ಸಾಮಾನ್ಯವಾಗಿ ಧಾರಾವಾಹಿಗಳ ಮದುವೆ ದೃಶ್ಯಗಳನ್ನು ಅದ್ದೂರಿಯಾಗಿ ಯಾವುದಾದರೂ ರೆಸಾರ್ಟ್‌ನಲ್ಲಿ ಚಿತ್ರೀಕರಿಸುವುದು ವಾಡಿಕೆ. ಆದರೆ ಸುವರ್ಣ ವಾಹಿನಿಯಲ್ಲಿ ಪ್ರಸಾವಾಗುವ ‘ಸಂಘರ್ಷ’ ಧಾರಾವಾಹಿ ತಂಡ ಮದುವೆ ದೃಶ್ಯಗಳನ್ನು ನದಿ ತೀರದಲ್ಲಿ ಚಿತ್ರೀಕರಿಸಿ ಮಾದರಿಯಾಗಿದೆ.
‘ನಮ್ಮ ‘ಸಂಘರ್ಷ’ ಧಾರಾವಾಹಿಯ ಮದುವೆ ದೃಶ್ಯಾವಳಿಗಳನ್ನು ಶ್ರೀರಂಗಪಟ್ಟಣ ಸಮೀಪದ ಗೋಸಾಯಿ ಘಾಟ್ ನದೀ ತೀರದಲ್ಲಿ ಪ್ರಕೃತಿಗೆ ಹತ್ತಿರವಾಗಿರುವಂತೆ ಚಿತ್ರೀಕರಿಸಲಾಗಿದೆ’ ಎಂದು ಸಂಘರ್ಷ ಸೀರಿಯಲ್‌ನ ನಿರ್ಮಾಪಕಿ ಶ್ರುತಿ ನಾಯ್ಡು ಹೇಳುತ್ತಾರೆ.
ಸ್ಟಾರ್ ಸುವರ್ಣ ಡಾನ್ಸ್ ರಿಯಾಲಿಟಿ ಶೋಗೆ ಹರಿಪ್ರಿಯಾ ಜಡ್ಜ್
‘ಮದುವೆ ಮಂಟಪವನ್ನು ಸಾಂಪ್ರದಾಯಿಕ ಮಾದರಿಯಲ್ಲಿ ಅದ್ದೂರಿಯಾಗಿ ವಿನ್ಯಾಸ ಮಾಡಲಾಗಿದೆ. ತಾವರೆ, ಆ ಪ್ರಕೃತಿಗೆ ಹೊಂದುವ ಬಣ್ಣದ ಹೂಗಳಿಂದ ಅಲಂಕರಿಸಲಾಗಿದ್ದು, ಇಡೀ ಪರಿಸರ ಕಲರ್, ಎಮೋಶನ್, ಎನ್‌ಜಾಯ್‌ಮೆಂಟ್‌ಗಳ ಒಟ್ಟು ಮೊತ್ತದ ಹಾಗಿದೆ. ಮದುಮಕ್ಕಳು ಹೂವಿಂದ ಅಲಂಕರಿಸಲಾದ ತೆಪ್ಪದಲ್ಲಿ ಬರುವುದು ಮತ್ತೊಂದು ವಿಶೇಷ. 5 ದಿನಗಳ ಕಾಲ ಮದುವೆಯ ಚಿತ್ರೀಕರಣ ನಡೆದಿದೆ. ಮುಂದಿನ ವಾರದಿಂದ 10 ದಿನಗಳ ಕಾಲ ಈ ಎಪಿಸೋಡ್ ಪ್ರಸಾರವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಮರಳಿ ಮನಸಾಗಿದೆ'!
ತೇಜಸ್ವಿನಿ ಶೇಖರ್, ರೋಹಿತ್ ರಂಗಸ್ವಾಮಿ, ವನಿತಾ ವಾಸು ಈ ಧಾರಾವಾಹಿಯ ಮುಖ್ಯಪಾತ್ರಗಳಲ್ಲಿದ್ದಾರೆ. ‘ಸಂಘರ್ಷ’ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.
