ಶ್ರೀನಿ ನಿರ್ದೇಶನ ಮತ್ತು ನಟನೆಯ ಬಹುನಿರೀಕ್ಷಿತ ಚಿತ್ರ ‘ಓಲ್ಡ್‌ಮಾಂಕ್‌’ ಫೆ.25ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಸಿನಿಮಾ ಬಿಡುಗಡೆ ಮುಂದಕ್ಕೆ ಹೋದರೆ ಫೆ.25ರಂದು ‘ಓಲ್ಡ್‌ಮಾಂಕ್‌’ ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.

ಶ್ರೀನಿ (Srini) ನಿರ್ದೇಶನ ಮತ್ತು ನಟನೆಯ ಬಹುನಿರೀಕ್ಷಿತ ಚಿತ್ರ ‘ಓಲ್ಡ್‌ಮಾಂಕ್‌’ (Old Monk) ಫೆ.25ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ (Vikrant Rona) ಸಿನಿಮಾ ಬಿಡುಗಡೆ ಮುಂದಕ್ಕೆ ಹೋದರೆ ಫೆ.25ರಂದು ‘ಓಲ್ಡ್‌ಮಾಂಕ್‌’ ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಅದೇ ಥರ ‘ವಿಕ್ರಾಂತ್‌ ರೋಣ’ ರಿಲೀಸ್‌ ಮುಂದಕ್ಕೆ ಹೋಗಿರುವುದರಿಂದ ಅವತ್ತೇ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿ ಕೊಟ್ಟಮಾತನ್ನು ಉಳಿಸಿಕೊಂಡಿದೆ. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೇ (Telugu) ಫೆ.25ರಂದೇ ಸಿನಿಮಾ ಬಿಡುಗಡೆ ಆಗಲಿದೆ.

ವಿಭಿನ್ನ ರೀತಿಯ ಪ್ರಚಾರಗಳಿಂದ ಈಗಾಗಲೇ ‘ಓಲ್ಡ್‌ಮಾಂಕ್‌’ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ವಿಮಾನದಲ್ಲಿ ಜಾಹೀರಾತು ನೀಡಿದ ಮೊದಲ ಕನ್ನಡ ಸಿನಿಮಾ ಎಂಬ ಈ ಚಿತ್ರದ ಪೋಸ್ಟರ್‌ ಕೆಲವು ದಿನಗಳ ಹಿಂದೆ ಭಾರಿ ವೈರಲ್‌ ಆಗಿತ್ತು. ಓಲ್ಡ್‌ಮಾಂಕ್‌ ಚಿತ್ರದ ಪೋಸ್ಟರ್‌ ವಿಮಾನದಲ್ಲಿ ಪ್ರಕಟವಾದಂತೆ ಫೋಟೋಶಾಪ್‌ನಲ್ಲಿ ವಿನ್ಯಾಸ ಮಾಡಿರುವುದಾಗಿ ಚಿತ್ರತಂಡ ತಿಳಿಸಿದ್ದರೂ ಜನ ಮೆಚ್ಚಿಕೊಂಡಿದ್ದು ಈ ಪೋಸ್ಟರ್‌ನ ವಿಶೇಷತೆ.

Srini Old Monk: ಚಿತ್ರದ ರಿಲೀಸ್ ಬಗ್ಗೆ ಹೊಸ ಅಪ್‌ಡೇಟ್ ನೀಡಿದ ಶ್ರೀನಿ!

