2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಜ್ವಲ್ ದೇವರಾಜ್ (ಜಂಟಲ್ಮ್ಯಾನ್) ಅತ್ಯುತ್ತಮ ನಟ, ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ) ಅತ್ಯುತ್ತಮ ನಟಿಯಾಗಿ ಆಯ್ಕೆಯಾಗಿದ್ದಾರೆ. ಪಿಂಕಿ ಎಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ವರ್ಣಪಟಲ ಮತ್ತು ಹರಿವ ನದಿಗೆ ಮೈಯೆಲ್ಲ ಕಾಲು ಕ್ರಮವಾಗಿ 2 ಮತ್ತು 3ನೇ ಅತ್ಯುತ್ತಮ ಚಿತ್ರಗಳಾಗಿವೆ. ಬಿ.ಎಸ್. ಲಿಂಗದೇವರು ನೇತೃತ್ವದ ಸಮಿತಿ ಪ್ರಶಸ್ತಿ ಆಯ್ಕೆ ಮಾಡಿದೆ.
2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. ಪ್ರಜ್ವಲ್ ದೇವರಾಜ್ ಮತ್ತು ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟ, ನಟಿಯಾಗಿ ಆಯ್ಕೆಯಾಗಿದ್ದಾರೆ. ಪ್ರಜ್ವಲ್ ಅವರಿಗೆ ಜಂಟಲ್ಮ್ಯಾನ್ ಚಿತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದರೆ, ಅಕ್ಷತಾ ಅವರಿಗೆ ಪಿಂಕಿ ಎಲ್ಲಿ ಚಿತ್ರಕ್ಕಾಗಿ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪಿಂಕಿ ಎಲ್ಲಿ ಚಿತ್ರ ಆಯ್ಕೆಯಾಗಿದೆ. ಈ ಚಿತ್ರವನ್ನು ಪೃಥ್ವಿ ಕೊಣನೂರು ನಿರ್ದೇಶನ ಮಾಡಿ, ಕೃಷ್ಣೇಗೌಡ ನಿರ್ಮಾಣ ಮಾಡಿದ್ದಾರೆ. ವರ್ಣಪಟಲ ಚಿತ್ರಕ್ಕೆ 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಹರಿವ ನದಿಗೆ ಮೈಯೆಲ್ಲ ಕಾಲು ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ಬಿ.ಎಸ್. ಲಿಂಗದೇವರು ನೇತೃತ್ವದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯು ಈ ಪ್ರಶಸ್ತಿಯನ್ನು ಘೋಷಿಸಿದೆ. ಅತ್ಯುತ್ತಮ ನಾಯಕ ಮತ್ತು ನಾಯಕಿಗೆ 20 ಸಾವಿರ ರೂಪಾಯಿಗಳ ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು.
ಪ್ರಶಸ್ತಿಯ ಕುರಿತು ಮಾತನಾಡಿರುವ ನಿರ್ದೇಶಕ ಬಿ. ಎಸ್. ಲಿಂಗದೇವರು 2020ರಲ್ಲಿ ಸೆನ್ಸಾರ್ ಪ್ರಮಾಣ ಪತ್ರ ಪಡೆದ 71 ಸಿನಿಮಾಗಳ ಪೈಕಿ 66 ಚಿತ್ರಗಳನ್ನು ಈ ಸಂದರ್ಭದಲ್ಲಿ ವೀಕ್ಷಿಸಲಾಗಿತ್ತು. ಉಳಿದ ಚಿತ್ರಗಳನ್ನು ಕೆಲವು ತಾಂತ್ರಿಕ ಕಾರಣಗಳಿಂದ ವೀಕ್ಷಣೆಯಿಂದ ಕೈಬಿಡಬೇಕಾಯಿತು ಎಂದಿದ್ದಾರೆ. ಇದೇ ವೇಳೆ, ಆಯ್ಕೆ ಪ್ರಕ್ರಿಯೆ ಹೇಗೆ ಮಾಡಿದ್ದೇವೆ ಎಂದು ತಿಳಿಸಿರುವ ಅವರು, ನಾವು ಈ ಎಲ್ಲಾ ಸಿನಿಮಾಗಳನ್ನು , ಕೇವಲ ಮನೋರಂಜನೆಯಾಗಿಯೇ ನೋಡಲಿಲ್ಲ. ಬದಲಿಗೆ ಸಮಾಜದ ಮೇಲೆ ಪ್ರಭಾವ ಬೀರುವ ಪ್ರಬಲ ಮಾಧ್ಯಮ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಗಮನ ಹರಿಸಿದ್ದೇವೆ. ಕಲೆ ಮತ್ತು ಉದ್ಯಮ ಎರಡನ್ನೂ ಪ್ರತಿನಿಧಿಸುವ ಕಲೋದ್ಯಮ ಎಂಬ ನಿಲುವಿನಿಂದ ಇವುಗಳನ್ನು ವಿಮರ್ಶಿಸಲಾಗಿದೆ. ವಿಭಿನ್ನ ವಸ್ತು, ನೂತನ ನಿರೂಪಣಾ ಶೈಲಿ, ಪಾತ್ರ ಪೋಷಣೆ, ತಂತ್ರಜ್ಞರ ಹೊಸ ಪ್ರಯತ್ನಗಳು, ಕಲಾವಿದರ ನೈಜ ಅಭಿನಯ... ಹೀಗೆ ಹಲವು ಅಂಶಗಳನ್ನು ಪರಿಗಣಿಸಿ, ನಂತರ ಸರ್ಕಾರಕ್ಕೆ ಪ್ರಶಸ್ತಿಗಳನ್ನು ಶಿಫಾರಸು ಮಾಡಲಾಗಿದೆ ಎಂದರು.
1.45ಕ್ಕೆ ಮೊಸ್ರನ್ನ ಬರದಿದ್ರೆ ಶೂಟಿಂಗ್ ನಿಲ್ಸಿ ಹೇಳ್ದೇ ಕೇಳ್ದೇ ಜ್ಯೂಲಿ ಲಕ್ಷ್ಮಿ ಕಾಣೆ: ನಟಿಯ ರೋಚಕ ಸ್ಟೋರಿ ಕೇಳಿ...
ಇನ್ನು ಪ್ರಶಸ್ತಿಯ ಡಿಟೇಲ್ಸ್ ಹೇಳುವುದಾದರೆ:
* ಅತ್ಯುತ್ತಮ ನಟ: ಪ್ರಜ್ವಲ್ ದೇವರಾಜ್ (ಜಂಟಲ್‌ಮನ್)
* ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ)
* ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ
* 2ನೇ ಅತ್ಯುತ್ತಮ ಚಿತ್ರ: ವರ್ಣಪಟಲ
* 3ನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು
* ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು
* ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್ ವಾಲ್ಸ್
* ಅತ್ಯುತ್ತಮ ಮಕ್ಕಳ ಚಿತ್ರ: ಪದಕ
* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ
* ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ: ಜೀಟಿಗೆ
* ಅತ್ಯುತ್ತಮ ಸಂಗೀತ ನಿರ್ದೇಶಕ: ಗಗನ್ ಬಡೇರಿಯಾ
* ಅತ್ಯುತ್ತಮ ಸಂಕಲನ: ನಾಗೇಂದ್ರ
* ಅತ್ಯುತ್ತಮ ಪೋಷಕ ನಟ: ರಮೇಶ್ ಪಂಡಿತ್
* ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ
* ಅತ್ಯುತ್ತಮ ಕಥೆ: ಶಶಿಕಾಂತ್ ಗಟ್ಟಿ
* ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್
* ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ
* ಅತ್ಯುತ್ತಮ ಛಾಯಾಗ್ರಹಣ: ಅಶೋಕ್ ಕಶ್ಯಪ್
ಉಳಿದ ಪ್ರಶಸ್ತಿಗಳು ಹಾಗೂ ಅವರು ಪಡೆಯುವ ನಗದು ಮತ್ತು ಪದಕಗಳ ಲಿಸ್ಟ್ ಈ ಪಟ್ಟಿಯಲ್ಲಿದೆ...

