ಹೀರೋ ಆದ 'ಮುದ್ದುಲಕ್ಷ್ಮೀ' ಧಾರಾವಾಹಿಯ ನಟ
ಖ್ಯಾತ ಗಾಯಕ ಜೇಸುದಾಸ್ ಪುತ್ರ ವಿಜಯ್ ಜೇಸುದಾಸ್ ಅವರ ಸಿನಿಮಾ ಕನ್ನಡಕ್ಕೂ ಬರುತ್ತಿದೆ. ಈಗಾಗಲೇ ತಮಿಳಿನಲ್ಲಿ ಎರಡ್ಮೂರು ಚಿತ್ರಗಳಲ್ಲಿ ನಟಿಸಿರುವ ವಿಜಯ್ ಜೇಸುದಾಸ್ ಅವರು ಈಗ ‘ಸಲ್ಮಾನ್’ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.
ಬೆಂಗಳೂರು (ಮೇ. 27): ಖ್ಯಾತ ಗಾಯಕ ಜೇಸುದಾಸ್ ಪುತ್ರ ವಿಜಯ್ ಜೇಸುದಾಸ್ ಅವರ ಸಿನಿಮಾ ಕನ್ನಡಕ್ಕೂ ಬರುತ್ತಿದೆ. ಈಗಾಗಲೇ ತಮಿಳಿನಲ್ಲಿ ಎರಡ್ಮೂರು ಚಿತ್ರಗಳಲ್ಲಿ ನಟಿಸಿರುವ ವಿಜಯ್ ಜೇಸುದಾಸ್ ಅವರು ಈಗ ‘ಸಲ್ಮಾನ್’ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಕನ್ನಡವೂ ಸೇರಿದಂತೆ ಆರು ಭಾಷೆಗಳಲ್ಲಿ ಇವರನ್ನು ಪರಿಚಯ ಮಾಡುತ್ತಿರುವ ಈ ಚಿತ್ರ ಸಂಪೂರ್ಣವಾಗಿ 3ಡಿ ತಂತ್ರಜ್ಞಾನದಿಂದ ಕೂಡಿದೆ.
'ಬಸಣ್ಣಿ ಬಾ....' ಅಂತ ಸೊಂಟ ಕುಣಿಸಿದ್ದ ತಾನ್ಯಾ ಹೋಪ್ ಬಿಕಿನಿ ಲುಕ್ ನೋಡ್ರಪ್ಪಾ..!
ಕನ್ನಡದ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರ ಆಗುವ ಮುದ್ದುಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿರುವ ಚರಿತ್ ಬಾಲಪ್ಪ ಈ ಚಿತ್ರದಲ್ಲಿ ಎರಡನೇ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲೇ ಪ್ರತಿಭಾನ್ವಿತ ನಿರ್ದೇಶಕ ಎಂದೇ ಭರವಸೆ ಮೂಡಿಸಿರುವ ಶಲೀಲ್ ಕರ್ಲೂ ಈ ಚಿತ್ರದ ನಿರ್ದೇಶಕರು. ಇದೊಂದು ರೊಮ್ಯಾಂಟಿಕ್ ಸಸ್ಪೆನ್ಸ್ ಚಿತ್ರವಾಗಿದೆ.
ಕುಲು ಮನಾಲಿ, ರಾಮೋಜಿರಾವ್ ಫಿಲಮ್ ಸಿಟಿ, ದುಬೈ, ಮಲೇಷ್ಯಾ ಮುಂತಾದ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ. ಈ ಚಿತ್ರಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಸಂಭಾಷಣೆ ಬರೆದಿರುವುದು ಕನ್ನಡಿಗ ಕೃಷ್ಣ.
ಕೊನೆಗೂ ತನ್ನ ಸುಂದರ ಗುಂಗುರು ಕೂದಲಿನ ರಹಸ್ಯ ಬಾಯಿಬಿಟ್ಟ ಸಾಯಿ ಪಲ್ಲವಿ
ಎಂಜೆಎಸ್ ಮೀಡಿಯಾ ಬ್ಯಾನರ್‌ನಲ್ಲಿ ಡಾ. ಟಿಎನ್ ವಿನೀತ್ ಭಟ್, ಶಾಜು ಥಾಮಸ್, ಜೋಸ್ ಡಿ ಪೇಕಾಟ್ಟಿಲ್ ಹಾಗೂ ಜಾಯಿಸ್ ಟಿ ಪೇಕಾಟ್ಟಿಲ್ ಅವರು 12 ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ದುಬೈನಲ್ಲಿ ತನ್ನ ಕುಟುಂಬ ಸಮೇತ ನೆಲೆಸಿ ಒಮ್ಮೆ ಹುಟ್ಟೂರಿಗೆ ಆಗಮಿಸಿದಾಗ ಅನಿರೀಕ್ಷಿತವಾಗಿ ನಡೆಯುವ ದಾರುಣ ಸಾವು, ನಂತರ ಅನಾವರಣಗೊಳ್ಳುವ ಆತ್ಮದ ಹಿನ್ನೆಲೆÜಯಲ್ಲಿ ಈ ಸಿನಿಮಾ ಸಾಗುತ್ತದೆ. ರಾಹುಲ್ ಮೆನನ್ ಕ್ಯಾಮರಾ ಹಿಡಿದಿದ್ದಾರೆ.