- Home
- Entertainment
- Sandalwood
- Su From So Movie: ರವಿ ಅಣ್ಣನಿಗೆ ರಿಯಲ್ ಮದುವೆ ಆಗಿರೋ ವಿಚಾರ ಅನೇಕರಿಗೆ ಗೊತ್ತಿಲ್ಲ; ಶನೀಲ್ ಗೌತಮ್ Photos
Su From So Movie: ರವಿ ಅಣ್ಣನಿಗೆ ರಿಯಲ್ ಮದುವೆ ಆಗಿರೋ ವಿಚಾರ ಅನೇಕರಿಗೆ ಗೊತ್ತಿಲ್ಲ; ಶನೀಲ್ ಗೌತಮ್ Photos
'ಸು ಫ್ರಂ ಸೋ' ಸಿನಿಮಾದ ರವಿ ಅಣ್ಣನ ಪಾತ್ರವನ್ನು ಅನೇಕರು ಇಷ್ಟಪಟ್ದಿದ್ದಾರೆ. ಇಡೀ ಸಿನಿಮಾವನ್ನು ರವಿಯಣ್ಣ ಅರ್ಥಾತ್ ಶನೀಲ್ ಅವರು ಆವರಿಸಿಕೊಂಡಿರುವ ಪರಿ ತುಂಬ ಚೆನ್ನಾಗಿದೆ. ರವಿ ಅಣ್ಣನ ಪಾತ್ರಧಾರಿ ಶನೀಲ್ ಗೌತಮ್ ಮದುವೆ ಫೋಟೋಗಳಿವು!

ಹಳ್ಳಿ ಭಾಗದಲ್ಲಿ ಎಲ್ಲ ಊರುಗಳಲ್ಲೂ ರವಿಯಣ್ಣನಂತಹ ಪಾತ್ರ ಇದ್ದೇ ಇರುತ್ತದೆ. ಊರಿನಲ್ಲಿ ಏನೇ ಆದರೂ ಬಂದು ಸಹಾಯ ಮಾಡುವ ಮನೋಭಾವ ಇರುವುದು. ಶನೀಲ್ ವೈಯಕ್ತಿಕ ಜೀವನದ ಬಗ್ಗೆ ಅನೇಕರಿಗೆ ಗೊತ್ತಿಲ್ಲ.
2019ರಲ್ಲಿಯೇ ಈ ರವಿಯಣ್ಣನ ಕ್ಯಾರೆಕ್ಟರ್ ಅನ್ನು ನೀವೇ ಮಾಡಬೇಕೆಂದು ನಿರ್ದೇಶಕ ಜೆಪಿ ತುಮಿನಾಡ್ ಅವರು ಶನೀಲ್ ಅವರಿಗೆ ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ಸಿನಿಮಾದಲ್ಲಿ ಬರುವ ಜೋಕ್‌ಗಳನ್ನು ಪದೇ ಪದೇ ಹೇಳಿದಾಗ ಶನೀಲ್ ನಕ್ಕಿದ್ದರು.