ಅದಲ್ಲದೇ ರಾಜ್ಯದ ಅನೇಕ ಥಿಯೇಟರ್‌ಗಳಲ್ಲಿ ತ್ರೀಡಿ ಪೋಸ್ಟರ್‌ ಪ್ರಚಾರ ಮಾಡಿದ್ದು ಕೂಡ ವಿನೂತನ ಆಲೋಚನೆಯೇ. ಶ್ರೀನಿಯವರ ಎರಡು ಪಾತ್ರಗಳ ಅನಾವರಣ ಮಾಡುವ ಈ ತ್ರೀಡಿ ಪೋಸ್ಟರ್‌ ಅನ್ನು ಸಿನಿಮಾ ಪ್ರೇಕ್ಷಕರು ಕುತೂಹಲದ ಕಣ್ಣುಗಳಿಂದ ನೋಡಿದ್ದರು. ನಿರ್ದೇಶಕ ಶ್ರೀನಿ ಹೀಗೆ ವಿಶಿಷ್ಟಆಲೋಚನೆಗಳ ಮೂಲಕವೇ ಸಿನಿಮಾವನ್ನು ಜನರ ಬಳಿಗೆ ಕರೆದೊಯ್ಯುವ ಕಲೆಯಲ್ಲಿ ಸಿದ್ಧಹಸ್ತರು. ಅವರ ಈ ಹಿಂದಿನ ಸಿನಿಮಾಗಳು ಕೂಡ ಬಿಡುಗಡೆ ಮುನ್ನವೇ ಜನರಲ್ಲಿ ಕುತೂಹಲ ಹುಟ್ಟಿಸಿದ್ದವು. ಶ್ರೀನಿ, ಅದಿತಿ ಪ್ರಭುದೇವ, ಸಿಹಿಕಹಿ ಚಂದ್ರು, ಎಸ್‌ ನಾರಾಯಣ್‌ ಮುಂತಾದ ಪ್ರತಿಭಾವಂತರ ದಂಡೆ ಚಿತ್ರದಲ್ಲಿದೆ. ಈ ಕಾರಣದಿಂದಲೂ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಇನ್ನು ಈ ಚಿತ್ರಕ್ಕೆ ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿದ್ದಾರೆ. 'ರಂಗನಾಯಕಿ' (Ranganayaki) ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ತೆರೆ ಮೇಲೆ ಜತೆಯಾಗುತ್ತಿದ್ದಾರೆ. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಬಣ್ಣ ಹಚ್ಚಿದ್ದಾರೆ. ಮಾತ್ರವಲ್ಲದೇ ಬಾಲಿವುಡ್‌ನ ಪ್ರಮುಖ ಸಿನಿಮಾಗಳನ್ನು ವಿತರಣೆ ಮಾಡಿದ ಖ್ಯಾತಿ ಹೊಂದಿರುವ ಅಭಿಜಿತ್‌ ಎಂಟರ್‌ಪ್ರೈಸಸ್‌ ಸಂಸ್ಥೆ 'ಓಲ್ಡ್‌ಮಾಂಕ್‌' ಸಿನಿಮಾ ವಿತರಣೆ ಮಾಡುತ್ತಿದೆ. ಈ ಮೂಲಕ ಅಭಿಜಿತ್‌ ಎಂಟರ್‌ಪ್ರೈಸಸ್‌ ವಿತರಣೆ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಎಂಬ ಕೀರ್ತಿಗೆ ‘ಓಲ್ಡ್‌ಮಾಂಕ್‌’ ಪಾತ್ರವಾಗಿದೆ.

ಕನ್ನಡ ಸಿನಿಮಾ ಪ್ರೇಮಿಗಳಿಗೆ ಹೊಸ ಸಿನಿಮಾಗಳು ಬೇಕು. ಒಳ್ಳೆಯ ಹೊಸ ಸಿನಿಮಾಗಳು ಬಂದರೆ ಜನ ಖಂಡಿತಾ ಥಿಯೇಟರ್‌ಗೆ ಬರುತ್ತಾರೆ. ಮನೆಯಲ್ಲೇ ಕುಳಿತ ಜನರಿಗೂ ಒಂದು ಬ್ರೇಕ್‌ ಬೇಕಿದೆ. ಚಿತ್ರಮಂದಿರಕ್ಕೆ ಹೋಗುವ ಅವಕಾಶ ಸಿಗಬೇಕಿದೆ. ಹಾಗಾಗಿ ಈ ತಿಂಗಳಾಂತ್ಯಕ್ಕೆ ನಮ್ಮ ಸಿನಿಮಾವನ್ನು ಚಿತ್ರಮಂದಿರಕ್ಕೆ ತರುವ ನಿರ್ಧಾರ ಮಾಡಿದ್ದೇವೆ. ಇಷ್ಟುದಿನ ಜನರು ತೋರಿಸಿದ ಪ್ರೀತಿಯೇ ನಮಗೆ ಧೈರ್ಯ.
-ಶ್ರೀನಿ, ನಟ, ನಿರ್ದೇಶಕ

ಓಲ್ಡ್ ಮಾಂಕ್‌ನಲ್ಲಿ ಶ್ರೀನಿ ಲೈಫ್ ಗಿಚ್ಚ ಗಿಲಿಗಿಲಿ

ನಾಳೆ ಸಂಜೆ 7 ಗಂಟೆಗೆ ರಿವೆಂಜರ್ಸ್‌ ಹಾಡು ರಿಲೀಸ್‌: ಶ್ರೀನಿಯ ಕ್ರಿಯಾಶೀಲತೆಗೆ ಅವರ ಸಿನಿಮಾ ರಿವೆಂಜರ್ಸ್‌ ಹಾಡಿನ ಪೋಸ್ಟರ್‌ ಸಾಕ್ಷಿ. ಅವೆಂಜರ್ಸ್‌ ರೀತಿಯಲ್ಲಿ ಚಿತ್ರದ ಪಾತ್ರಗಳು ಕಾಣಿಸಿಕೊಂಡಿರುವ ಈ ಹಾಡು ಫೆ.5ರಂದು ಸಂಜೆ 7ಗಂಟೆಗೆ ಬಿಡುಗಡೆಯಾಗಲಿದೆ. ಪಾತ್ರಧಾರಿಗಳೆಲ್ಲರೂ ವಿಶಿಷ್ಟರೀತಿಯಲ್ಲಿ ಕಾಣಿಸಿಕೊಂಡಿರುವ ಹಾಡು ಇದು.