತೂ ಹೇಳಿಕೊಂಡಿದ್ದರು. ಮದುವೆ ಬಳಿಕದ ಜೀವನದ ಬಗ್ಗೆ ಮಾತನಾಡಿದ್ದ  ನಟಿ, , ಕರಿಯರ್ ಪೀಕ್ ನಲ್ಲಿದ್ದಾಗಲೇ ಮದುವೆಯಾಯಿತು, ಅಮೆರಿಕಕ್ಕೆ ಹೋಗಿ ನೆಲೆಸುವಂತಾಯ್ತು. ಅಲ್ಲಿ ತುಂಬಾ ಕಷ್ಟ ಅನುಭವಿಸಿದೆ. ಅಮೆರಿಕಕ್ಕೆ (America) ಹೋದಾಗ ಅಲ್ಲಿ ಎಲ್ಲವನ್ನು ನಾವೇ ಮಾಡಿಕೊಳ್ಳಬೇಕಿತ್ತು. ಕಲಿಯಲಿಲ್ಲ ಅಂದರೆ ಬದುಕೋಕೆ ಸಾಧ್ಯವಿಲ್ಲ.  ಊರಲ್ಲಿ ಸಿನಿಮಾ ಶೂಟಿಂಗ್ ಅಂತಷ್ಟೇ ಇದ್ದಿದ್ದ ನನಗೆ, ನನ್ನೊಳಗೆ ಹೊಸ ವ್ಯಕ್ತಿ ಕಾಣಿಸಿಕೊಂಡಿದ್ದು ಆವಾಗ. ನಂತರ ಒಂದೊಂದಾಗಿ ಕಲಿತೆ, ಒಬ್ಬಳೇ ಅಮೆರಿಕ ಸುತ್ತಿದೆ.  ಆ ವ್ಯಕ್ತಿಗೆ ನನ್ನ ಮೇಲೆ ಏನು ದ್ವೇಷ ಇತ್ತೋ ಗೊತ್ತಿಲ್ಲ. ಆದರೆ ಅವರಿಗೆ ಮಾನಸಿಕ ಸಮಸ್ಯೆ (mental problem) ಸೇರಿ, ಕೆಲವೊಂದು ಸಮಸ್ಯೆಗಳಿದ್ದವು. ಅದನ್ನ ಯಾರು ಒಪ್ಪೋಕೆ ರೆಡಿ ಇರ್ಲಿಲ್ಲ. ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಚಿಕಿತ್ಸೆ ಕೊಡಿಸಬೇಕು ಅನ್ನೋದು ಯಾರಿಗೂ ತಿಳಿಯಲಿಲ್ಲ. ಮೊದಲಿಗೆ ನಾನು ಇವತ್ತು ಸರಿ ಹೋಗಬಹುದು, ನಾಳೆ ಸರಿ ಹೋಗಬಹುದು ಎಂದು ಎಲ್ಲವನ್ನೂ ಸಹಿಸಿಕೊಂಡೆ, ಆಗೋದೇ ಇಲ್ಲ ಎನಿಸಿದಾಗ ಆ ಸಂಬಂಧದಿಂದಲೇ ಹೊರಬರಲು ನಿರ್ಧರಿಸಿದೆ ಎಂದಿದ್ದರು.

ಮುಂದೆ ಪಶ್ಚಾತ್ತಾಪ ಪಡೋ ಬದ್ಲು ಇಂದು ಹುಡುಗಿಯರು ಹೇಗಿರಬೇಕು? ಸುಧಾರಾಣಿ ಅನುಭವದ ಮಾತು ಕೇಳಿ...

Latest Videos
Follow Us:
Download App:
  • android
  • ios