ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಮಗಳ ಬರ್ತಡೇ ಮಾಡಿದ ನಟಿ ಕಾವ್ಯಾ ಗೌಡ; ಫೋಟೋ ವೈರಲ್
ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಕಾವ್ಯಾ ಗೌಡ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್....

ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ತಮ್ಮ ಮಗಳು ಸಿಯಾ ಸೋಮಶೇಖರ್ ಹುಟ್ಟುಹಬ್ಬವನ್ನು ಬೆಂಗಳೂರಿನ The Oberoi ಹೋಟೆಲ್‌ನಲ್ಲಿ ಆಚರಿಸಿದ್ದಾರೆ.
'ಸಿಯಾ ಹುಟ್ಟುಹಬ್ಬಕ್ಕೆ ದೊಡ್ಡ ದೊಡ್ಡ ಮೆಸೇಜ್ ಮತ್ತು ಫೋಟೋಗಳನ್ನು ಕ್ರಿಯೇಟ್ ಮಾಡಿ ವಿಶ್ ಮಾಡಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಕಾವ್ಯಾ ಗೌಡ ಬರೆದುಕೊಂಡಿದ್ದಾರೆ.
'ನಿಮ್ಮ ಶ್ರಮ, ನಿಮ್ಮ ಕ್ರಿಯೇಟಿವಿಟಿ ಮತ್ತು ಪ್ರೀತಿ ನಿಜಕ್ಕೂ ನಮಗೆ ಮುಖ್ಯವಾಗುತ್ತದೆ. ನಿಜಕ್ಕೂ ನಮ್ಮ ಸುತ್ತಲು ಇಷ್ಟೋಂದು ಒಳ್ಳೆಯ ಜನರು ಇರುವುದು ಖುಷಿಯಾಗುತ್ತದೆ'
'ನಿಮ್ಮನ್ನು ಜೀವನದಲ್ಲಿ ಪಡೆಯಲು ಸಿಯಾ ಪುಣ್ಯ ಮಾಡಿದ್ದಾಳೆ. ಇಷ್ಟೋಂದು ಖುಷಿ ಮತ್ತು ಪಾಸಿಟಿವಿಟಿಯನ್ನು ಪಡೆಯುವುದಕ್ಕೆ ಪುಣ್ಯ ಮಾಡಿದ್ದೀನಿ. ನಿಮ್ಮ ಸಮಯಕ್ಕೆ ಧನ್ಯವಾದಗಳು' ಎಂದಿದ್ದಾರೆ ಕಾವ್ಯಾ.
ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ 'ಹಲೋ ಕಿಟ್ಟಿ' ಥೀಮ್‌ನಲ್ಲಿ ಆಚರಿಸಿದ್ದಾರೆ. ಆದರೂ 12 ಗಂಟೆಗೆ ಸಣ್ಣದಾಗಿ ಕೇಟ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಅಯೋಧ್ಯ ಶ್ರೀರಾಮನ ಪ್ರತಿಷ್ಠಾಪನೆ ದಿನವೇ ಸಿಯಾ ಹುಟ್ಟಿರುವ ಕಾರಣ ಸಿಯಾ ಎಂದು ಹೆಸರಿಟ್ಟಿದ್ದಾರೆ. ಸಿಯಾ ಅಂದರೆ ಸಾಯಿ ಬಾಬ ಅಂತ ಕೂಡ ಹೇಳುತ್ತಾರೆ. ಈಗ ಕಂದಮ್ಮ 1 ವರ್ಷಕ್ಕೆ ಇನ್‌ಸ್ಟಾಗ್ರಾಂ ಅಕೌಂಟ್ ಹೊಂದಿದ್ದಾರೆ.