ಪ್ರಿಯಾ ಕೆರ್ವಾಶೆ

ಐ ಮೀನ್ ಈ ಸಿನಿಮಾದ್ದು ಹಾಸ್ಯದ ಭಾಷೆ. ಹಾಗಾಗಿ ಸೂಕ್ಷ್ಮ, ಕಲೆಗಾರಿಕೆ ಅಂತೆಲ್ಲ ಹುಡುಕುವ ಕಷ್ಟ ತಗೋಬೇಕಿಲ್ಲ. ಉದ್ದಕ್ಕೂ ಭರಪೂರ ಹಾಸ್ಯಕ್ಕೆ ಕೊರತೆಯಿಲ್ಲ. ಜೀವನ ಕಷ್ಟವನ್ನೆಲ್ಲ ಮರೆತು ನಗು ನಗುತ್ತಾ ಚಿತ್ರಮಂದಿರದಿಂದ ವಾಪಾಸ್ ಬರಬಹುದು. ಒಂದೆರಡು ಫೈಟು, ಕೊನೆಯಲ್ಲೊಂದು ಸೆಂಟಿಮೆಂಟು ಇದಕ್ಕೆ ಸೇರ್ಪಡೆಯಾಗುತ್ತದೆ. ಅದೂ ಸಹಿಸಿಕೊಳ್ಳದ ಹಾಗೇನೂ ಇಲ್ಲ, ಕತೆಗೆ ಪೂರಕವಾಗಿಯೇ ಬರುತ್ತದೆ.

ಬೆಳ್ಳಿತೆರೆಗೆ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌!

ಮಗ ಸೂರ್ಯ ಪೋಕರಿಗಳ ಜೊತೆ ಸೇರಿ ಹಾಳಾಗ್ತಾನೆ ಅಂತ ಅಪ್ಪ ಫಾರಿನ್‌ಗೆ ಕರ‌್ಕೊಂಡು ಹೋದ್ದೇ ಬಂತು, ದೊಡ್ಡವನಾಗುತ್ತಲೇ ಮತ್ತೆ ಇಂಡಿಯಾಗೆ ಬಂದು ಹಳೇ ಗೆಳೆಯರನ್ನು ಹುಡುಕಿಕೊಳ್ತಾನೆ. ಚಾಲೆಂಜ್‌ಗಳ ಮೇಲೆ ಚಾಲೆಂಜ್‌ಗಳೇಳುತ್ತವೆ. ಒನ್ ಫೈನ್ ಡೇ ನಂದಿನಿ ಎಂಬ ಸುಂದರಿಯ ದರ್ಶನವಾಗಿ ಲವ್ ಎಟ್ ಫಸ್ಟ್ ಸೈಟ್ ಆಗುತ್ತೆ. ಆಮೇಲೆ ಆಕೆಯನ್ನು ಮದುವೆಯಾಗಲು ಸಾವಿರ ಸುಳ್ಳುಗಳ ಸರದಾರನಾಗುತ್ತಾನೆ ನಾಯಕ. ಸುಳ್ಳುಗಳನ್ನು ಕಂಡರಾಗದ ಆಕೆಯನ್ನು ಆತ ಸುಳ್ಳುಗಳ ಮೂಲಕವೇ ಹೇಗೆ ಪಟಾಯಿಸುತ್ತಾನೆ ಮತ್ತು ಅದು ಆಕೆಗೆ ಗೊತ್ತಾದಾಗ ಏನಾಗುತ್ತದೆ ಅನ್ನೋದು ಸಿನಿಮಾದ ವನ್‌ಲೈನ್.

ಲಿಪ್‌ಲಾಕ್‌ ವಿವಾದಕ್ಕೆ ಖಾರವಾಗಿ ಉತ್ತರಿಸಿದ ನೀರ್‌ದೋಸೆ ಬೆಡಗಿ

ಕತೆಯಲ್ಲಿ ಅನಿರೀಕ್ಷಿತ ತಿರುವುಗಳಿಲ್ಲ. ಇದು ಮುಂದೆ ಹೀಗಾಗಬಹುದು, ಹಾಗಾದರೆ ಕತೆ ಹೀಗೆ ಆಗುತ್ತೆ ಅನ್ನುವ ಪ್ರೇಕ್ಷಕನ ಲೆಕ್ಕಾಚಾರ ಎಲ್ಲೂ ಹುಸಿಯಾಗುವುದಿಲ್ಲ. ಆ ಮಟ್ಟಿಗೆ ಪ್ರೇಕ್ಷಕ ಸೇಫ್! ಮಜಾ ಟಾಕೀಸ್‌ನ ಮುಂದುವರಿದ ಭಾಗದಂತೆ ಕಾಣುವ ಈ ಸಿನಿಮಾದಲ್ಲೂ ಸೃಜನ್ ಲೋಕೇಶ್ ಡೈಲಾಗ್ ಕಿಂಗ್. ಪಾತ್ರವೂ ಅದಕ್ಕೆ  ಪೂರಕವಾಗಿಯೇ ಇರುವ ಕಾರಣ ಕರತಲಾಮಲಕವಾಗಿ ನಿಭಾಯಿಸಿದ್ದಾರೆ. ಹರಿಪ್ರಿಯಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಡುಗಳು ಕಲರ್‌ಫುಲ್, ಹಿಯರ್‌ಫುಲ್. ಉಳಿದಂತೆ ಗಿರಿ, ತಬಲಾ ನಾಣಿ ಮೊದಲಾದ ಹಾಸ್ಯ ಕಲಾವಿದರು ಭರ್ಜರಿ ಮನರಂಜನೆ ನೀಡುವಲ್ಲಿ ಹಿಂದೆ ಬೀಳುವುದಿಲ್ಲ. ಸಿನಿಮಾ ಅನ್ನೋದು ಅಪ್ಪಟ ಮನರಂಜನೆ ಎಂದು ನಂಬಿದವರಿಗೆ ಚಿತ್ರ ಎಲ್ಲೂ ನಿರಾಸೆ ಮಾಡಲ್ಲ. ಬೇರ‌್ಯಾವ ನಿರೀಕ್ಷೆಗಳನ್ನು ಇಟ್ಟುಕೊಳ್ಳದಿದ್ದರೆ ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸವಿಲ್ಲ