ಸೃಜನ್‌ ಲೋಕೇಶ್‌ ನಾಯಕನಾಗಿ ನಟಿಸಿರುವ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಸಿನಿಮಾ ತೆರೆಕಂಡ ಎಲ್ಲಾ ಕಡೆ ಒಳ್ಳೆಯ ಕಲೆಕ್ಷನ್‌ ಆಗುತ್ತಿದೆ ಎಂಬುದು ಚಿತ್ರತಂಡದ ಸಂತಸಕ್ಕೆ ಕಾರಣ.

ಈ ನಡುವೆ ಸೆಲೆಬ್ರಿಟಿಗಳಿಗಾಗಿಯೇ ಸೃಜನ್‌ ತಂಡ ಚಿತ್ರದ ಪ್ರದರ್ಶನ ಏರ್ಪಡಿಸಿತ್ತು. ನಟ ದರ್ಶನ್‌, ಪ್ರಜ್ವಲ್‌ ದೇವರಾಜ್‌, ನಿರ್ದೇಶಕ ಬರಗೂರು ರಾಮಚಂದ್ರಪ್ಪ, ನಿರ್ಮಾಪಕ ಸಂದೇಶ್‌ ನಾಗರಾಜ್‌, ಹಿರಿಯ ನಟಿಯರಾದ ಜಯಂತಿ, ಉಮಾಶ್ರೀ, ನಟಿ ಹರಿಪ್ರಿಯಾ, ಮೇಘನಾ ರಾಜ್‌, ಸುಮನ್‌ ನಗರ್‌ಕರ್‌ ಆಗಮಿಸಿ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡರು.

ಚಿತ್ರ ವಿಮರ್ಶೆ: ಎಲ್ಲಿದ್ದೆ ಇಲ್ಲಿ ತನಕ

ನನ್ನ ತಂದೆ ಲೋಕೇಶ್‌ ಅವರು ನೆನಪಾಗುತ್ತಿದ್ದಾರೆ. ಅವರು ನಿಧನರಾಗಿ ಇಂದಿಗೆ 15 ವರ್ಷ. ಅವರು ನನ್ನ ಭೌತಿಕವಾಗಿ ಅಗಲಿದ್ದಾರೆ ಅಷ್ಟೆ. ಹೀಗಾಗಿ ನನ್ನ ಈ ಗೆಲುವು ನನ್ನ ತಂದೆ ಅರ್ಪಣೆ. ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಕನ್ನಡ ಪ್ರೇಕ್ಷಕರು ಕೊಟ್ಟಈ ಯಶಸ್ಸು ಅಪ್ಪನಿಗೆ ಖುಷಿಯಾಗಿ ಕೊಡುತ್ತಿದ್ದೇನೆ. ಮುಂದೆ ಸಿನಿಮಾ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳಿಗೆ ಇಂದಿನಿಂದ ಭೇಟಿ ಕೊಡುತ್ತಿದ್ದೇವೆ.- ಸೃಜನ್‌ ಲೋಕೇಶ್‌

ಬೆಳ್ಳಿತೆರೆಗೆ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌!

ಇದೇ ಸಂದರ್ಭದಲ್ಲಿ ಮಾತನಾಡಿದ ದರ್ಶನ್‌, ‘ಇದು ನನ್ನ ಗೆಳೆಯನ ಮೊದಲ ನಿರ್ಮಾಣದ ಸಿನಿಮಾ. ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಸಿನಿಮಾ ನೋಡಿದಾಗ ನನಗೇ ಖುಷಿ ಆಯ್ತು. ನನ್ನ ಗೆಳೆಯ ಒಂದು ಅದ್ಭುತವಾದ ಸಿನಿಮಾ ಮಾಡಿದ್ದಾನೆ ಎನ್ನುವ ಹೆಮ್ಮೆ ಮೂಡಿತು. ಈ ಚಿತ್ರವನ್ನು ಮತ್ತಷ್ಟುದೊಡ್ಡ ಮಟ್ಟದಲ್ಲಿ ನೋಡಬೇಕು. ಪ್ರತಿಭಾವಂತ ಸೃಜನ್‌ಗೆ ಗೆಲುವು ಸಿಗಬೇಕು’ ಎಂದು ಚಿತ್ರತಂಡಕ್ಕೆ ಶುಭ ಕೋರಿದರು.