ಸ್ನೇಹಕ್ಕೆ ಸ್ನೇಹ, ಪ್ರೀತಿ ಪ್ರೀತಿ ಹಾಡು ಈಗಲೂ ಎಲ್ಲರ ಫೇವರಿಟ್. ಈ ಸಿಪಾಯಿ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಹಲವು ಇತಿಹಾಸ ಬರೆದಿದೆ. ಅಂದು ಅಮಿತಾಬ್ ಬಚ್ಚನ್ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ತೆಲುಗು ಸ್ಟಾರ್ ಚಿರಂಜೀವಿ ಈ ಸಿಪಾಯಿ ಸಿನಿಮಾದಲ್ಲಿ ನಟಿಸಲು ಬೆಂಗಳೂರಿನ ದೇವನಹಳ್ಳಿಯಲ್ಲಿ 3 ಏಕರೆ ಜಾಗ ಕೊಟ್ಟಿದ್ರಾ?
ಬೆಂಗಳೂರು (ನ.20) ಕನ್ನಡ ಚಿತ್ರರಂಗದಲ್ಲಿ ಹಲವು ಇತಿಹಾಸ ಬರೆದ ಸಿನಿಮಾ ಸಿಪಾಯಿ. 1996ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಂದು ಬಾಲಿವುಡ್ನ ಅಮಿತಾಬ್ ಬಚ್ಚನ್ಗಿಂತ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ತೆಲುಗಿನ ಚಿರಂಜೀವಿ ಈ ಸಿನಿಮಾದಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದಾರೆ. ಸೌಂದರ್ಯ ನಾಯಕಿಯಾದ ಈ ಸಿನಿಮಾ ತೆಲುಗು ಹಾಗೂ ತಮಿಳಿಗೆ ರಿಮೇಕ್ ಆಗಿದೆ. ಇಷ್ಟೇ ಅಲ್ಲ ಈ ಸಿನಿಮಾದಲ್ಲಿ 11 ಹಾಡುಗಳಿವೆ. ವಿಶೇಷ ಅಂದರೆ 11 ಹಾಡುಗಳು ಸೂಪರ್ ಹಿಟ್. 1996ರಲ್ಲಿ 1.5 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದ ಚಿರಂಜೀವಿ ಈ ಸಿಪಾಯಿ ಸಿನಿಮಾದಲ್ಲಿ ನಟಿಸಲು ನೀಡಿದ್ದ ಆಫರ್ ಕುರಿತು ಇದೀಗ ಚರ್ಚೆಯಾಗುತ್ತಿದೆ. ಸಿಪಾಯಿ ಸಿನಿಮಾದಲ್ಲಿ ನಟಿಸಲು ಚಿರಂಜೀವಿಗೆ, ರವಿಚಂದ್ರನ್ ಬೆಂಗಳೂರಿನ ದೇವನಹಳ್ಳಿಯಲ್ಲಿ 3 ಏಕರೆ ಜಾಗ ಕೊಟ್ಟಿದ್ದರು ಅನ್ನೋ ಮಾತುಗಳು ಅಂದು ಕೇಳಿಬಂದಿತ್ತು. ದೇವನಹಳ್ಳಿಯಲ್ಲಿ ಚಿರಂಜೀವಿ 3 ಏಕರೆ ಭೂಮಿ ಹೊಂದಿದ್ದಾರೆ. ಅರಮನೆಯಂತ ಮನೆಯೂ ಕಟ್ಟಿಸಿದ್ದಾರೆ. ಆದರೆ ಈ ಭೂಮಿ ಹಾಗೂ ರವಿಚಂದ್ರನ್ ಕುರಿತು ಅಸಲಿ ಕತೆ ಏನು?
ಚಿರಂಜೀವಿ ಕನ್ನಡಕ್ಕೆ ಎಂಟ್ರಿಕೊಟ್ಟ ಸಿನಿಮಾ ಸಿಪಾಯಿ. 1992ರಲ್ಲೇ ಚಿರಂಜೀವಿ 1.25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಕರ್ನಾಟಕದಲ್ಲೂ ಚಿರಂಜೀವಿ ಕ್ರೇಜ್ ಹೆಚ್ಚಿತ್ತು. ಸತತ ಸೂಪರ್ ಹಿಟ್ ಸಿನಿಮಾ ಮೂಲಕ ಚಿರಂಜೀವಿ ಬ್ಯೂಸಿಯಾಗಿದ್ದರು. ಇದರ ನಡುವೆ ರವಿಚಂದ್ರನ್ ಅವರ ಸಿಪಾಯಿ ಸಿನಿಮಾದಲ್ಲಿ ನಟಿಸಲು ಚಿರಂಜೀವಿ ಒಪ್ಪಿಕೊಂಡಿದ್ದರು. 1996ರ ವೇಳೆಗೆ ಚಿರಂಜೀವಿ ಸಂಭಾವನೆ 1.5 ಕೋಟಿ ತಲುಪಿತ್ತು. ದುಬಾರಿ ಮೊತ್ತದ ಬದಲು ಕ್ರೇಜಿ ಸ್ಟಾರ್ ರವಿಚಂದ್ರನ್ ದೇವನಹಳ್ಳಿಯಲ್ಲಿ 3 ಏಕರೆ ಭೂಮಿಯನ್ನು ಚಿರಂಜೀವಿ ಹೆಸರಿಗೆ ಮಾಡಿಕೊಟ್ಟಿದ್ದರು ಎಂದು ಸಿನಿಮಾ ಬಿಡುಗಡೆಯಾದಾಗಲೇ ಭಾರಿ ಸುದ್ದಿಯಾಗಿತ್ತು.
