Asianet Suvarna News Asianet Suvarna News

Gowli Movie: ರಗಡ್ ಲುಕ್‌ನಲ್ಲಿ ಶ್ರೀನಗರ ಕಿಟ್ಟಿ: ಫೆಬ್ರವರಿ 2ರಂದು ಚಿತ್ರದ ಟೀಸರ್ ರಿಲೀಸ್

ಶ್ರೀನಗರ ಕಿಟ್ಟಿ ಹಾಗೂ ಪಾವನಾ ಅಭಿನಯದ ಗೌಳಿ ಚಿತ್ರವನ್ನು ರಘು ಸಿಂಗಮ್‌ ನಿರ್ಮಿಸುತ್ತಿದ್ದು, ಸೂರ ನಿರ್ದೇಶನ ಮಾಡುತ್ತಿದ್ದಾರೆ. ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಮೊದಲ ಬಾರಿಗೆ ಶ್ರೀನಗರ ಕಿಟ್ಟಿ ತುಂಬಾ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

SriNagar Kitty Starring Gowli Movie Teaser to be Released on 2nd February gvd
Author
Bangalore, First Published Jan 30, 2022, 12:02 PM IST

'ಇಂತಿ ನಿನ್ನ ಪ್ರೀತಿಯ', 'ಸವಾರಿ', 'ಹುಡುಗರು', 'ಸಂಜು ವೆಡ್ಸ್ ಗೀತಾ', 'ಬಹುಪರಾಕ್' ಹೀಗೆ ಹಲವು ಹಿಟ್ ಚಿತ್ರಗಳಲ್ಲಿ ಲವರ್‌ ಬಾಯ್‌ ಪಾತ್ರದ ಮುಖಾಂತರ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದ ಶ್ರೀನಗರ ಕಿಟ್ಟಿ 'ಸಿಲಿಕಾನ್ ಸಿಟಿ' ಚಿತ್ರದ ಬಳಿಕ ಕೊಂಚ ಗ್ಯಾಪ್ ಪಡೆದಿದ್ದರು. ಹೀಗಿರುವಾಗಲೇ ಶ್ರೀನಗರ ಕಿಟ್ಟಿ (SriNagar Kitty) 'ಗೌಳಿ' (Gowli) ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು. ಕೆಲ ತಿಂಗಳ ಹಿಂದಷ್ಟೇ ಚಿತ್ರದ ಮುಹೂರ್ತ ಅದ್ದೂರಿಯಾಗಿ ನಡೆದಿತ್ತು. ರಘು ಸಿಂಗಮ್‌ (Raghu Singam) ನಿರ್ಮಿಸುತ್ತಿರುವ ಈ ಚಿತ್ರವನ್ನು ಸೂರ (Sura) ನಿರ್ದೇಶನ ಮಾಡುತ್ತಿದ್ದಾರೆ. 

ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಮೊದಲ ಬಾರಿಗೆ ಶ್ರೀನಗರ ಕಿಟ್ಟಿ ತುಂಬಾ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ ಜೋಡಿಯಾಗಿ ಪಾವನ ಗೌಡ (Paavana Gowda) ನಟಿಸುತ್ತಿದ್ದು, ಯಶ್‌ ಶೆಟ್ಟಿ (Yash Shetty) ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರತಂಡ ಚಿತ್ರದ ಟೀಸರ್ (Teaser) ಬಿಡುಗಡೆ ಮಾಡಬೇಕೆಂದು ಪ್ಲ್ಯಾನ್ ಹಾಕಿಕೊಂಡಿದೆ. ಹಾಗಾಗಿ ಫೆಬ್ರವರಿ 2ರಂದು ಸಂಜೆ 5:30ಕ್ಕೆ 'ಗೌಳಿ' ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ಶ್ರೀನಗರ ಕಿಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಬರೆದುಕೊಂಡು ಚಿತ್ರದ ಪೋಸ್ಟರನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಇದೀಗ ವೈರಲ್ (Viral) ಆಗಿದ್ದು, ಚಿತ್ರದ ಟೀಸರ್‌ಗಾಗಿ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. 

Garuda Release: ಜನವರಿ 21ರಂದು ಶ್ರೀನಗರ ಕಿಟ್ಟಿ-ಐಂದ್ರಿತಾ ರೇ ಚಿತ್ರ ರಿಲೀಸ್

ನಾನು ಇಲ್ಲಿಯವರೆಗೂ ಮಾಡಿರುವ ಚಿತ್ರಗಳದ್ದೇ ಒಂದು ಹಂತವಾದರೆ, 'ಗೌಳಿ' ಚಿತ್ರದ್ದೇ ಮತ್ತೊಂದು ಹಂತ. ಈ ಚಿತ್ರದಲ್ಲಿನ ನನ್ನ ಪಾತ್ರದ ಲುಕ್ಕು, ಕತೆಯಲ್ಲಿ ಸಾಕಷ್ಟು ಹೊಸತನದಿಂದ ಕೂಡಿದೆ. ಪೂರ್ತಿ ಗಡ್ಡ ಬಿಟ್ಟು ಹೀಗೆ ನಾನು ಕಾಣಿಸಿಕೊಂಡಿದ್ದು, ಇದೇ ಮೊದಲು. ನಿರ್ದೇಶಕ ಸೂರ ನನ್ನನ್ನು ಹೊಸ ರೀತಿಯಲ್ಲಿ ಈ ಚಿತ್ರದ ಮೂಲಕ ತೋರಿಸುತ್ತಿದ್ದಾರೆ ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ. ವಿಶೇಷವಾಗಿ ರಂಗಾಯಣ ರಘು (Rangayana Raghu) ಚಿತ್ರದ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಜ್ವಲ್‌ ಗೌಡ ಕ್ಯಾಮೆರಾ ಹಿಡಿಯುತ್ತಿದ್ದು, ಶಶಾಂಕ್‌ ಶೇಷಗಿರಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 

