ಮುಂದೆ ಪಶ್ಚಾತ್ತಾಪ ಪಡೋ ಬದ್ಲು ಇಂದು ಹುಡುಗಿಯರು ಹೇಗಿರಬೇಕು? ಸುಧಾರಾಣಿ ಅನುಭವದ ಮಾತು ಕೇಳಿ...

ಅವರಿದ್ದಾರೆ ಬಿಡು ಎನ್ನುವ ಉದಾಸೀನ ಮಾಡದೇ ಹೆಣ್ಣುಮಕ್ಕಳು ಹೇಗೆ ಬದುಕಬೇಕು ಎನ್ನುವ ಕುರಿತು ನಟಿ ಸುಧಾರಾಣಿ  ಹೇಳಿದ್ದೇನು?
 

Sudharani about how girls should live without being  dependent  in rapid rashmi show suc

ಹೆಣ್ಣು ಮಕ್ಕಳ ರೋಲ್​ ಬದಲಾಗಿ ಎಷ್ಟೋ ವರ್ಷಗಳಾಗಿ ಬಿಟ್ಟಿವೆ. ಹಾಗೆ ನೋಡಿದರೆ, ಇಂದು ಬಹಳಷ್ಟು ಮನೆಯ ಜವಾಬ್ದಾರಿಗಳನ್ನು ಅದು ಅಪ್ಪನ ಮನೆಯೇ ಆಗಿರಬಹುದು, ಗಂಡನ ಮನೆಯೇ ಆಗಿರಬಹುದು... ಎಲ್ಲಾ ಜವಾಬ್ದಾರಿಯಗಳನ್ನು ಹೆಣ್ಣುಮಕ್ಕಳೇ ಹೊತ್ತುಕೊಂಡಿದ್ದಾರೆ. ಅತ್ಯಂತ ಕಡುಬಡತನದ ಮನೆಯಿಂದ ಹಿಡಿದು ಮಧ್ಯಮ ವರ್ಗದ ಅದೆಷ್ಟೋ ಹೆಣ್ಣುಮಕ್ಕಳು ಸಂಸಾರದ ನೊಗ ಹೊತ್ತುಕೊಂಡಿದ್ದಾರೆ. ಪುರುಷರಿಗಷ್ಟೇ ಸೀಮಿತ ಎಂದುಕೊಂಡಿರುವ ಅದೆಷ್ಟೋ ಕ್ಷೇತ್ರಗಳಲ್ಲಿ ಹೆಣ್ಣು ಹೆಜ್ಜೆ ಇಟ್ಟು ದಶಕಗಳೇ ಕಳೆದಿವೆ. ಇದರ ಹೊರತಾಗಿಯೂ ಕೆಲವು ಹೆಣ್ಣುಮಕ್ಕಳು ಸ್ವಯಂಕೃತ ಅಪರಾಧ ಮಾಡಿಕೊಂಡೋ ಅಥವಾ ಪರಿಸ್ಥಿತಿಗೆ ಸಿಲುಕಿಯೋ, ಬೇಜವಬ್ದಾರಿಯಿಂದಲೋ, ಗಂಡಸರು ಇರುವಾಗ ತಮಗ್ಯಾಕೆ ದುಡಿಮೆ ಎಂದೋ ಬೇರೆಯವರ ಮೇಲೆಯೇ ಅವಲಂಬಿಸಿ ಬದುಕುತ್ತಿದ್ದಾರೆ. ಇಂಥ ಹೆಣ್ಣುಮಕ್ಕಳ ಪೈಕಿ ಕೆಲವರಿಗೆ ಈ ರೀತಿಯ ಬದುಕು ನಾನಾಕಾರಣಗಳಿಂದ ಅನಿವಾರ್ಯವಾಗಿದ್ದರೆ, ಮತ್ತೆ ಹಲವರಿಗೆ ದುಡ್ಡು ಖರ್ಚು ಮಾಡುವವರು ಇರುವಾಗ ನಮಗ್ಯಾಕೆ ತೊಂದರೆ ಎನ್ನುವ ಮನೋಭಾವ.

ಅದೇನೇ ಇದ್ದರೂ, ಪರಿಸ್ಥಿತಿ ಹೇಗೆ ಇರುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಜೀವನ ಚಕ್ರ ಯಾವಾಗ ಬೇಕಾದರೂ ಬುಡಮೇಲು ಆಗಬಹುದು. ಬೇರೊಬ್ಬರನ್ನು ಅವಲಂಬಿಸಿ ಬದುಕಿ ತಪ್ಪುಮಾಡಿಬಿಟ್ಟೆ ಎನ್ನುವ ಪಶ್ಚಾತ್ತಾಪ ಬಂದರೂ ಬರಬಹುದು ಎನ್ನುತ್ತಲೇ ನಟಿ ಸುಧಾರಾಣಿ ಹೆಣ್ಣು ಹೇಗಿರಬೇಕು ಎನ್ನುವ ಬಗ್ಗೆ ಮಾತನಾಡಿದ್ದಾರೆ. ರ್ಯಾಪಿಡ್​ ರಶ್ಮಿ ಷೋನಲ್ಲಿ ಅವರು ಜೀವನದ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಹೆಣ್ಣುಮಕ್ಕಳಿಗೆ ಕೆಲವೊಂದು ಕಿವಿಮಾತುಗಳನ್ನೂ ಹೇಳಿದ್ದಾರೆ.  ಅಂದಹಾಗೆ ಸುಧಾರಾಣಿ ಅವರಿಗೆ ಇಂದು (ಆಗಸ್ಟ್​ 14) 51ನೇ ಹುಟ್ಟುಹಬ್ಬದ ಸಂಭ್ರಮ.

20 ವಯಸ್ಸಿಗೆ ನಟನೆ ಸಾಕು ಅಂದ್ರು ಅಮ್ಮ... ಮದುವೆ ಮಾಡಿದ್ರು... ಆದ್ರೆ... ನೋವಿನ ದಿನಗಳ ನೆನೆದ ಸುಧಾರಾಣಿ

ಸುಧಾರಾಣಿಯವರ ಮಾತಲ್ಲೇ ಹೇಳುವುದಾದರೆ; ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಂತುಕೊಳ್ಳಬೇಕು. ಯಾವಾಗಲೂ ಒಂದು ಆದಾಯದ ಮೂಲ ಇಟ್ಟುಕೊಳ್ಳಲೇಬೇಕು. ಜಾಣತನ ಇರಬೇಕು. ಯೇ ಬಿಟ್ಟಾಕು, ನನ್ನ ಅಪ್ಪ ಮಾಡ್ತಾನೆ, ನನ್ನ ಗಂಡ ನೋಡ್ಕೋತಾನೆ, ನನ್ನ ಅಣ್ಣ ಮಾಡ್ತಾನೆ... ಎನ್ನುವ ಮನಸ್ಥಿತಿ ಹೆಣ್ಣುಮಕ್ಕಳಿಗೆ ಇರಲೇಬಾರದು. ಹೆಣ್ಣುಮಕ್ಕಳು ತಮ್ಮ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳಬೇಕು, ಸ್ವಾವಲಂಬಿಯಾಗಿ ಬದುಕಬೇಕು. ಇದು must and should. ಕೆಲವೊಮ್ಮೆ ಸ್ವಾವಲಂಬಿಯಾಗುವ ಅವಶ್ಯಕತೆ ಇಲ್ಲ ಎನ್ನಿಸಬಹುದು. ಆದರೆ ಅದು ಆನಂತರದ ವಿಚಾರ. ಏನೇ ಇರಲಿ ಮೊದಲು ಹೆಣ್ಣು ತನ್ನ ಕಾಲ ಮೇಲೆ ನಿಂತುಕೊಳ್ಳುವುದನ್ನು ಕಲಿಯುವುದು ಅನಿವಾರ್ಯ ಎಂದಿದ್ದಾರೆ ಸುಧಾರಾಣಿ. ಮುಂದೆ ಲೈಫ್​ನಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ. ಆಗ ಕಾಲ ಮಿಂಚಿ ಹೋಗಬಾರದು. ನಾನು ಯಾಕೆ ಬೇರೆಯವರ ಮೇಲೆ ಅವಲಂಬಿಯಾಗಬೇಕು ಎನ್ನುವುದು ಒಂದಲ್ಲ ಒಂದು ದಿನ ತಲೆಯಲ್ಲಿ ಬರುತ್ತದೆ. ಆಗ ಏನೂ ಮಾಡಲು ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ಪ್ರತಿಯೊಬ್ಬ ಹೆಣ್ಣು ತನ್ನ ಜವಾಬ್ದಾರಿ ತಾನು ನೋಡಿಕೊಳ್ಳುವುದನ್ನು ಕಲಿಯಬೇಕು ಎನ್ನುವುದು ಅವರ ಮಾತು.

ಇನ್ನು ಸುಧಾರಾಣಿ ಕುರಿತು ಹೇಳುವುದಾದರೆ,  ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ ಆಳಿದ ಬ್ಯೂಟಿ ಕ್ವೀನ್​ ಇವರು.  ನಡುವೆ ಬ್ರೇಕ್​ ಪಡೆದು ಮತ್ತೆ  ಕಮ್​ಬ್ಯಾಕ್​  ಮಾಡಿ ಈಗಲೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.  ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. ನಟಿ ಸುಧಾರಾಣಿ ಅವರಿಗೆ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಾಕಷ್ಟು ಬೇಡಿಕೆ ಇದೆ. ಈ ಮೊದಲು ಹೀರೋಯಿನ್ ಆಗಿ ಮಿಂಚುತ್ತಿದ್ದ ಅವರು ಈಗ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಯುವ’ ಸಿನಿಮಾದಲ್ಲಿ ಕಥಾ ನಾಯಕನ ತಾಯಿ ಪಾತ್ರ ಮಾಡಿದ್ದರು. ಅದೇ ರೀತಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದರೆ ಸುಧಾರಾಣಿಯವರ ಬದುಕು ಕೂಡ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಮೊದಲ ಮದುವೆಯಿಂದ ಚಿತ್ರಹಿಂಸೆ ಅನುಭವಿಸಿರೋ ನಟಿ, ಈಗ ಎರಡನೆಯ ಪತಿ ಮತ್ತು ಮಗಳ ಜೊತೆ ಸುಂದರ ಸಂಸಾರ ನಡೆಸುತ್ತಿದ್ದಾರೆ. 

ಶ್ರೀರಸ್ತು ಶುಭಮಸ್ತು ಪೂರ್ಣಿ- ಅಮೃತಧಾರೆ ಜೀವಾ ಈ ಪರಿ ರೊಮಾನ್ಸಾ? ಫ್ಯಾನ್ಸ್​ಗೆ ಮಗುವಿನದ್ದೇ ಚಿಂತೆ!

Latest Videos
Follow Us:
Download App:
  • android
  • ios