Su From So Movie Records: ರಾಜ್‌ ಬಿ ಶೆಟ್ಟಿ, ಜೆಪಿ ತುಮಿನಾಡ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದ ʼಸು ಫ್ರಂ ಸೋʼ ಸಿನಿಮಾವು ಒಂದಷ್ಟು ಅಲಿಖಿತ ನಿಯಮಗಳನ್ನು ಮುರಿದಿದೆ. 

ಕೆಲವು ತಿಂಗಳುಗಳಿಂದ ಸೊರಗಿದ್ದ ಕನ್ನಡ ಚಿತ್ರರಂಗಕ್ಕೆ 'ಸು ಫ್ರಂ ಸೋ' ಸಿನಿಮಾ ( Su From So Movie ) ಉಸಿರು ಕೊಟ್ಟು ಎದ್ದು ನಿಲ್ಲುವಂತೆ ಮಾಡಿದೆ. ಈ ಮೂಲಕ ಕಂಟೆಂಟ್‌ ಕಿಂಗ್‌ ಎಂದು ಸಾಬೀತುಪಡಿಸಿದೆ. ಈ ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎಂದು ರಾಜ್‌ ಬಿ ಶೆಟ್ಟಿ ಮೊದಲು ಹೇಳಿರಲಿಲ್ಲ. ಇಷ್ಟು ವರ್ಷಗಳ ಕಾಲ ತುಳು ಚಿತ್ರರಂಗದಲ್ಲಿ ಕೃಷಿ ಮಾಡಿದ್ದ ಜೆಪಿ ತುಮಿನಾಡ್‌ ಅವರು ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನ ಮಾಡಿ ಅದೃಷ್ಟಪರೀಕ್ಷೆಗೆ ಇಳಿದಿದ್ದರು. ಒಟ್ಟಿನಲ್ಲಿ ಹೊಸಬರೇ ತುಂಬಿರೋ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸತನ ಕೊಟ್ಟಿದೆ. ಒಂದು ಸಿನಿಮಾ ಗೆಲ್ಲಲು ಯಾವೆಲ್ಲ ವಿಷಯಗಳು ಮುಖ್ಯ ಆಗುತ್ತವೆ ಎಂದು ಅಲಿಖಿತ ಮಾತುಗಳು ಕೇಳಿಬರುತ್ತಿದ್ದೆವೋ ಆ ಮಾತುಗಳನ್ನು ಈ ಸಿನಿಮಾ ಬ್ರೇಕ್‌ ಮಾಡಿದೆ. ಹಾಗಿದ್ರೆ ಈ ಸಿನಿಮಾ ಮುರಿದ ಅಲಿಖಿತ ನಿಯಮಗಳು ಯಾವುವು?

  • ಸಿನಿಮಾ ಗೆಲ್ಲಲು ಸೂಪರ್ ಸ್ಟಾರ್ ಬೇಕು! ಇಲ್ಲದಿದ್ದರೆ ಸಿನಿಮಾ ಗೆಲ್ಲೋದಿಲ್ಲ.
  • ಕಡಿಮೆ ಬಜೆಟ್ ಸಿನಿಮಾಗಳೆಲ್ಲವೂ ಓಡೋದಿಲ್ಲ. ಈಗ ಏನಿದ್ರೂ 50 ಕೋಟಿ ರೂಪಾಯಿ ಬಜೆಟ್‌ ಬೇಕು.
  • ಇಂದು ಮಲಯಾಳಂ, ತಮಿಳು ಸಿನಿಮಾಗಳೇ ಹಿಟ್‌ ಆಗುತ್ತಿದ್ದು ಕನ್ನಡ ಸಿನಿಮಾಗಳಿಗೆ ಬೇಡಿಕೆ ಇಲ್ಲ.
  • ಇಂದು OTT ಬಂದಿದೆ. ಥಿಯೇಟರ್‌ಗೆ ಹೋಗಿ ಸಿನಿಮಾ ಟಿಕೆಟ್‌, ಪಾರ್ಕಿಂಗ್‌, ತಿಂಡಿ ಎಂದು ಖರ್ಚು ಮಾಡೋ ಬದಲು ಮನೆಯಲ್ಲಿ ಆರಾಮಾಗಿ ಒಟಿಟಿಯಲ್ಲಿ ಸಿನಿಮಾ ನೋಡ್ತಾರೆ.
  • ದೊಡ್ಡ ದೊಡ್ಡ ನಿರ್ದೇಶಕರು, ಬ್ಯಾನರ್‌ಗಳು ಸಿನಿಮಾ ನಿರ್ಮಾಣ ಮಾಡಿದರೆ ನೋಡ್ತಾರೆ.
  • ಕಾಂಟ್ರವರ್ಸಿ ಇದ್ದರೆ ಜನರು ಸಿನಿಮಾದತ್ತ ಮುಖ ಮಾಡ್ತಾರೆ.
  • ಹೀರೋ ಸಖತ್‌ ಆಗಿರಬೇಕು. ಆ ಹೀರೋ ಡ್ಯಾನ್ಸ್‌, ಫೈಟ್‌ ಎಲ್ಲವನ್ನು ಚೆನ್ನಾಗಿ ಮಾಡಬೇಕು.
  • ಹೀರೋಯಿನ್‌ ಕೂಡ Glamourous ಆಗಿರಬೇಕು.

  • ಸಿನಿಮಾದ ಹೆಸರು Catchy ಆಗಿರಬೇಕು
  • ಸಿನಿಮಾಗಳನ್ನು ಸ್ಟಾರ್‌ ನಟರು ಪ್ರಮೋಟ್ ಮಾಡಿದ್ರೆ, ಚಿತ್ರರಂಗ ಬೆಂಬಲ ಕೊಟ್ರೆ ಮಾತ್ರ ಸಿನಿಮಾ ಹಿಟ್ ಆಗುತ್ತದೆ.
  • ಸಿಂಗಲ್ ಸ್ಕ್ರೀನ್‌ಗಳು ಈಗಾಗಲೇ ಮುಚ್ಚಿವೆ, ಅಲ್ಲಿ ಈಗ ಸಿನಿಮಾ ನೋಡೋರು ಕಡಿಮೆ,
  • ಐಟಂ ಸಾಂಗ್ ಇರಬೇಕು, ವಿದೇಶದಲ್ಲಿ ಶೂಟಿಂಗ್‌ ಆಗಬೇಕು, ರೊಮ್ಯಾಂಟಿಕ್‌ ಕಿಸ್ಸಿಂಗ್‌ ದೃಶದಯ ಇರಬೇಕು.
  • ಸಿನಿಮಾದಲ್ಲಿ ಬಾಲಿವುಡ್, ಕಾಲಿವುಡ್‌ ಅಥವಾ ಬೇರೆ ಭಾಷೆಯ ಕಲಾವಿದರು ಇರಬೇಕು.
  • ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಬೇಕು.

ಈ ಸಿನಿಮಾದಲ್ಲಿ ಗುರುಜಿ ಪಾತ್ರದಲ್ಲಿ ರಾಜ್‌ ಬಿ ಶೆಟ್ಟಿ, ಭಾನು ಪಾತ್ರದಲ್ಲಿ ಸಂಧ್ಯಾ ಅರಕೆರೆ, ರವಿ ಅಣ್ಣ ಪಾತ್ರದಲ್ಲಿ ಶನೀಲ್‌ ಗೌತಮ್‌, ದಿಲೀಪ್‌ ರೈ, ಜೆಪಿ ತುಮಿನಾಡ್‌ ಅವರು ನಟಿಸಿದ್ದಾರೆ. ಪಕ್ಕಾ ಕಾಮಿಡಿ ಜಾನರ್‌ ಆದರೂ ಕೂಡ ಇಲ್ಲಿ ಒಂದಿಷ್ಟು ಭಾವನಾತ್ಮಕ ವಿಷಯಗಳು ಈ ಸಿನಿಮಾದ ತೂಕವನ್ನು ಹೆಚ್ಚಿಸುತ್ತದೆ. ಕರ್ನಾಟಕ, ಕೇರಳದಲ್ಲಿ ಕೂಡ ಭರ್ಜರಿ ಕಲೆಕ್ಷನ್ಸ್‌ ಮಾಡಿರೋ ಈ ಸಿನಿಮಾ ಬಹುತೇಕ ವೀಕ್‌ ಡೇಸ್‌ಗಳಲ್ಲಿ ಕೂಡ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ ಈ ಸಿನಿಮಾದ ಹಾಡುಗಳು ಕೂಡ ಹಿಟ್‌ ಆಗಿವೆ.