ಲಂಕೇಶ್ ಪತ್ರಿಕೆ ಚಿತ್ರದ ಬಳಿಕ ತಾವ್ಯಾಕೆ ಮುಂದೆ ಸಾಕಷ್ಟು ಸಮಯ ನಟಿಸಲೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. 'ಲಂಕೇಶ್ ಪತ್ರಿಕೆ ಚಿತ್ರದಲ್ಲಿ ಪಾತ್ರ ಮಾಡಿದಾಗ ನನಗೆ 12 ವರ್ಷ, ಏಳನೇ ಕ್ಲಾಸಿನಲ್ಲಿ ಓದುತ್ತಿದ್ದೆ. ನಮ್ಮಮ್ಮಂಗೆ ಒಬ್ಬರು.. ಅಯ್ಯೋ ವಿಧಿಯೇ.. ಮುಂದೆ ನೋಡಿ.. 

ರಾಜ್ಯ ಪ್ರಶಸ್ತಿ ವಿಜೇತೆ, ಕನ್ನಡ ಸಿನಿಮಾ ಹಾಗೂ ಕಿರುತೆರೆ ನಟಿ ಅನುಪಮಾ ಗೌಡ (Anupama Gowda) ಅವರು ಸಂದರ್ಶನವೊಂದರಲ್ಲಿ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಬಹುತೇಕ ಎಲ್ಲರಿಗೂ ಗೊತ್ತಿರುವಂತೆ ನಟಿ ಅನುಪಮಾ ಗೌಡ ಅವರು ಸಿನಿಮಾ ಹಿನೆಲೆಯಿಂದಲೇ ಬಂದವರು. ಅಂದರೆ, ಅನುಪಮಾ ತಂದೆ ತಮಿಳು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿದ್ದವರು. ಹೀಗಾಗಿ ಅನುಪಮಾ ಅವರಿಗೆ ಬಾಲ್ಯದಿಂದಲೇ ಬಣ್ಣದ ನಂಟು ಇತ್ತು. ಸಿನಿಮಾ ಶೂಟಿಂಗ್‌ ಸೆಟ್‌ಗೆ ತಮ್ಮ ತಂದೆಯ ಜೊತೆಗೆ ಆಗಾಗ ಹೋಗುತ್ತಿದ್ದರು ಅನುಪಮಾ ಗೌಡ.

ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಿನಿಮಾ-ಸೀರಿಯಲ್‌ಗಳಲ್ಲಿ ಚಿಕ್ಕಚಿಕ್ಕ ಪಾತ್ರಗಳಲ್ಲಿ ನಟಿಸಿದ್ದಾರೆ ಅನುಪಮಾ. ಅವೆಲ್ಲವನ್ನೂ ಜೂನಿಯರ್ ಆರ್ಟಿಸ್ಟ್ ಎಂಬ ಹೆಸರಿನಿಂದಲೇ ಕರೆದುಕೊಂಡಿದ್ದಾರೆ ಅನುಪಮಾ ಗೌಡ. ಆದರೆ, ದರ್ಶನ್ ನಟನೆಯ 'ಲಂಕೇಶ್ ಪತ್ರಿಕೆ' ಚಿತ್ರದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿಯೇ ಚಿಕ್ಕ ಪಾತ್ರದಲ್ಲಿ ನಟಿಸಿದ್ದರೂ ಅವರಿಗೆ ಆ ಪಾತ್ರ ಸಾಕಷ್ಟು ಮೆಚ್ಚುಗೆ ಹಾಗೂ ಐಡೆಂಟಿಟಿ ತಂದು ಕೊಟ್ಟಿದೆ. ಕಾರಣ, ಆ ಚಿತ್ರದಲ್ಲಿನ ಅನುಪಮಾ ಗೌಡ ಪಾತ್ರದ ಮೂಲಕವೇ ಆ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ತಿರುವು ಸಿಗುತ್ತದೆ. ಅದು ವಿಶೇಷ ಚೇತನ ಹುಡುಗಿ ಪಾತ್ರ. 

ಅನುಪಮಾಗೆ ಚಾನ್ಸ್ ಯಾಕಿಲ್ಲ? ದಾರಿನ ಅವ್ರೇ ಕಂಡ್ಕೊಂಡಿದಾರೆ, ಜಾಗ ಬಿಡಿ ಅಷ್ಟೇ!