ಈ ಸಿನಿಮಾ ರೆಡಿ ಆಗುವುದು ಸ್ವಲ್ಪ ತಡವಾದಾಗ ಶನೀಲ್ ಅವರಿಗೆ ನನಗೆ ಈ ಪಾತ್ರ ಸಿಗುತ್ತದೆಯಾ ಎಂಬ ಅನುಮಾನವೂ ಕಾಡಿತ್ತು. ಒಟ್ಟೂ ಕಥೆ ರೆಡಿಯಾಗಿ ಆರು ವರ್ಷದ ಮೇಲೆ ಸುಫ್ರಂಸೋ ಸಿನಿಮಾ ರೆಡಿಯಾಯ್ತು, ರಿಲೀಸ್ ಆಯ್ತು. ಈ ಸಿನಿಮಾದಲ್ಲಿ ರವಿ ಅಣ್ಣ ದೊಡ್ಡ ಹೀರೋ ಅಲ್ಲ, ಅವನಿಗೆ ಸಿಕ್ಸ್ ಪ್ಯಾಕ್ ಇಲ್ಲ, ಆಡಂಬರದ ಬಿಲ್ಡಪ್ ಡೈಲಾಗ್ ಕೂಡ ಹೊಡೆಯೋದಿಲ್ಲ, ಇವನ ಏಟಿಗೆ ರೌಡಿಗಳೆಲ್ಲರೂ ದಿಕ್ಕಾಪಾಲಾಗಿ ಬೀಳೋದು ಕೂಡ ಇಲ್ಲ. ಅಲ್ಲಿ ಅವನಿಗೂ ಭಯವಾಗುತ್ತದೆ, ಅನುಮಾನಗಳು ಕಾಡುತ್ತವೆ, ಬೇರೆಯವರ ಜೊತೆ ಹೊಡೆದಾಟ ಮಾಡುವಾಗ ಪೆಟ್ಟಾಗುತ್ತದೆ, ಹುಡುಗಿ ನೋಡಿದಾಗ ನಾಚಿಕೆ ಆಗುತ್ತದೆ, ವಯಸ್ಸಾದ್ರೂ ಮದುವೆ ಆಗಿಲ್ಲ ಎಂದು ಮುಜುಗರ ಕೂಡ ಆಗುತ್ತದೆ.
ಪೇಟೆಗಳಲ್ಲಿ ಬದುಕುವ ಕೆಲ ಪ್ರೇಕ್ಷಕರು ಸದಾ ಊರನ್ನು ಮಿಸ್ ಮಾಡಿಕೊಳ್ತಾರೆ. ಅಷ್ಟೇ ಅಲ್ಲದೆ ರವಿ ಅಣ್ಣನ ಥರ ಇರುವವರನ್ನು ಮಿಸ್ ಮಾಡಿಕೊಳ್ತಾರೆ. ನಮಗೆ ಗೊತ್ತಾಗದಂತೆ ನಮ್ಮ ಊರೊಳಗೆ ಕರ್ಕೊಂಡು ಹೋಗಿ, ನಮ್ಮನ್ನ ಅವರಲ್ಲೊಬ್ಬರಂತೆ ಮಾಡಿದ್ದು ನಿರ್ದೇಶಕರ ಜಾಣ್ಮೆ ಎನ್ನಬಹುದು.
ಶನೀಲ್ ಹಾಗೂ ನೇಹಾ ಮದುವೆಯಾಗಿ ಒಂದು ವರ್ಷವಾಗಿದೆ. ಈ ಬಗ್ಗೆ ನೇಹಾ ಅವರು ಕಳೆದ ಮೇ ತಿಂಗಳಿನಲ್ಲಿ “ಮದುವೆಯಾಗಿ ವರ್ಷ ಪೂರ್ತಿಯಾಗಿದೆ. ನಾವು ಭೇಟಿಯಾಗಿದ್ದು ನಿನ್ನೆಯಷ್ಟೇ ಅಂತ ಅನಿಸುತ್ತಿದೆ, ನಿನ್ನೆಯಷ್ಟೇ ನಾವು ಗಂಡ ಹೆಂಡತಿಯಾದೆವು ಎಂಬ ಭಾವನೆಯೂ ಇದೆ. ಕಳೆದ ವರ್ಷವು ಪ್ರೀತಿ, ತಾಳ್ಮೆ ಮತ್ತು ದೂರದ ದಾಂಪತ್ಯ ಜೀವನದ ಸವಾಲುಗಳಿಂದ ತುಂಬಿದ ಪ್ರಯಾಣವಾಗಿತ್ತು. ಕಿಲೋಮೀಟರ್‌ಗಳು ನಮ್ಮನ್ನು ಬೇರ್ಪಡಿಸಿದ್ದರೂ, ಒಮ್ಮೆಯೂ ನಾನು ನಿಮ್ಮಿಂದ ದೂರವಾಗಿರಲಿಲ್ಲ” ಎಂದು ಹೇಳಿದ್ದಾರೆ.
