Asianet Suvarna News Asianet Suvarna News

ಭಗವಾನ್‌ ಶ್ರೀಕೃಷ್ಣ ಪರಮಾತ್ಮ ಚಿತ್ರಕ್ಕೆ ಸೋನಾಲ್‌ ನಾಯಕಿ!

ನಟಿ ಸೋನಾಲ್‌ ಮೊಂತೆರೋ ಈಗ ‘ಭಗವಾನ್‌ ಶ್ರೀಕೃಷ್ಣ ಪರಮಾತ್ಮ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. 

Sonal Monteiro signs new film project Srikrishna Paramathma with Dhruvan vcs
Author
Bangalore, First Published Aug 12, 2021, 9:30 AM IST
  • Facebook
  • Twitter
  • Whatsapp

 ಅನೂಪ್‌ ಅಂಟೋನಿ ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಿರ್ಮಾಪಕಿ ದಿ.ಪಾರ್ವತಮ್ಮ ರಾಜ್‌ಕುಮಾರ್‌ ಅವರ ಸೋದರನ ಪುತ್ರ ಧ್ರುವನ್‌ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದಾರೆ.

ಲವ್ 360 ಪಾತ್ರ ಸಖತ್ ಚಾಲೆಂಜಿಂಗ್ ಎಂದ ಲವ್‌ ಮಾಕ್ಟೇಲ್ ಚೆಲುವೆ

ಚಿತ್ರದ ಹೆರಿನಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದಲ್ಲಿ ವಿಶೇಷವಾದ ಕತೆ ಇದೆ. ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ತುಂಬಾ ಮಹತ್ವ ಇದ್ದು, ಈ ಪಾತ್ರವನ್ನು ಸೋನಾಲ್‌ ಅವರಿಗೆ ನಿಭಾಯಿಸುವ ಶಕ್ತಿ ಎನ್ನುವ ಕಾರಣಕ್ಕೆ ಅವರನ್ನು ಚಿತ್ರದ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸೋನಾಲ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಅನೂಪ್‌ ಅಂಟೋನಿ ತಮ್ಮ ಚಿತ್ರದ ನಾಯಕಿ ಯಾರೆಂದು ಘೋಷಣೆ ಮಾಡಿದ್ದಾರೆ.

Sonal Monteiro signs new film project Srikrishna Paramathma with Dhruvan vcs

ಪದವಿಪೂರ್ವ ಚಿತ್ರಕ್ಕೂ ಜತೆಯಾದ ಸೋನಾಲ್‌

ನಿರ್ದೇಶಕ ಯೋಗರಾಜ್‌ ಭಟ್‌ ತಂಡದಲ್ಲಿ ಗುರುತಿಸಿಕೊಂಡಿರುವ ಹರಿಪ್ರಸಾದ್‌ ಜಯಣ್ಣ ನಿರ್ದೇಶನದ ‘ಪದವಿಪೂರ್ವ’ ಚಿತ್ರದಲ್ಲಿ ನಟಿ ಸೋನಾಲ್‌ ಮೊಂತೆರೋ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪೃಥ್ವಿ ಶಾಮನೂರು, ಅಂಜಲಿ ಅನೀಶ್‌, ಯಶ ಶಿವಕುಮಾರ್‌ ನಟಿಸುತ್ತಿದ್ದಾರೆ. ಯೋಗರಾಜ್‌ ಭಟ್‌ ಹಾಗೂ ರವಿ ಶಾಮನೂರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ

Follow Us:
Download App:
  • android
  • ios