ನಟಿ ಶ್ರೀಲೀಲಾ ಅವರಿಗೆ ಖ್ಯಾತ ನಿರ್ಮಾಪಕರೊಬ್ಬರು 10 ಕೋಟಿ ರೂಪಾಯಿ ಆಫರ್ ನೀಡಿ ಚಿತ್ರವೊಂದಕ್ಕೆ ಸಹಿ ಮಾಡಲು ಹೇಳಿದ್ದರೂ ನಟಿ ತಿರಸ್ಕರಿಸಿದ್ದಾರೆ. ಏನಿದಕ್ಕೆ ಕಾರಣ?
ಟಾಲಿವುಡ್ನಲ್ಲಿ (Tollywood) ಸದ್ಯ ನಟಿ, ಕನ್ನಡತಿ ಶ್ರೀಲೀಲಾ ಬಿಜಿಯಾಗಿದ್ದಾರೆ. 'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ಶ್ರೀಲೀಲಾ ಈಗ ಟಾಲಿವುಡ್ನಲ್ಲೇ ನೆಲೆಯೂರಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಈಕೆಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆರೇಳು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ಶ್ರೀಲೀಲಾ ನಟಿಸಿದ್ದಾರೆ, ಕೆಲವೊಂದು ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಇದಾಗಲೇ ಬಾಲಕೃಷ್ಣ, ಪವನ್ ಕಲ್ಯಾಣ್ ಅವರಂಥ ಸ್ಟಾರ್ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ಶ್ರೀಲೀಲಾ. ಮಹೇಶ್ ಬಾಬು ಜೊತೆಗೂ ಶ್ರೀಲೀಲಾ ನಟಿಸಲಿದ್ದಾರೆ ಎನ್ನುವ ಸುದ್ದಿಯಿದೆ. ರವಿತೇಜಾ ಜೊತೆ ನಟಿಸಿದ 'ಧಮಾಕ' ಸಿನಿಮಾ ಕೂಡ ಸೂಪರ್ ಹಿಟ್ ಆಗಿದ್ದು, ಒಳ್ಳೆಯ ಜನಪ್ರಿಯತೆ ತಂದುಕೊಟ್ಟಿದೆ. ಇದೀಗ ಇವರು ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಶ್ರೀಲೀಲಾ ಅವರು ಭಾರಿ ಸುದ್ದಿಯಾಗಿದ್ದಕ್ಕೆ ಕಾರಣ, ಶೂಟಿಂಗ್ ಟೈಮ್ನಲ್ಲಿ ನಟ ನಂದಮೂರಿ ಬಾಲಕೃಷ್ಣ ಅವರು ನಟಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿದ್ದರಿಂದ. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಶ್ರೀಲೀಲಾ ಶೂಟಿಂಗ್ ಸಂದರ್ಭದಲ್ಲಿ ಶ್ರೀಲೀಲಾಗೆ ಬಾಲಯ್ಯ ಕೆನ್ನೆಗೆ ಬಾರಿಸಿದರು ಎನ್ನುವ ಸುದ್ದಿ ಸಖತ್ ಚರ್ಚೆಗೆ ಕಾರಣವಾಗಿದೆ. ಬಾಲಕೃಷ್ಣ ಜೊತೆ ಎನ್ ಬಿಕೆ 108 ಸಿನಿಮಾದಲ್ಲಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರೀಲೀಲಾ ಬಾಲಕೃಷ್ಣಗೆ ಸೊಸೆಯ ಪಾತ್ರ ಮಾಡುತ್ತಿದ್ದಾರೆ. ಆದರೆ ಸಿನಿಮಾ ಶೂಟಿಂಗ್ನಲ್ಲಿ ಮುತ್ತುಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಬಾಲಯ್ಯ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದಾರೆ ಎಂದು ಸಕತ್ ಸುದ್ದಿಯಾಗಿತ್ತು.
ಆದರೆ ಅಸಲಿಯತ್ತೇ ಬೇರೆಯದ್ದು ಎನ್ನಲಾಗಿದೆ. ವರದಿಯೊಂದರ ಪ್ರಕಾರ ಕೆನ್ನೆಗೆ ಹೊಡೆದಿರುವುದು, ಸಿನಿಮಾದ ದೃಶ್ಯವೊಂದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಲಾಗುತ್ತಿದೆ. ದೃಶ್ಯ ನೈಜವಾಗಿರಲಿ ಎನ್ನುವ ಕಾರಣಕ್ಕೆ ಶ್ರೀಲೀಲಾ ಅವರೇ ತಮ್ಮ ಕೆನ್ನೆಗೆ ನಿಜವಾಗಿಯೂ ಹೊಡೆಯುವಂತೆ ಬಾಲಕೃಷ್ಣಗೆ ಹೇಳಿದ್ದರು ಎಂದು ವರದಿಯಾಗಿದೆ. ನಂತರ ಬಾಲಯ್ಯ ನಟಿಯ ಕೆನ್ನೆಗೆ ಜೋರಾಗಿಯೇ ಬಾರಿಸಿದ್ದರಂತೆ. ಇದನ್ನು ನೋಡಿ ಎಲ್ಲರೂ ಶಾಕ್ (Shock) ಆಗಿ ಒಂದು ಕ್ಷಣ ಸೈಲೆಂಟ್ ಆಗಿ ನಿಂತು ಬಿಟ್ಟಿರುವುದಾಗಿ ಹೇಳಲಾಗುತ್ತಿದೆ. ಸೀನ್ ಮುಗಿದ ನಂತರ ನಿರ್ದೇಶಕರು ಕೂಡ ಕಟ್ ಹೇಳಲಿಲ್ಲವಂತೆ. ಈ ಸನ್ನಿವೇಶ ಬಹಳ ನೈಜವಾಗಿ ಮೂಡಿ ಬಂದಿದೆ ಎನ್ನಲಾಗುತ್ತಿದೆ. ನಿಜ ಯಾವುದು ಎನ್ನುವುದನ್ನು ನಟಿಯೇ ಹೇಳಬೇಕಿದ್ದು, ಅದರ ಬಗ್ಗೆ ನಟಿ ಇದುವರೆಗೆ ಮಾತನಾಡಲಿಲ್ಲ.