ಇದೆಲ್ಲವನ್ನೂ ಯೂಟ್ಯೂಬ್ ಚಾನೆಲ್‌ ಇಂಟರ್‌ವ್ಯೂದಲ್ಲಿ ಹೇಳಿಕೊಂಡಿರುವ ಅನುಪಮಾ, ಲಂಕೇಶ್ ಪತ್ರಿಕೆ ಚಿತ್ರದ ಬಳಿಕ ತಾವ್ಯಾಕೆ ಮುಂದೆ ಸಾಕಷ್ಟು ಸಮಯ ನಟಿಸಲೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. 'ಲಂಕೇಶ್ ಪತ್ರಿಕೆ ಚಿತ್ರದಲ್ಲಿ ಪಾತ್ರ ಮಾಡಿದಾಗ ನನಗೆ 12 ವರ್ಷ, ಏಳನೇ ಕ್ಲಾಸಿನಲ್ಲಿ ಓದುತ್ತಿದ್ದೆ. ನಮ್ಮಮ್ಮಂಗೆ ಒಬ್ಬರು ಜೂನಿಯರ್ ಆರ್ಟಿಸ್ಟ್ ಪರಿಚಯವಿತ್ತು. ಅವರ ಮೂಲಕವೇ ನಾನು ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದೆ. ಅದೇ ವೇಳೆ ನಮ್ಮನೆಗೆ ಒಬ್ಬರು ಆಕ್ಟರ್ ಬರುತ್ತಿದ್ದರು. 

ಆ ನಟ ಸಿನಿಮಾಗಳಿಗೆ ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದರು. ಆವತ್ತೊಂದಿನ ಆ ನಟ ನಮ್ಮನೆಗೆ ಬಂದಾಗ ಮನೆಯಲ್ಲಿ ಅಪ್ಪ-ಅಮ್ಮ ಯಾರೂ ಇರಲಿಲ್ಲ, ನಾನೊಬ್ಬಳೇ ಇದ್ದೆ. ಆ ವ್ಯಕ್ತಿ ನನ್ನನ್ನು ಟೆರೇಸ್‌ ಮೇಲೆ ಕರೆದುಕೊಂಡು ಹೋಗಿ ನನ್ನ ಮೈ-ಕೈ ಎಲ್ಲವನ್ನೂ ಮುಟ್ಟಿದ್ದ. ನನಗೆ ಆಗ ಗುಡ್ ಟಚ್, ಬ್ಯಾಡ್ ಎಂದೆಲ್ಲಾ ಏನೂ ಗೊತ್ತಿರಲಿಲ್ಲ. ಆ ವ್ಯಕ್ತಿ ಹಾಗೆಲ್ಲಾ ಮುಟ್ಟುತ್ತಿದ್ದರೆ ನನಗೆ ಅದನ್ನು ವಿರೋಧಿಸುವುದು ಹೇಗೆ ಎಂದೂ ತಿಳಿದಿರಲಿಲ್ಲ. ಕೊನೆಗೊಮ್ಮೆ ಅವೆಲ್ಲಾ ನನಗೆ ಹಿಂಸೆ ಎನ್ನಿಸಿದಾಗ ನಾನು ಅಲ್ಲಿಂದ ಮನೆಯೊಳಕ್ಕೆ ಓಡಿ ಹೋಗಿ ಬಾಗಲು ಹಾಕಿಕೊಂಡೆ. 

Sudeep Viral Video: ಚಿಕ್ಕ ವಯಸ್ಸಲ್ಲಿ ಸ್ನೇಹಿತರಾಗಿದ್ವಿ, ಬರ್ತಾ ಬರ್ತಾ ಒಂದು ಗ್ಯಾಪ್ ಇತ್ತು..!

ಅಮ್ಮ ಮನೆಗೆ ಬಂದ ಮೇಲೆ ಆ ವ್ಯಕ್ತಿ ಮಾಡಿದ್ದು ಹೇಳಿದೆ. ಜೊತೆಗೆ, ನಾನು ಇನ್ಮುಂದೆ ಸಿನಿಮಾ ನಟನೆಗೆ ಹೋಗಲ್ಲ ಎಂದೆ. ಅದಕ್ಕೆ ನಮ್ಮಮ್ಮ 'ಹೋಗುವುದು ಬೇಡ ಬಿಡು' ಎಂದರು. ಆ ಮೇಲೆ ನಾನು ಬಹಳಷ್ಟು ಸಮಯ ಸಿನಿಮಾದಲ್ಲಿ ನಟಿಸಲೇ ಇಲ್ಲ. ಅದಾದ ಬಳಿಕ ಮತ್ತೆ ಹಳೆಯದನ್ನೆಲ್ಲಾ ಮರೆತು ಬಣ್ಣದ ಬದುಕಿನಲ್ಲಿ ನನ್ನನ್ನು ತೊಡಗಿಸಿಕೊಂಡೆ. ಆದರೆ, ಇಮದು ವ್ಯಕ್ತಿ ಸಿನಿಮಾರಂಗದಲ್ಲಿ, ನಟನೆಯಲ್ಲಿ ಇದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನೆಂದೂ ಆತನನ್ನು ಕ್ಷಮಿಸೋದಿಲ್ಲ' ಎಂದಿದ್ದಾರೆ. 

ಅನುಪಮ ಬಾಳಲ್ಲಿ ನಡೆದ ದುರಂತ ಒಂದೆರಡಲ್ಲಾ.? ಲೈಂಗಿಕ ದೌರ್ಜನ್ಯ ಮಾಡಿದ್ದ ಆ ನಟ?!