ಸಿರಿಗಮಪದಲ್ಲಿ ವಿಜಯ್ ಪ್ರಕಾಶ್‌ಗೆ ಪತ್ನಿ ಮಹತಿ ಅಚ್ಚರಿಯ ಭೇಟಿ ನೀಡಿದರು. ಸಂಕ್ರಾಂತಿ ವಿಶೇಷ ಕಾರ್ಯಕ್ರಮದಲ್ಲಿ ಮಹತಿ, ವಿಜಯ್‌ರನ್ನು ಹಾಡಿಹೊಗಳಿ, ಪ್ರೀತಿಯ ಶಾಯರಿ ಹೇಳಿದರು. ವಿಜಯ್ ಪ್ರಕಾಶ್, ಮಹತಿಯನ್ನು ತಮ್ಮ ಶಕ್ತಿ, ಬೆನ್ನೆಲುಬು ಎಂದು ಬಣ್ಣಿಸಿ, ಕಲಾ ಬದುಕಿಗೆ ಆಕೆಯ ಅಪಾರ ಬೆಂಬಲವನ್ನು ಶ್ಲಾಘಿಸಿದರು.
ಕನ್ನಡ ಚಿತ್ರರಂಗದ ಅದ್ಭುತ ಗಾಯಕ ಹಾಗೂ ಸಿರಿಗಮಪ ರಿಯಾಲಿಟಿ ಶೋ ಜಡ್ಜ್ ಆಗಿರುವ ವಿಜಯ್ ಪ್ರಕಾಶ್ ಅವರನ್ನು ಸರ್ಪ್ರೈಸ್ ಕೊಡಲು ವೇದಿಕೆ ಮೇಲೆ ಪತ್ನಿ ಆಗಮಿಸಿದ್ದರು. ಹಲವು ವರ್ಷಗಳ ಕಾಲ ಪ್ರೀತಿಸಿ ಅತಿ ಕಿಚ್ಚ ವಯಸ್ಸಿಗೆ ಮಗಳನ್ನು ಬರ ಮಾಡಿಕೊಂಡಿರುವ ಘಟನೆಯನ್ನು ಈ ಜೋಡಿ ಆಗಾಗ ಹಂಚಿಕೊಳ್ಳುತ್ತಾರೆ. ಪ್ರೀತಿ ಮಾಡುವ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಹೀಗಾಗಿ ವಿಜಯ್ ಪ್ರಕಾಶ್ ಮತ್ತು ಮಹತಿ ಒಟ್ಟಾಗಿ ಕಾಣಿಸಿಕೊಂಡಾಗಲೆಲ್ಲಾ ಸೆನ್ಸೇಷನ್ ಕ್ರಿಯೇಟ್ ಆಗುತ್ತದೆ. ಜೀ ಕನ್ನಡ ವಾಹಿನಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆಗ ಮಹತಿ ಆಗಮಿಸಿ ವಿಜಯ್‌ಗಾಗಿ ಒಂದೆರಡು ಸಾಲುಗಳನ್ನು ಹೇಳಿದ್ದರು.
ಯಜಮಾನರೇ ನಿಮ್ಮ ಕವಿತೆ ಮಾಡಿದೆ ಹೃದಯಗಳ ರಾಬರಿ, ನಿಮ್ಮ ಮಡದಿ ಮಹತಿಗೆ ಆಗಿದೆ ಗಾಬರಿ, ಆದರೆ ನೀವೇ ನನ್ನ ಸ್ಟ್ರಾಬರಿ. ಕನ್ನಡ ಹಾಡುಗಳಿಗೆ ನೀವೇ ಲೈಬ್ರರಿ..ಬನ್ನಿ ಆಚರಿಸೋಣ ಎಲ್ಲರೂ ಸಂಕ್ರಾಂತಿ ಹಬ್ಬ ಸೇರಿ...ಎಂದು ಪತಿ ವಿಜಯ್ ಪ್ರಕಾಶ್‌ಗೆ ಶಾಕ್ ಆಗುವಂತೆ ಶಾಯರಿ ಹೇಳಿದ್ದರು. ಇದನ್ನು ವೇದಿಕೆ ಮೇಲಿದ್ದ ಆಂಕರ್ ಅನುಶ್ರೀ ಕೂಡ ಸಖತ್ಎಂಜಾಯ್ ಮಾಡಿದಲ್ಲದೆ ವಿಜಯ್ ಅವರನ್ನು ವೇದಿಕೆ ಮೇಲೆ ಕರೆದು ಪತ್ನಿ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವಂತೆ ಮನವಿ ಮಾಡಿಕೊಂಡರು.
ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಮಗಳ ಬರ್ತಡೇ ಮಾಡಿದ ನಟಿ ಕಾವ್ಯಾ ಗೌಡ; ಫೋಟೋ ವೈರಲ್
'ನನ್ನ ಜೀವನದ ಬೆಲ್ಲ ಮಹತಿ. ಏಕೆಂದರೆ ಕಲಾವಿದರನ್ನು ತೂಗಿಸಿಕೊಂಡು ಹೋಗುವುದು.....ಮಹತಿ ಕೂಡ ಆರ್ಟಿಸ್ಟ್. ಅದ್ಭುತವಾಗಿ ಹಾಡುತ್ತಾಳೆ, ಬ್ಯೂಟಿಫುಲ್ ಡ್ಯಾನ್ಸರ್ ಹಾಗೂ ಪ್ರೋಫೆಷನಲ್ ಆರ್ಟಿಸ್ಟ್ ಕೂಡ ಹೌದು. ಒಂದು ಕಡೆ ತನ್ನ ವೃತ್ತಿ ಬದುಕನ್ನು ಚೆನ್ನಾಗಿ ನೋಡಿಕೊಂಡು ನನಗೆ ಯಾವುದೇ ರೀತಿಯ ತೊಂದರೆ ಆಗದಂತೆ ಗಾಯಕನದ ಜೀವನವನ್ನು ನಡೆಸಿಕೊಂಡು ಹೋಗಲು ಸಂಪೂರ್ಣವಾದ ಸಿಸ್ಟಮ್ ಅದರ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾಳೆ. ನನ್ನ ಕಲಾ ಜೀವನದಲ್ಲಿ ನನಗೆ ಎಲ್ಲಾ ದೊರಕಿದೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ನನ್ನ ಹೆಂಡತಿ ಮಹತಿ. ಒಂದು ಕಾರ್ಯಕ್ರಮದಲ್ಲಿ ಹೇಳಿದ್ದೀನಿ ನನ್ನ ತಾಯಿ ನನ್ನ ಪ್ರಾರ್ಥನೆ, ನನ್ನ ಮಗಳು ನನ್ನ ಉದ್ದೇಶ, ನನ್ನ ಶಕ್ತಿ ಮಹತಿ' ಎಂದು ವಿಜಯ್ ಪ್ರಕಾಶ್ ಮಾತನಾಡಿದ್ದಾರೆ.
ದರ್ಶನ್ಗೆ ಬದುಕಿನ ಪಾಠ ಕಲಿಸಿತಾ ಜೈಲುವಾಸ? ಬದಲಾದ್ರಾ ದರ್ಶನ್;ಒಂದಾದ ಅಣ್ಣ-ತಮ್ಮ