ಕನ್ನಡತಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ ನಟ ನಂದಮೂರಿ ಬಾಲಕೃಷ್ಣ! ಆಗಿದ್ದೇನು?
ಆದರೆ ಇದರ ನಡುವಯೇ, ಇದೀಗ ಮತ್ತೊಂದು ವಿಷಯಕ್ಕೆ ನಟಿ ಶ್ರೀಲೀಲಾ (Shreeleela) ಸುದ್ದಿಯಾಗುತ್ತಿದ್ದಾರೆ. ಅದೇನೆಂದರೆ, ನಟಿಗೆ ಕೋಟಿ ಕೋಟಿ ರೂಪಾಯಿಗೆ ಸಿನಿಮಾಕ್ಕೆ ಆಫರ್ ಬಂದಿತ್ತು. ಆದರೆ ನಟಿ ಶ್ರೀಲೀಲಾ ಅದನ್ನು ರಿಜೆಕ್ಟ್ ಮಾಡಿದ್ದಾರೆ. ಅದಕ್ಕೆ ಕಾರಣ, ಬೋಲ್ಡ್ ಕಂಟೆಂಟ್ ಎನ್ನುವ ವಿಷಯ ಬಹಿರಂಗಗೊಂಡಿದೆ. ಪ್ರಖ್ಯಾತ ಸ್ಟಾರ್ ಡೈರೆಕ್ಟರ್ ಒಬ್ಬರು ಶ್ರೀಲೀಲಾ ಅವರಿಗೆ ಈ ಆಫರ್ ನೀಡಿದ್ದರು ಎನ್ನುವುದು ವರದಿಯಾಗಿದೆ. ಆದರೆ ಅದರಲ್ಲಿ ಬೋಲ್ಡ್ ಕಂಟೆಂಟ್ ಇರುವುದಾಗಿ ಹೇಳಿದ್ದರಂತೆ. ಇದನ್ನು ಒಪ್ಪಿಕೊಂಡರೆ 10 ಕೋಟಿ ಸಂಭಾವನೆ ನೀಡುವುದಾಗಿ ಹೇಳಿದ್ದರಂತೆ. ಆದರೆ ನಟಿ ಶ್ರೀಲೀಲಾ, ಆದರೆ ಶ್ರೀಲೀಲಾ ಈ ಸಿನಿಮಾ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ನಾನು ಎಕ್ಸ್ಪೋಸ್ ಮಾಡುವ ಸೀನ್ಗಳಲ್ಲಿ ನಟಿಸೋದಿಲ್ಲ. 100 ಕೋಟಿ ಕೊಟ್ಟರೂ ನಾನು ಇಂತಹ ಅಶ್ಲೀಲ ಎನ್ನುವ ಬೋಲ್ಡ್ ಕಂಟೆಂಟ್ ಇರುವ ಸಿನಿಮಾ ಮಾಡುವುದಿಲ್ಲ. ಅಂತಹ ದೃಶ್ಯ ಮಾಡಬೇಕು ಅಂದ್ರೆ ಸಿನಿಮಾವನ್ನೇ ಬಿಟ್ಟು ಬಿಡುವುದಾಗಿ ಶ್ರೀಲೀಲಾ ಹೇಳಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೆ ಶ್ರೀಲೀಲಾ ಅವರು, ನಿರ್ದೇಶಕ ರಾಘವೇಂದ್ರ ರಾವ್ (Raghavendra Rao) ಅವರ ಪೆಲ್ಲಿ ಸಂದಡ್ ಚಿತ್ರದ ಮೂಲಕ ನಾಯಕಿಯಾಗಿ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು, ಮೊದಲ ಸಿನಿಮಾದಲ್ಲಿಯೇ ಯಶ ಕಂಡವರು. ನಂತರ ರವಿತೇಜ ಜೊತೆ ಧಮಾಕಾ ಚಿತ್ರದಲ್ಲಿ ನಟಿಸಿದರು. ನಿರ್ದೇಶಕ ಗೋಪಿಚಂದ್ ಮಲಿನೇನಿ ಹಾಗೂ ರವಿತೇಜ ಹೊಸ ಸಿನಿಮಾ ಮಾಡುತ್ತಿದ್ದಾರೆ. ಮೈತ್ರಿ ಮೂವೀಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಲಿದ್ದಾರಂತೆ. ‘ದಿ ಚೆನ್ನೈ ಸ್ಟೋರಿ’ ಎಂಬ ಇಂಗ್ಲಿಷ್ ಚಿತ್ರದಲ್ಲಿ ನಟಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಸಿನಿಮಾದಲ್ಲಿ ಮತಾಂತರದ ವಿರುದ್ಧ ಹೋರಾಡಿದ ಅದಾ ಶರ್ಮಾ ಕನ್ವರ್ಟ್? ವೈರಲ್ ಫೋಟೋ ಸತ್ಯಾಸತ್ಯತೆ ಏನು?
