Asianet Suvarna News Asianet Suvarna News

ಪಾರ್ವತಮ್ಮನವ್ರು ಹಾಗೆ ಯಾಕೆ ಮಾಡಿದ್ರಂತ ಕೊನೆಗೂ ಗೊತ್ತಾಗ್ಲೇ ಇಲ್ಲ! ಸುಧಾರಾಣಿ ಹೇಳಿದ್ದೇನು?

ಪಾರ್ವತಮ್ಮನವ್ರು ಹಾಗೆ ಯಾಕೆ ಮಾಡಿದ್ರಂತ ಕೊನೆಗೂ ಗೊತ್ತಾಗ್ಲೇ ಇಲ್ಲ! ಸುಧಾರಾಣಿ ಮನದಾಳದ ಮಾತೇನು?
 

Parvathamma never answered about Ananda film selection says Sudharani in Rapid Rashmi show
Author
First Published Aug 14, 2024, 5:12 PM IST | Last Updated Aug 19, 2024, 9:15 PM IST

ಕನ್ನಡ ಚಿತ್ರೋದ್ಯಮಕ್ಕೆ ಆಧಾರಸ್ತಂಭವಾಗಿದ್ದ ಪಾರ್ವತಮ್ಮ ರಾಜ್​ಕುಮಾರ್​ ಅವರು ಅಗಲಿ ಏಳು ವರ್ಷಗಳೇ ಕಳೆದು ಹೋದವು.  ಹಲವಾರು ಚಿತ್ರಗಳನ್ನು ನಿರ್ಮಿಸುವ ಮೂಲಕ ಅವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವುದು ಮಾತ್ರವಲ್ಲದೇ,  ಹಲವಾರು ಚಿತ್ರ ನಟಿಯರನ್ನು ಚಿತ್ರರಂಗಕ್ಕೆ ಗುರುತಿಸಿದ್ದಾರೆ.  ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್​ಪ್ರೈಸಸ್ ಮೂಲಕ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ ಪಾರ್ವತಮ್ಮ ಅವರು ನಟರನ್ನು ಮಾತ್ರವಲ್ಲದೇ  ಗಾಯಕರು ಹಾಗೂ ತಂತ್ರಜ್ಞರನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಹೀಗೆ ಇವರೇ ಚಿತ್ರರಂಗಕ್ಕೆ ಪರಿಚಯಿಸಿರುವ ನಟಿ ಜಯಶ್ರೀ. ಬಹುಶಃ ಜಯಶ್ರೀ ಎಂದರೆ ಯಾರು ಎಂದು ತಿಳಿಯಲಿಕ್ಕಿಲ್ಲ. ಅವರೇ ಇಂದು ಸುಧಾರಾಣಿ ಎಂದು ಫೇಮಸ್​ ಆಗಿರೋ ಸ್ಯಾಂಡಲ್​ವುಡ್​ ಎವರ್​ಗ್ರೀನ್​ ತಾರೆ. ಸುಧಾರಾಣಿ ಅವರಿಗೆ 51ನೇ ಜನ್ಮದಿನ ಇಂದು. 1973ರ ಆಗಸ್ಟ್​ 14ರಂದು ಹುಟ್ಟಿರೋ ನಟಿ, ಇಂದು ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಇದೇ ಸಮಯದಲ್ಲಿ ಇವರು ನಿರೂಪಕಿ ರ‍್ಯಾಪಿಡ್ ರಶ್ಮಿ ಅವರ ಯೂಟ್ಯೂಬ್​ ಚಾನೆಲ್​ಗೆ ಅವರು  ನೀಡಿರುವ ಸಂದರ್ಶನದಲ್ಲಿ ಪಾರ್ವತಮ್ಮನವರನ್ನು ನೆನಪಿಸಿಕೊಂಡಿದ್ದಾರೆ. 
 
ಸುಧಾರಾಣಿ ಅವರನ್ನು ಜಯಶ್ರೀಯಿಂದ ಸುಧಾರಾಣಿಯನ್ನಾಗಿ ಹೆಸರು ಬದಲಿಸಿದವರು ಪಾರ್ವತಮ್ಮನವರು. ಜಯಶ್ರೀ ಹೆಸರಿನಿಂದ ಕೆಲ ಚಿತ್ರಗಳಲ್ಲಿ ಬಾಲನಟಿಯಾಗಿ ಸುಧಾರಾಣಿ ನಟಿಸಿದ್ದರು.  1986ರಲ್ಲಿ ತೆರೆಕಂಡ 'ಆನಂದ್' ಚಿತ್ರದಲ್ಲಿ  ಶಿವರಾಜ್‌ಕುಮಾರ್ ಜೊತೆ ನಟಿಸಿದರು. ವಿಶೇಷವೆಂದರೆ ಇಬ್ಬರಿಗೂ ಇದು ಮೊದಲ ಸಿನಿಮಾ. ಆನಂದ್ ಬಳಿಕ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಸುಧಾರಾಣಿ ಹಾಗೂ ಶಿವರಾಜ್‌ಕುಮಾರ್ ಅಂದಿನ ಕಾಲದ ಟ್ರೆಡಿಂಗ್ ಅನ್‌ ಸ್ಕ್ರೀನ್ ಜೋಡಿಯಾಗಿ ಮಿಂಚಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ಬಗ್ಗೆ ಸುಧಾರಾಣಿ ಹೇಳಿಕೊಂಡಿದ್ದಾರೆ. 

ಮುಂದೆ ಪಶ್ಚಾತ್ತಾಪ ಪಡೋ ಬದ್ಲು ಇಂದು ಹುಡುಗಿಯರು ಹೇಗಿರಬೇಕು? ಸುಧಾರಾಣಿ ಅನುಭವದ ಮಾತು ಕೇಳಿ...