SriNagar Kitty Starring Gowli Movie Teaser to be Released on 2nd February gvd

ಬಹಳ ದಿನಗಳ ನಂತರ ನಿಮ್ಮ ಪ್ರೀತಿಯ ಕಿಟ್ಟಿ ಕಾಣಿಸಿಕೊಳ್ಳಲಿದ್ದಾರೆ. 4 ವರ್ಷದ ನಂತರ ಕಿಟ್ಟಿ ಸ್ಯಾಂಡಲ್‌ವುಡ್ ಸವಾರಿ ಮಾಡಲಿದ್ದು, 'ಸಿಲಿಕಾನ್ ಸಿಟಿ' ನಂತರ ಈಗ 'ಗೌಳಿ' ಸಿನಿಮಾ ಮಾಡುತ್ತಿದ್ದಾರೆ. ಕೈಯಲ್ಲಿ ರಕ್ತಸಿಕ್ತ ಕೊಡಲಿ ಹಿಡಿದು ಹಿಂದೆಂದೂ ಕಾಣದ ಲುಕ್‌ನಲ್ಲಿ ತೆರೆಯ ಮೇಲೆ ಅಬ್ಬರಿಸಲಿದ್ದಾರೆ. 'ಗೌಳಿ' ಎಂಬ ಟೈಟಲ್‌ನಲ್ಲಿಯೇ ರಕ್ತಸಿಕ್ತ ಚಿತ್ರಣ ಕಾಣಬಹುದು. ಹಾಲು ಮಾರೋ ಹುಡುಗನ ಪಾತ್ರವನ್ನು ನಟ ಮಾಡಲಿದ್ದಾರೆ. 1960ರಲ್ಲಿ ಶಿವಮೊಗ್ಗದಲ್ಲಿ ನಡೆದ ಕಥೆಯನ್ನು ಈಗಿನ ಟ್ರೆಂಡ್‌ಗೆ ಸಿದ್ಧ ಮಾಡಿಕೊಂಡು 'ಗೌಳಿ' ಚಿತ್ರ ಸಿದ್ಧವಾಗುತ್ತಿದೆ. ಆಕ್ಷನ್ ಥ್ರಿಲರ್ ಸಿನಿಮಾವನ್ನು ರಘು ಸಿಂಗಂ ನಿರ್ಮಾಣ ಮಾಡುತ್ತಿದ್ದಾರೆ.

ಧಾರಾವಾಹಿ ನಿರ್ಮಾಣಕ್ಕಿಳಿದ ಶ್ರೀನಗರ ಕಿಟ್ಟಿ; ನಾಯಕಿಯ ಹುಡುಕಾಟದಲ್ಲಿ ಸೀರಿಯಲ್‌ ತಂಡ!

ಇನ್ನು ಕೆಲ ತಿಂಗಳ ಹಿಂದಷ್ಟೇ ಈ ಚಿತ್ರದ ಸಾಹಸ ಸನ್ನಿವೇಶಗಳ ಚಿತ್ರೀಕರಣ  35 ಲಕ್ಷ ವೆಚ್ಚದಲ್ಲಿ ಮಾಡಿಕೊಳ್ಳಲಾಯಿತು. ಈ ಸಾಹಸ ಸನ್ನಿವೇಶಗಳಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೆ ಚಿತ್ರದ ನಿರ್ಮಾಪಕ ರಘು ಸಿಂಗಂ ಅವರು ಜೀವವಿಮೆ ಮಾಡಿಸಿದ ನಂತರವೇ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ಮಾಡಲಾಯಿತು. ನೆಲಮಂಗಲ ಬಳಿಯ ಅರಿಶಿಣಕುಂಟೆ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಕಟಾವಿಗೆ ಬಂದಿದ್ದ 3 ಎಕರೆ ಬಾಳೆತೋಟ ಹಾಗೂ 2 ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆದು ಚಿತ್ರೀಕರಣಕ್ಕೆ ಬಳಸಿಕೊಂಡಿರುವುದು ವಿಶೇಷ. 130ಕ್ಕೂ ಹೆಚ್ಚು ಸಾಹಸ ಕಲಾವಿದರು ಹಾಗೂ ಫೈಟರ್ಸ್‌ಗಳು ಈ ಸನ್ನಿವೇಶದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ವಿಕ್ರಂ ಮೋರ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದು, ಶ್ರೀನಗರ ಕಿಟ್ಟಿ ಹಾಗೂ ಯಶ್ ಶೆಟ್ಟಿ ಗುಂಪಿನ ನಡುವೆ ಹೊಡೆದಾಡುವ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಳ್ಳಲಾಗಿದೆ.
 

Follow Us:
Download App:
  • android
  • ios