ಜ್ಯೂಲಿ ಲಕ್ಷ್ಮಿ ಎಂದೇ ಖ್ಯಾತರಾದ ನಟಿ ಲಕ್ಷ್ಮಿ, ಹಲವು ಭಾಷೆಗಳಲ್ಲಿ ಮಿಂಚಿದ್ದಾರೆ. ಇವರು ಹತ್ತು ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ಏಕೈಕ ನಟಿ. ಸಾಹಿತಿ ಎನ್.ಎಸ್.ಶ್ರೀಧರ ಮೂರ್ತಿ ಅವರ ಪ್ರಕಾರ, ಲಕ್ಷ್ಮಿ ಅವರು ಚಿತ್ರೀಕರಣದ ವೇಳೆ ಮಧ್ಯಾಹ್ನ 1.45ಕ್ಕೆ ಮೊಸರನ್ನ ತಿನ್ನುತ್ತಿದ್ದರು. ಒಂದು ವೇಳೆ ಸಿಗದಿದ್ದರೆ, ಶೂಟಿಂಗ್ ನಿಲ್ಲಿಸಿ ಹೋಗುತ್ತಿದ್ದರು. ತಮಿಳು ಚಿತ್ರದ ಚಿತ್ರೀಕರಣದ ವೇಳೆ ಗಲ್ಲು ಶಿಕ್ಷೆಯ ಕೈದಿಯೊಬ್ಬ ಆಶ್ಚರ್ಯಕರವಾಗಿ ವರ್ತಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.
ಲಕ್ಷ್ಮಿ ಎನ್ನುವುದಕ್ಕಿಂತ ಇವರು ಜ್ಯೂಲಿಲಕ್ಷ್ಮಿ ಎಂದೇ ಫೇಮಸ್. 72 ವರ್ಷಗಳ ಲಕ್ಷ್ಮಿ ಅವರು ಇಂದಿಗೂ ಸಕತ್ ಹಾಟ್ ಆಗಿಯೇ ಇದ್ದಾರೆ. ಅದೇ ನಗುಮೊಗ, ಅದೇ ಲುಕ್ಕು, ಅದೇ ಸೌಂದರ್ಯ. ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ಮಲಯಾಳಿ ಮತ್ತು ತೆಲಗು ಚಿತ್ರಗಳಲ್ಲಿಯೂ ಹಲವು ದಶಕಗಳವರೆಗೆ ಮಿಂಚಿದ್ದಾರೆ ಇವರು. ಹತ್ತು ಫಿಲ್ಮ್ಂಫೇರ್ ಪ್ರಶಸ್ತಿ ಪಡೆದಿರುವ ಏಕೈಕ ನಟಿ ಎನ್ನುವ ಹೆಗ್ಗಳಿಗೆ ಇವರದ್ದು. ಬ್ಯೂಟಿ ವಿತ್ ಬ್ರೈನ್ ಇರುವ ಕೆಲವೇ ನಟಿ ಎಂದೇ ಫೇಮಸ್ ಆಗಿರೋ ಲಕ್ಷ್ಮಿ ಅವರು, ಇದೀಗ ರಿಯಾಲಿಟಿ ಷೋಗಳಲ್ಲಿ ತೀರ್ಪುಗಾರರಾಗಿ ಆಗಮಿಸಿ ಇಂದಿಗೂ ಖ್ಯಾತಿ ಗಳಿಸುತ್ತಿದ್ದಾರೆ. ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೇ. ದೇಹಕ್ಕೆ ಅದು ತಂತಾನೇ ಆಗ್ತಾ ಇರುತ್ತೆ ವಿನಾ ಮನಸ್ಸಿಗೆ ವಯಸ್ಸಿಲ್ಲ ಎನ್ನುವ ಮಾತಿಗೆ ಹೇಳಿ ಮಾಡಿಸಿದಂತಿರುವವರು ಲಕ್ಷ್ಮಿ.