ನನಗೆ ಇಬ್ಬರು ಅಮ್ಮಂದಿರು. ಪಾರ್ವತಮ್ಮ ನನ್ನ ಅಮ್ಮ. ಇಬ್ಬರೂ ಅಮೇಜಿಂಗ್​. ಪಾರ್ವತಮ್ಮ ಬಗ್ಗೆ ಏನು ಹೇಳಿದರೂ ಕಡಿಮೆನೇ. ಅವರ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವಳು. ಅವರು ಏನೇನು ಅಚೀವ್​ಮೆಂಟ್​  ಮಾಡಿದ್ದಾರೆ ಎನ್ನೋ ಬಗ್ಗೆ ಉನ್ನತ ಅಧ್ಯಯನದಲ್ಲಿ ಪಾಠನೇ ಮಾಡಬೇಕು ಎನ್ನಿಸುತ್ತದೆ, ಅವರ ಬ್ಯಾಕ್​ಗ್ರೌಂಡ್​ ಅನ್ನು ವಿದ್ಯಾರ್ಥಿಗಳು ಓದಬೇಕು ಎಂದಿದ್ದಾರೆ. ಒಬ್ಬ ಲೇಡಿ, ಯಾವುದೇ ಹಿನ್ನೆಲೆ ಇಲ್ಲದೆಯೇ ಕನ್ನಡ ಇಂಡಸ್ಟ್ರಿಗೆ ಕೊಟ್ಟ ಕೊಡುಗೆ ಅಪಾರ  ಎಂದಿದ್ದಾರೆ ಸುಧಾರಾಣಿ.  ಆದರೆ ಕೊನೆಯವರೆಗೂ ಅವರು ಒಂದು ಸೀಕ್ರೇಟ್​ ಉಳಿಸಿಕೊಂಡು ಬಿಟ್ಟರು. ಇವತ್ತಿಗೂ ಅದೇನು ಎನ್ನುವುದು ನನಗೆ ತಿಳಿಯದೇ ಹೋಯಿತು ಎಂದರು. ಅಷ್ಟಕ್ಕೂ ಆ ಸೀಕ್ರೇಟ್​ ಏನೆಂದರೆ, ಸುಧಾರಾಣಿ ಅವರನ್ನು ಆನಂದ್​ ಚಿತ್ರಕ್ಕೆ ಪರಿಚಯಿಸಿದವರು ಪಾರ್ವತಮ್ಮ. ಆದರೆ ಈ ಚಿತ್ರಕ್ಕೆ ನನ್ನನ್ನು ಯಾಕೆ ಆಯ್ಕೆ ಮಾಡಿದ್ರಿ ಎಂದು ಪದೇ ಪದೇ ಕೇಳುತ್ತಿದ್ದೆ. ಕೊನೆಯವರೆಗೂ ಅದಕ್ಕೆ ಉತ್ತರ ಅವರು ಹೇಳಲೇ ಇಲ್ಲ. ಯೋ ಹೋಗೆ ಸುಮ್ನೆ, ಇವಳೊಬ್ಬಳು. ಪ್ರತಿ ಸಲವೂ ಅದನ್ನೇ ಕೇಳ್ತಾಳೆ ಅಂತನೇ ಯಾವಾಗ್ಲೂ ಬಯ್ಯೋರು ಎಂದಿದ್ದಾರೆ. ಆದ್ದರಿಂದ ಈ ಗುಟ್ಟು ಗುಟ್ಟಾಗಿಯೇ ಉಳಿಯಿತು ಎಂದಿದ್ದಾರೆ ಸುಧಾರಾಣಿ. 

ಇನ್ನು ಸುಧಾರಾಣಿ ಕುರಿತು ಹೇಳುವುದಾದರೆ,  ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ ಆಳಿದ ಬ್ಯೂಟಿ ಕ್ವೀನ್​ ಇವರು.  ನಡುವೆ ಬ್ರೇಕ್​ ಪಡೆದು ಮತ್ತೆ  ಕಮ್​ಬ್ಯಾಕ್​  ಮಾಡಿ ಈಗಲೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.  ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. ನಟಿ ಸುಧಾರಾಣಿ ಅವರಿಗೆ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಾಕಷ್ಟು ಬೇಡಿಕೆ ಇದೆ. ಈ ಮೊದಲು ಹೀರೋಯಿನ್ ಆಗಿ ಮಿಂಚುತ್ತಿದ್ದ ಅವರು ಈಗ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಯುವ’ ಸಿನಿಮಾದಲ್ಲಿ ಕಥಾ ನಾಯಕನ ತಾಯಿ ಪಾತ್ರ ಮಾಡಿದ್ದರು. ಅದೇ ರೀತಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದರೆ ಸುಧಾರಾಣಿಯವರ ಬದುಕು ಕೂಡ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಮೊದಲ ಮದುವೆಯಿಂದ ಚಿತ್ರಹಿಂಸೆ ಅನುಭವಿಸಿರೋ ನಟಿ, ಈಗ ಎರಡನೆಯ ಪತಿ ಮತ್ತು ಮಗಳ ಜೊತೆ ಸುಂದರ ಸಂಸಾರ ನಡೆಸುತ್ತಿದ್ದಾರೆ. 

20 ವಯಸ್ಸಿಗೆ ನಟನೆ ಸಾಕು ಅಂದ್ರು ಅಮ್ಮ... ಮದುವೆ ಮಾಡಿದ್ರು... ಆದ್ರೆ... ನೋವಿನ ದಿನಗಳ ನೆನೆದ ಸುಧಾರಾಣಿ

Latest Videos
Follow Us:
Download App:
  • android
  • ios