“ನೀವು ನನ್ನ ನಿರಂತರ ಪ್ರೀತಿ, ಶಕ್ತಿ ಮತ್ತು ಬೆಂಬಲದ ಮೂಲವಾಗಿದ್ದೀರಿ, ಯಾವಾಗಲೂ ನನ್ನನ್ನು ಪ್ರೀತಿಸುವಂತೆ ಮತ್ತು ಎಂದಿಗೂ ಒಂಟಿಯಾಗಿಲ್ಲ ಎಂದು ಭಾವಿಸುವ ಮಾರ್ಗಗಳನ್ನು ಕಂಡುಕೊಂಡಿದ್ದೀರಿ” ಎಂದು ನೇಹಾ ಶನೀಲ್ ಹೇಳಿದ್ದಾರೆ.
“ನೀವು ನನಗಾಗಿ ಮಾಡಿದ ಮತ್ತು ಮಾಡುತ್ತಿರುವ ಎಲ್ಲದಕ್ಕೂ ನಾನು ನಿಮಗೆ ಸಾಕಷ್ಟು ಧನ್ಯವಾದ ಹೇಳಲು ಸಾಧ್ಯವಿಲ್ಲ. ಸಣ್ಣ ವಿಷಯಗಳಿಂದ ಹಿಡಿದು ದೊಡ್ಡ ತ್ಯಾಗಗಳವರೆಗೆ, ನೀವು ಈ ಪ್ರಯಾಣವನ್ನು ತುಂಬಾ ಸುಂದರಗೊಳಿಸುತ್ತೀರಿ. ನೀನಿಲ್ಲದೆ ನಾನು ನಿಜವಾಗಿಯೂ ಅಪೂರ್ಣ” ಎಂದು ನೇಹಾ ಶನೀಲ್ ಹೇಳಿದ್ದಾರೆ.
ಪತ್ನಿಯ ಪೋಸ್ಟ್‌ಗೆ ಶನೀಲ್ ಗೌತಮ್ ಕೂಡ ಶುಭಾಶಯ ತಿಳಿಸಿದ್ದು, “ಒಂದು ವರ್ಷ ಆಗಿದ್ದು ಗೊತ್ತಾಗಲಿಲ್ಲ. ನಿನ್ನ ತ್ಯಾಗ ದೊಡ್ಡದು” ಎಂದು ಹೇಳಿದ್ದಾರೆ.
ಶನೀಲ್ ಗೌತಮ್ ಹಾಗೂ ನೇಹಾ ಅವರು ಬಹಳ ಅದ್ದೂರಿಯಾಗಿ ಮದುವೆ ಆಗಿದ್ದರು. ನಿಶ್ಚಿತಾರ್ಥ, ಆರತಕ್ಷತೆ, ಮದುವೆ ಎಂದು ಬಹಳ ಗ್ರ್ಯಾಂಡ್ ಆಗಿ ಮದುವೆ ನಡೆದಿತ್ತು.
ಅಂದಹಾಗೆ ಈ ಮದುವೆಗೆ ನಟ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿ ಕೂಡ ಬಂದು ಶುಭ ಹಾರೈಸಿದ್ದರು. ಅಂದಹಾಗೆ ʼಕಾಂತಾರʼ ಸಿನಿಮಾದಲ್ಲಿ ಶನೀಲ್ ನಟಿಸಿದ್ದರು.
ಮದುವೆ ದಿನ ನೇಹಾ ಅವರು ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವ ಕ್ಷಣವಿದು. ಪ್ರತಿ ಹೆಣ್ಣಿಗೂ, ಹೆಣ್ಣಿನ ಮನೆಯವರಿಗೂ ಇದು ಬಹಳ ಭಾವನಾತ್ಮಕವಾದ ಕ್ಷಣ ಎನ್ನಬಹುದು.