ಇಂತಿಪ್ಪ ಲಕ್ಷ್ಮಿಯ ಕುತೂಹಲದ ಸ್ವಭಾವವೊಂದನ್ನು ತೆರೆದಿಟ್ಟಿದ್ದಾರೆ ಸಾಹಿತಿ ಎನ್.ಎಸ್.ಶ್ರೀಧರ ಮೂರ್ತಿ. ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಇವರು, ಜ್ಯೂಲಿ ಲಕ್ಷ್ಮಿ ಅವರ ಜೀವನದ ಬಗ್ಗೆ ಹಲವಾರು ಘಟನೆಗಳನ್ನು ವಿವರಿಸಿದ್ದಾರೆ. ಅದರಲ್ಲಿ ಅವರು, ಲಕ್ಷ್ಮೀ ಅವರ ಸ್ವಭಾವ, ಕೆಲಸದ ಮೇಲೆ ಅವರಿಗೆ ಇದ್ದ ಬದ್ಧತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಲೇ ಮೊಸರನ್ನದ ಬಗ್ಗೆಯೂ ಹೇಳಿದ್ದಾರೆ. ಜ್ಯೂಲಿ ಲಕ್ಷ್ಮಿ ಅವರು ಯಾವುದೇ ಚಿತ್ರದ ಶೂಟಿಂಗ್ ಮಾಡುತ್ತಿದ್ದರೂ ಸರಿಯಾಗಿ 1.45ಗೆ ಊಟ ಆಗಬೇಕಿತ್ತಂತೆ. ಶೂಟಿಂಗ್ ಸಮಯದಲ್ಲಿ ಅವರು ಮೊಸರನ್ನ ಮಾತ್ರ ತಿನ್ನುತ್ತಿದ್ದರು. ಎಲ್ಲಿಯೇ ಹೋದರು ಕರೆಕ್ಟ್ ಆಗಿ ಒಂದು ಮುಕ್ಕಾಲಿಗೆ ಮೊಸರನ್ನ ಅವರ ಬಳಿ ಬರಬೇಕಿತ್ತು. ಅದರಲ್ಲಿಯೂ ಚೆನ್ನೈನಲ್ಲಿ ಎಲ್ಲಿಯೇ ಶೂಟಿಂಗ್ ಇದ್ದರೂ ಅವರು ಅದೊಂದೇ ಹೋಟೆಲ್ನಿಂದ ಮೊಸರನ್ನ ತರಿಸಿಕೊಳ್ಳುತ್ತಿದ್ದರು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ ಶ್ರೀಧರ ಮೂರ್ತಿ.
'ಮಂತ್ರಾಲಯ ಮಹಾತ್ಮೆ' ಚಿತ್ರ ಕೊನೆಗೂ ರಾಜ್ ನೋಡ್ಲೇ ಇಲ್ಲ- ಡಬ್ ಮಾಡುವಾಗ್ಲೂ ಕಣ್ಣು ಮುಚ್ಚಿದ್ರು! ಕಾರಣ ರಿವೀಲ್
ಒಂದು ವೇಳೆ ಈ ಸಮಯಕ್ಕೆ ಸರಿಯಾಗಿ ಮೊಸರನ್ನ ಬರದೇ ಹೋದರೆ, ನೇರವಾಗಿ ಶೂಟಿಂಗ್ ನಿಲ್ಲಿಸಿ, ಯಾರಿಗೂ ಹೇಳದೇ ಕೇಳದೇ ಕಾರು ಹತ್ತಿಕೊಂಡು ಹೋಗಿಬಿಡುತ್ತಿದ್ದರು. ಮೊಸರನ್ನ ಊಟ ಮಾಡಿದ ಬಳಿಕ ಅವರು ವಾಪಸಾಗುತ್ತಿದ್ದರು. ಅಷ್ಟು ಕರಾರುವಕ್ಕಾಗಿ ಲಕ್ಷ್ಮೀ ತಮ್ಮ ದಿನಚರಿ ಪಾಲಿಸುತ್ತಿದ್ದರು. ಊಟದ ಬಗ್ಗೆ ಅವರು ಅಷ್ಟು ಕಾಳಜಿ ವಹಿಸುತ್ತಿದ್ದರು. ಶೂಟಿಂಗ್ ವೇಳೆ ಮೊಸರನ್ನ ಬಿಟ್ಟು ಬೇರೆ ಏನೂ ತಿನ್ನುತ್ತಿರಲಿಲ್ಲ ಎಂದಿದ್ದಾರೆ ಶ್ರೀಧರ ಮೂರ್ತಿ. ಅದೇ ರೀತಿ ಕನ್ನಡದ ದಿಗ್ಗಜ ನಟರ ಜೊತೆ ನಟಿಸಿದ ಏಕೈಕ ನಟಿ ಜ್ಯೂಲಿಲಕ್ಷ್ಮಿ ಅವರು ಎಂದೂ ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ, ಅವರು ತಮಿಳು ಚಿತ್ರ ಮಾಡುತ್ತಿದ್ದ ಸಂದರ್ಭದಲ್ಲಿನ ರೋಚಕ ಕಥೆಯೂ ಅನಾವರಣಗೊಂಡಿದೆ. ಅದು ತಮಿಳು ಚಿತ್ರ. ಜೈಲು ಸನ್ನಿವೇಶದ ಚಿತ್ರೀಕರಣ ಸೇಲಂ ಜೈಲಿನಲ್ಲಿ ನಡೆದಿತ್ತು. ಕೈದಿಯಾಗಿ ನಟಿಸಿದ್ದ ಲಕ್ಷ್ಮೀ, ಸೇಲಂ ಜೈಲಿನ ಸೆಲ್ ನಂಬರ್ 2ರಲ್ಲಿ ಬಂಧಿಯಾಗಬೇಕಿತ್ತು. ಶೂಟಿಂಗ್‌ಗೆ ರೆಡಿಯಾಗಿ ಸೆಲ್ ಬಳಿ ಹೋಗುತ್ತಿದ್ದ ಲಕ್ಷ್ಮಿ ಅವರಿಗೆ ಸೆಲ್ ನಂಬರ್ 1ರಲ್ಲಿ ಬಂಧಿಯಾಗಿದ್ದ ಕೈದಿ, ಕಣ್ಣು ಮಿಟುಕಿಸಿ, ಫ್ಲೈಯಿಂಗ್ ಕಿಸ್ ಕೊಟ್ಟು ಬಿಟ್ಟನಂತೆ! ಹುಬ್ಬು ಕುಣಿಸಿ, 'ಹೆಂಗೆ?' ಎಂದು ಕಣ್ಣಲ್ಲೇ ಪ್ರಶ್ನಿಸಿದ್ದನಂತೆ. ಇದನ್ನು ಗಮನಿಸಿದ ಪೊಲೀಸರು, ಆತನನ್ನ ಗದರಿಸಿಯೂ ಆಯಿತು. ಆತನ ಕಣ್ಣೇಟಿಗೆ ಕ್ಷಣ ಗಾಬರಿಯಾದ ಲಕ್ಷ್ಮಿ , ಯಾರು ಆ ಕೈದಿ? ಎಂದು ಕೇಳಿದರಂತೆ. ಅಲ್ಲೇ ಇದ್ದ ಪೊಲೀಸಪ್ಪ, ಅಯ್ಯೋ ಅವನೊಬ್ಬ ಕೊಲೆಗಾರ. ಗಲ್ಲು ಶಿಕ್ಷೆ ಆಗಿದೆ. ಸ್ವಲ್ಪ ದಿನದಲ್ಲೇ ನೇಣುಗಂಬರಕ್ಕೇರ್ತಾನೆ. ಇನ್ನೇನು ಸಾವು ಹತ್ತಿರದಲ್ಲಿದ್ದರೂ, ಕೊಬ್ಬು ಮಾತ್ರ ಕರಗಿಲ್ಲ ಎಂದು ಗೊಣಗಿದರಂತೆ. ಇದನ್ನು ಕೇಳಿ ಲಕ್ಷ್ಮಿ ಕ್ಷಣ ದಂಗಾಗಿದ್ದು ಸುಳ್ಳಲ್ಲ. ಯಾರಾಗಾದರೂ ಗಲ್ಲಿಗೇರುವವನ ಇಂಥ ಆಶ್ಚರ್ಯ ತಾರದೇ ಇರದು. ಆದರೆ, ನೇಣುಗಂಬಕ್ಕೇರುವವನ ಆ್ಯಟಿಟ್ಯುಡ್ ಲಕ್ಷ್ಮಿಗೆ ಇಷ್ಟ ಆಯ್ತಂತೆ. ಸಾಯೋದೇ ಹೌದಂತೆ! ಅಲ್ಲೀತನಕ ನನಗಿಷ್ಟ ಬಂದಂತೆ ಬದುಕ್ತೀನಿ ಅನ್ನೋ ಆತನ attitude ಮನ ಸೆಳೆಯಿತು ಎನ್ನುತ್ತಾರೆ ಲಕ್ಷ್ಮೀ.
ಪಾರ್ವತಿಗೆ ಮಾತ್ರ ಈ ವಿಷ್ಯ ಹೇಳ್ಬೇಡಪ್ಪಾ ಎಂದಿದ್ದ ಡಾ.ರಾಜ್: ಆ ರಹಸ್ಯದ ಬಗ್ಗೆ ಮುಖ್ಯಮಂತ್ರಿ ಚಂದ್ರು ನೆನಪು..

