ನಟ, ನಿರ್ದೇಶಕ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌ ಈಗ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾನೆ. ಸೃಜನ್‌ ಲೋಕೇಶ್‌ ಅವರೇ ನಟಿಸಿ, ನಿರ್ಮಿಸಿರುವ ‘ಎಲ್ಲಿದ್ದೇ ಇಲ್ಲಿ ತನಕ’ ಸಿನಿಮಾದಲ್ಲಿ ಸುಕೃತ್‌ ಬಾಲ ನಟನಾಗಿ ಅಭಿನಯಿಸಿದ್ದಾರೆ.

2ನೇ ಮಗುವಿಗೆ ತಂದೆಯಾದ ಟಾಕಿಂಗ್ ಸ್ಟಾರ್!

ಈ ಚಿತ್ರಕ್ಕೆ ಯುವ ನಿರ್ದೇಶಕ ತೇಜಸ್ವಿ ಆ್ಯಕ್ಷನ್‌ ಕಟ್‌ ಹೇಳಿದ್ದರೂ, ಪುತ್ರ ಸುಕೃತ್‌ ಅಭಿನಯಿಸಿರುವ ಸನ್ನಿವೇಶಗಳನ್ನು ಸೃಜನ್‌ ಲೋಕೇಶ್‌ ಅವರೇ ನಿರ್ದೇಶಿಸಿದ್ದಾರಂತೆ. ಆ ಮಟ್ಟಿಗೆ ‘ಎಲ್ಲಿದ್ದೇ ಇಲ್ಲಿ ತನಕ’ ಸಿನಿಮಾ ಸೃಜನ್‌ ಅವರಿಗೆ ತುಂಬಾ ವಿಶೇಷ ಎನಿಸಿದೆ.

ಸೃಜನ್ ಲೊಕೇಶ್ ಪತ್ನಿ ಗ್ರೀಷ್ಮಾ ಸೀಮಂತ ಫೋಟೋಸ್!

‘ಮಗ ಬಣ್ಣ ಹಚ್ಚಿದ್ದಾನೆನ್ನುವುದು ವಿಶೇಷವಾದದ್ದೇನಲ್ಲ. ನಮ್ಮದು ಕಲಾವಿದರ ಕುಟುಂಬ. ತಾತ ಸುಬ್ಬಯ್ಯನಾಯ್ಡು ಅವರ ಹಾಗೆಯೇ ಅಪ್ಪ ಕೂಡ ನಟರಾದರು. ಹಾಗೆಯೇ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು. ಅಮ್ಮ ಕೂಡ ನಟಿ. ಅವರಿಂದ ಬಂದ ಹುಟ್ಟುಗುಣವೇ ನಟನೆ. ನನಗಿಂತ ಮೊದಲು ಅಕ್ಕ ಪೂಜಾ ಲೋಕೇಶ್‌ ನಟಿಯಾಗಿ ಬೆಳ್ಳಿತೆರೆಗೆ ಎಂಟ್ರಿಯಾದರು. ಅವರ ಹಾಗೆಯೇ ನಾನು ಕೂಡ ಇಲ್ಲಿಗೆ ಬಂದೆ.

ನಮ್ಮನೆ ಯುವರಾಣಿಯಲ್ಲಿ Silli Lalli ಸೂಜಿ; ಈಗ ಹೇಗಿದ್ದಾರೆ ನೋಡಿ!

ಇನ್ನು ಮಕ್ಕಳಿಗೂ ಅದು ಹುಟ್ಟು ಗುಣ. ಅವರನ್ನು ಇಲ್ಲಿಯೇ ಬೆಳೆಸಬೇಕು, ಅವರು ಕೂಡ ಕಲಾ ಸೇವೆ ಮುಂದುವರೆಸಬೇಕೆನ್ನುವ ಆಸೆಯಿಂದ ಸುಕೃತ್‌ನನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದೇನೆ’ ಎನ್ನುತ್ತಾರೆ ನಟ ಸೃಜನ್‌ ಲೋಕೇಶ್‌. ಹರಿಪ್ರಿಯಾ ಚಿತ್ರದ ನಾಯಕಿ. ಮಂಡ್ಯ ರಮೇಶ್‌, ತಾರಾ, ತಬಲ ನಾಣಿ, ಸಾಧು ಕೋಕಿಲ, ಅವಿನಾಶ್‌ ತಾರಾಗಣದಲ್ಲಿದ್ದಾರೆ.