ಓಲ್ಡ್ ಮಾಂಕ್‌ನಲ್ಲಿ ಶ್ರೀನಿ ಲೈಫ್ ಗಿಚ್ಚ ಗಿಲಿಗಿಲಿ
ಇತ್ತಿಚೆಗಷ್ಟೇ ಈ ಚಿತ್ರದ ಟ್ರೇಲರನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿ, 'ಡಿಫರೆಂಟ್ ಆಗಿರುವ ಟ್ರೇಲರ್‌ನಂತೆ ಸಿನಿಮಾವೂ ಒಳ್ಳೆಯ ಮನರಂಜನೆ ನೀಡಲಿ', ಎಂದು ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
ಶ್ರೀನಿ (Srini) ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಓಲ್ಡ್ ಮಾಂಕ್' (Old Monk) ಚಿತ್ರದ ಟ್ರೇಲರ್ (Trailer) ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದೆ. ಇದೀಗ ಚಿತ್ರದ ಸ್ಪೆಷಲ್ ಹಾಡೊಂದು ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ (Youtube) ಟ್ರೆಂಡಿಂಗ್‌ನತ್ತ ಸಾಗುತ್ತಿದೆ. ಹೌದು! ಆನಂದ್ ಯೂಟ್ಯೂಬ್ ಚಾನೆಲ್‌ನಲ್ಲಿ 'ಗಿಚ್ಚ ಗಿಲಿಗಿಲಿ' (Giccha Gili Gili) ಹೆಸರಿನ ಹಾಡು ಬಿಡುಗಡೆಯಾಗಿದೆ. oppose ಹುಡುಗಿ propose ಮಾಡಿ LOVE YOU ಅಂದಳ... ಗಿಚ್ಚ ಗಿಲಿಗಿಲಿ... ಲೈಫ್ ಗಿಚ್ಚ ಗಿಲಿಗಿಲಿ ಎಂಬ ಸಾಹಿತ್ಯವಿರುವ ಈ ಹಾಡನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀನಿ ಹಾಗೂ ಚಿತ್ರದ ನಾಯಕಿ ಅದಿತಿ ಪ್ರಭುದೇವ (Aditi Prabhudeva) ಈ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. ಸೌರಭ್ ಮತ್ತು ವೈಭವ್ ಸಂಗೀತವಿರುವ ಈ ಚಿತ್ರದ ಹಾಡಿಗೆ ಮುದಕಣ್ಣ ಮೊರಬ (Mudakanna Moraba) ಸಾಹಿತ್ಯದ ಜೊತೆ ಹಾಡನ್ನು ಹಾಡಿದ್ದಾರೆ. ಎ.ಹರ್ಷ ನೃತ್ಯ ಸಂಯೋಜನೆ ಈ ಹಾಡಿಗಿದ್ದು, ಇಲ್ಲಿಯವರೆಗೂ ಈ ಹಾಡನ್ನು ೨ ಲಕ್ಷ ಸಂಗೀತ ಪ್ರಿಯರು ಕೇಳಿದ್ದಾರೆ. ಇತ್ತಿಚೆಗಷ್ಟೇ ಈ ಚಿತ್ರದ ಟ್ರೇಲರನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಬಿಡುಗಡೆ ಮಾಡಿ, 'ಡಿಫರೆಂಟ್ ಆಗಿರುವ ಟ್ರೇಲರ್‌ನಂತೆ ಸಿನಿಮಾವೂ ಒಳ್ಳೆಯ ಮನರಂಜನೆ ನೀಡಲಿ', ಎಂದು ಪುನೀತ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
ಇನ್ನು ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ ಆಗಿದ್ದು, 'ರಂಗನಾಯಕಿ' (Ranganayaki) ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ತೆರೆ ಮೇಲೆ ಜತೆಯಾಗುತ್ತಿದ್ದಾರೆ. ಚಿತ್ರದಲ್ಲಿ ಓಲ್ಡ್ ಮಾಂಕ್ ಅಂದರೆ ನಾರದ. ಪ್ರೀತಿಸಿ ಮದುವೆಯಾಗುವ ಶಾಪಕ್ಕೆ ತುತ್ತಾಗಿ ಭೂಲೋಕಕ್ಕೆ ಬರುವ ನಾರದ ಏನೆಲ್ಲಾ ರಂಪಾಟ ಮಾಡಿದ ಅನ್ನುವುದು ಚಿತ್ರದ ಕತೆಯ ಒನ್‌ಲೈನ್.
ತೆಲುಗಿನಲ್ಲೂ ತಯಾರಾಗಲಿದೆ ಓಲ್ಡ್ ಮಾಂಕ್: ಬಿಡುಗಡೆಗೂ ಮುನ್ನವೇ ಭಾರಿ ಬೇಡಿಕೆ!
ಹಿರಿಯ ನಟ ರಾಜೇಶ್, ಡಿಂಗ್ರಿ ನಾಗರಾಜ್, ಎಸ್ ನಾರಾಯಣ್. ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್, ಸುನೀಲ್ ರಾವ್, ಸುಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರದೀಪ್ ಶರ್ಮಾ ಚಿತ್ರದ ನಿರ್ಮಾಪಕರು. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಬಣ್ಣ ಹಚ್ಚಿದ್ದಾರೆ. ಇನ್ನು ತೆಲುಗಿನ (Telugu) ಕ್ಲಾಪ್ ಬೋರ್ಡ್ ಪ್ರೊಡಕ್ಷನ್‌ನ ರಾಮಕೃಷ್ಣ ನಲ್ಲಂ (Ramakrishna Nallam) ಹಾಗೂ ಸ್ಟಾರ್‌ವುಡ್ ಪ್ರೊಡಕ್ಷನ್‌ನ ರವಿ ಕಶ್ಯಪ್ (Ravi Kashyap) ಚಿತ್ರದ ರೀಮೇಕ್ ರೈಟ್ಸ್ ಖರೀದಿ ಮಾಡಿದ್ದು, ಈ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕ ಕಾಲಕ್ಕೆ ಬಿಡುಗಡೆ ಆಗುತ್ತಿದೆ.
"