ದೇವನಹಳ್ಳಿಯಲ್ಲಿ ಚಿರಂಜೀವಿಗೆ ಇದೆ 3 ಏಕರೆ ಭೂಮಿ
ಸಿಪಾಯಿ ಸಿನಿಮಾದಲ್ಲಿ ನಟಿಸಲು ರವಿಚಂದ್ರನ್ ನೇರವಾಗಿ ಚಿರಂಜೀವಿಗೆ ಕರೆ ಮಾಡಿದ್ದರು. ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದಿದ್ದರು. ರವಿಚಂದ್ರನ್ ಫೋನ್ ಮಾಡಿದ ತಕ್ಷಣವೇ ಒಪ್ಪಿಕೊಂಡಿದ್ದರು. ಬಳಿಕ ಚಿರಂಜೀವಿ ಮನೆಗೆ ತೆರಳಿ 12 ದಿನದ ಕಾಲ್ಶೀಟ್ ಬೇಕು ಎಂದು ಕೇಳಿದ್ದರು. ಅಂದು ಚಿರಂಜೀವಿ 12 ದಿನದ ಕಾಲ್ ಶೀಟ್ ದುಬಾರಿ ಮಾತ್ರವಲ್ಲ, ಅಸಾಧ್ಯವಾಗಿತ್ತು. ಆದರೆ ರವಿಚಂದ್ರನ್ ಮಾತಿಗೆ ಒಪ್ಪಿಕೊಂಡಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ದೇವನಹಳ್ಳಿಯಲ್ಲಿ 3 ಏಕರೆ ಭೂಮಿ ನೀಡಿರುವ ಕುರಿತು ಯಾವುದೇ ದಾಖಲೆ ಇಲ್ಲ. ದೇವನಹಳ್ಳಿಯಲ್ಲಿ ಚಿರಂಜೀವಿಗೆ 3 ಏಕರೆ ಜಾಗವಿರುವುದು ಸತ್ಯ. ಇದರಲ್ಲಿ ಫಾರ್ಮ್ ಹೌಸ್ ಇದೆ. ಆದರೆ ಈ ಭೂಮಿ ಕೊಟ್ಟಿರುವುದು ರವಿಚಂದ್ರನ್ ಅನ್ನೋದಕ್ಕೆ ದಾಖಲೆ ಇಲ್ಲ.
ಚಿರಂಜೀವಿಗೆ ರವಿಚಂದ್ರನ್ ಕೊಟ್ಟ ಸಂಭಾವನೆ ಎಷ್ಟು
ಸಿಪಾಯಿ ಸಿನಿಮಾದಲ್ಲಿ ನಟಿಸಲು ರವಿಚಂದ್ರನ್ ಮಾತಿಗೆ ಒಪ್ಪಿಕೊಂಡಿದ್ದರು. ಅಲ್ಲು ಅರವಿಂದ್ ಬಳಿ ಸಂಭಾವನೆ ಬಗ್ಗೆ ರವಿಚಂದ್ರನ್ ಮಾತನಾಡಿದ್ದರು. ಈ ವೇಳೆ ನಿಮ್ಮ ಸ್ನೇಹ, ಪ್ರೀತಿಗೆ ಚಿರಂಜೀವಿ ಸಿನಿಮಾ ಒಪ್ಪಿಕೊಂಡಿದ್ದಾರೆ. ನೀವು ಎಷ್ಟು ಕೊಡುತ್ತೀರೋ ಕೊಡಿ ಎಂದಿದ್ದರು. ಸಿನಿಮಾ ರಿಲೀಸ್ಗೂ ಎರಡು ದಿನ ಮೊದಲು ಒಂದಷ್ಟು ಹಣ ಚಿರಂಜೀವಿಗೆ ನೀಡಿದ್ದರು. ಈ ವೇಳೆ ರಿಲೀಸ್ ಆದ ಮೇಲೆ ಕೊಡಿ, ಪರ್ವಾಗಿಲ್ಲ ಎಂದಿದ್ದರು. ಆದರೆ ಮತ್ತೆ ಹಣ ಇರುತ್ತೋ ಇಲ್ವೋ ಎಂದು ಒಂದಷ್ಟು ಮೊತ್ತ ಸಂಭಾವನೆ ರೂಪದಲ್ಲಿ ನೀಡಿದ್ದರು. ಈ ಕುರಿತು ರವಿಚಂದ್ರನ್ ಕೆಲ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ.
1996ರಲ್ಲಿ ಬಿಡುಗಡೆಯಾದ ಕನ್ನಡದ ಸಿಪಿಯಾ ಸಿನಿಮಾ ಬರೋಬ್ಬರಿ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಕನ್ನಡ ಸಿನಿಮಾದಲ್ಲಿ ಹಲವು ದಾಖಲೆ ಬರೆದಿತ್ತು. ಸಿಪಾಯಿ ಸಿನಿಮಾ 1998ರಲ್ಲಿ ತೆಲುಗಿನಲ್ಲಿ ಮೇಜರ್ ಎಂಬ ಹೆಸರಿನಲ್ಲಿ ರಿಮೇಕ್ ಆಗಿತ್ತು. ಇದೇ ವೇಳೆ ತಮಿಳಿಗೂ ಡಬ್ ಮಾಡಲಾಗಿತ್ತು.















