Asianet Suvarna News Asianet Suvarna News

ಕನ್ನಡತಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ ನಟ ನಂದಮೂರಿ ಬಾಲಕೃಷ್ಣ! ಆಗಿದ್ದೇನು?

ಕನ್ನಡತಿ ಶ್ರೀಲೀಲಾ ಅವರು ತೆಲುಗಿನ ಚಿತ್ರವೊಂದರಲ್ಲಿ ಶೂಟಿಂಗ್​ ನಡೆಸುತ್ತಿದ್ದ ವೇಳೆ ನಟ ನಂದಮೂರಿ ಬಾಲಕೃಷ್ಣ ಅವರು ಕಪಾಳಮೋಕ್ಷ ಮಾಡಿರುವುದು ಭಾರಿ ಸುದ್ದಿಯಾಗಿದೆ. ಏನಿದು ಘಟನೆ? 
 

Balakrishna SLAPPED Sreeleela On The Sets Of NBK 108 Leaving Her Crying Inconsolably
Author
First Published May 28, 2023, 5:21 PM IST

ಟಾಲಿವುಡ್​ನಲ್ಲಿ (Tollywood) ಸದ್ಯ ನಟಿ,  ಕನ್ನಡತಿ ಶ್ರೀಲೀಲಾ ಬಿಜಿಯಾಗಿದ್ದಾರೆ. 'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ಶ್ರೀಲೀಲಾ ಈಗ ಟಾಲಿವುಡ್​ನಲ್ಲೇ ನೆಲೆಯೂರಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಈಕೆಗೆ  ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆರೇಳು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ  ಶ್ರೀಲೀಲಾ ನಟಿಸಿದ್ದಾರೆ, ಕೆಲವೊಂದು ಚಿತ್ರಗಳ ಶೂಟಿಂಗ್​ ನಡೆಯುತ್ತಿದೆ. ಇದಾಗಲೇ ಬಾಲಕೃಷ್ಣ, ಪವನ್ ಕಲ್ಯಾಣ್​ ಅವರಂಥ ಸ್ಟಾರ್ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ಶ್ರೀಲೀಲಾ. ಮಹೇಶ್ ಬಾಬು ಜೊತೆಗೂ ಶ್ರೀಲೀಲಾ ನಟಿಸಲಿದ್ದಾರೆ ಎನ್ನುವ ಸುದ್ದಿಯಿದೆ.  ರವಿತೇಜಾ ಜೊತೆ ನಟಿಸಿದ 'ಧಮಾಕ' ಸಿನಿಮಾ ಕೂಡ ಸೂಪರ್ ಹಿಟ್ ಆಗಿದ್ದು, ಒಳ್ಳೆಯ ಜನಪ್ರಿಯತೆ ತಂದುಕೊಟ್ಟಿದೆ. ಇದೀಗ ಇವರು ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜೊತೆ ಸಿನಿಮಾ ಮಾಡುತ್ತಿದ್ದಾರೆ.  ಶೂಟಿಂಗ್ ಟೈಮ್​ನಲ್ಲಿ ನಟ ನಂದಮೂರಿ ಬಾಲಕೃಷ್ಣ ಅವರು ನಟಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.  

ಚಿತ್ರೀಕರಣದಲ್ಲಿ  ಪಾಲ್ಗೊಂಡಿದ್ದ ಶ್ರೀಲೀಲಾ  ಶೂಟಿಂಗ್ ಸಂದರ್ಭದಲ್ಲಿ ಶ್ರೀಲೀಲಾಗೆ ಬಾಲಯ್ಯ ಕೆನ್ನೆಗೆ ಬಾರಿಸಿದರು ಎನ್ನುವ ಸುದ್ದಿ ಸಖತ್ ಚರ್ಚೆಗೆ ಕಾರಣವಾಗಿದೆ. ಬಾಲಕೃಷ್ಣ ಜೊತೆ ಎನ್ ಬಿಕೆ 108 ಸಿನಿಮಾದಲ್ಲಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರೀಲೀಲಾ ಬಾಲಕೃಷ್ಣಗೆ ಸೊಸೆಯ ಪಾತ್ರ ಮಾಡುತ್ತಿದ್ದಾರೆ. ಆದರೆ ಸಿನಿಮಾ ಶೂಟಿಂಗ್​ನಲ್ಲಿ ಮುತ್ತುಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಬಾಲಯ್ಯ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದಾರೆ ಎಂದು ಸಕತ್​ ಸುದ್ದಿಯಾಗಿದೆ.

ಸಾಮಾನ್ಯವಾಗಿ ಬಾಲಯ್ಯ (Balayya) ಎಲ್ಲರೊಂದಿಗೂ ಆತ್ಮೀಯವಾಗಿಯೇ ನಡೆದುಕೊಳ್ಳುತ್ತಾರೆ. ಆದರೆ  ಕೋಪ ಬಂದಾಗ ಮಾತ್ರ ಅವರು ಬೇರೊಬ್ಬರ ಮೇಲೆ ರೇಗುತ್ತಾರೆ. ಇವರು ಸಖತ್ ಕೋಪಿಷ್ಠ ಎನ್ನುವುದು ಪದೇ ಪದೇ ಸಾಬೀತಾಗಿದೆ. ಚಿತ್ರೀಕರಣದ ಸ್ಥಳದಲ್ಲಿ ಬಾಲಯ್ಯ ಯಾವತ್ತಿಗೂ ಗರಂ ಆಗಿರುತ್ತಾರೆ ಎನ್ನುವುದು ಹಲವು ಘಟನೆಗಳು ನೆನಪಿಸುತ್ತವೆ. ಆದರೆ, ಅವರು ಈವರೆಗೂ ನಟಿಯರ ಮೇಲೆ ಕೈ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟಿಯೊಬ್ಬರ ಮೇಲೆ ಬಾಲಯ್ಯ ಕೈ ಮಾಡಿದ್ದಾರೆ ಎನ್ನುವುದು ಹಾಟ್ ಟಾಪಿಕ್ ಆಗಿದೆ. ಅಂದರೆ ಬಾಲಕೃಷ್ಣ ಅವರು ಈ ಹಿಂದೆ ಕೂಡ  ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದರು. ಆದರೆ  ಬಾಲಕೃಷ್ಣ ಅವರು ಶ್ರೀಲೀಲಾ ಮೇಲೆ ಸಿಟ್ಟಾಗಿದ್ಯಾಕೆ ಎನ್ನುವ ಕುರಿತು ಥಹರೇವಾರಿ ಗಾಳಿಸುದ್ದಿಗಳು ಹರಿದಾಡುತ್ತಿವೆ.  ಹೊಡೆಯುವಂತ ತಪ್ಪೇನು  ಶ್ರೀಲೀಲಾ ಮಾಡಿದ್ದರು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಶೂಟಿಂಗ್ ಸ್ಪಾಟ್​​ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ

ಅನಿಲ್‌ ರಾವಿಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಲಕೃಷ್ಣ (Balakrishna) ಅವರು ನಟಿಸಿರುವ NBK108 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸಿನಿಮಾ ನಾಯಕಿಯಾಗಿ ಕಾಜಲ್‌ ಅವಗರವಾಲ್‌ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಶ್ರೀಲೀಲಾ ಬಾಲಯ್ಯ ಅವರ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಶೂಟಿಂಗ್​ನಲ್ಲಿ ನಡೆದಿರುವ ಈ ಘಟನೆ ಮಾತ್ರ ಶಾಕ್​ ಆಗಿದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಶೂಟಿಂಗ್ ಬಳಿಕ  ಅಂದರೆ ಬಾಲಕೃಷ್ಣ ಅವರಿಂದ ಹೊಡೆತ ತಿಂದ ಬಳಿಕ  ಶ್ರೀಲೀಲಾ ಅಳುತ್ತಾ ಹೊರಟು ಹೋದರು ಎನ್ನಲಾಗುತ್ತಿದೆ.

ಆದರೆ ಅಸಲಿಯತ್ತೇ ಬೇರೆಯದ್ದು ಎನ್ನಲಾಗಿದೆ. ವರದಿಯೊಂದರ ಪ್ರಕಾರ ಕೆನ್ನೆಗೆ ಹೊಡೆದಿರುವುದು,  ಸಿನಿಮಾದ ದೃಶ್ಯವೊಂದಕ್ಕೆ ಸಂಬಂಧಿಸಿದ್ದಾಗಿದೆ ಎಂದು  ಹೇಳಲಾಗುತ್ತಿದೆ. ದೃಶ್ಯ ನೈಜವಾಗಿರಲಿ ಎನ್ನುವ ಕಾರಣಕ್ಕೆ ಶ್ರೀಲೀಲಾ ಅವರೇ ತಮ್ಮ ಕೆನ್ನೆಗೆ ನಿಜವಾಗಿಯೂ ಹೊಡೆಯುವಂತೆ ಬಾಲಕೃಷ್ಣಗೆ ಹೇಳಿದ್ದರು ಎಂದು ವರದಿಯಾಗಿದೆ.  ನಂತರ ಬಾಲಯ್ಯ ನಟಿಯ ಕೆನ್ನೆಗೆ ಜೋರಾಗಿಯೇ ಬಾರಿಸಿದ್ದರಂತೆ. ಇದನ್ನು ನೋಡಿ ಎಲ್ಲರೂ ಶಾಕ್ (Shock) ಆಗಿ ಒಂದು ಕ್ಷಣ ಸೈಲೆಂಟ್ ಆಗಿ ನಿಂತು ಬಿಟ್ಟಿರುವುದಾಗಿ ಹೇಳಲಾಗುತ್ತಿದೆ.  ಸೀನ್ ಮುಗಿದ ನಂತರ ನಿರ್ದೇಶಕರು ಕೂಡ ಕಟ್ ಹೇಳಲಿಲ್ಲವಂತೆ. ಈ ಸನ್ನಿವೇಶ ಬಹಳ ನೈಜವಾಗಿ ಮೂಡಿ ಬಂದಿದೆ ಎನ್ನಲಾಗುತ್ತಿದೆ. ನಿಜ ಯಾವುದು ಎನ್ನುವುದನ್ನು ನಟಿಯೇ ಹೇಳಬೇಕಿದೆ. 

DDLJ: ಕಾಜೋಲ್​ ಸ್ಕರ್ಟ್​ ನೋಡಿ ಕಣ್​ಕಣ್​ ಬಿಟ್ಟಿದ್ರಂತೆ ನಿರ್ದೇಶಕ, ಅಷ್ಟಕ್ಕೂ ಆಗಿದ್ದೇನು?

Follow Us:
Download App:
  • android
  • ios