ಇಲ್ಲಿವರೆಗೂ ತಮ್ಮ ನಿರ್ದೇಶನದ ಚಿತ್ರಗಳಿಗೆ ಆಂಜನೇಯನ ಪರ್ಯಾಯ ಹೆಸರುಗಳನ್ನೇ ಇಟ್ಟುಕೊಂಡು ಯಶಸ್ಸು ಕಂಡವರು ಹರ್ಷ. ‘ಭಜರಂಗಿ’, ‘ವಜ್ರಕಾಯ’, ‘ಭಜರಂಗಿ 2’ ಚಿತ್ರಗಳು ಗೆದ್ದಿವೆ. ಈಗ ಒಂಚೂರು ಬದಲಾವಣೆ ಇರಲಿ ಅಂತ ‘ಮುತ್ತುರಾಯ’ ಎನ್ನುವ ಹೆಸರಿಟ್ಟಿದ್ದಾರೆ ಎಂಬುದು ಸದ್ಯದ ಮಾತು. ಈ ಸಿನಿಮಾ ಜನವರಿ ತಿಂಗಳಲ್ಲಿ ಸೆಟ್ಟೇರಲಿದ್ದು, ಚಿತ್ರೀಕರಣ ಕೂಡ ಆರಂಭವಾಗಲಿದೆ. ಸದ್ಯ ಇವರಿಬ್ಬರ ನಾಲ್ಕನೇ ಸಿನಿಮಾ ಶಿವಣ್ಣ ಅವರ ನಟನೆಯ 124ನೇ ಚಿತ್ರವಂತೆ.

ಹ್ಯಾಟ್ರಿಕ್‌ ಹೀರೋ ಕೈಯಲ್ಲಿ ಹೊಸ 7 ಸಿನಿಮಾಗಳು; ಆದರೆ ಎರಡು ಸಿನಿಮಾಗಳು ಡ್ರಾಪ್‌! 

ಈ ಬಗ್ಗೆ ನಿರ್ದೇಶಕ ಹರ್ಷ ಹೇಳಿದ್ದೇನು? ‘ಚಿತ್ರಕ್ಕೆ ‘ಮುತ್ತುರಾಯ’ ಎನ್ನುವ ಹೆಸರು ಇಟ್ಟುಕೊಂಡಿರುವುದು ನಿಜ. ಆದರೆ, ಇದೇ ಅಂತಿಮ ಅಲ್ಲ. ಇದರ ಜತೆಗೆ ಮತ್ತೊಂದು ಹೆಸರು ಅಂದುಕೊಂಡಿದ್ದೇವೆ. ಜತೆಗೆ ‘ಮುತ್ತುರಾಯ’ ಚಿತ್ರಕ್ಕೆ ಹೆಚ್ಚುವರಿ ಸಾಲು ಕೂಡ ಇದೆ. ಅದು ಏನು, ಯಾವ ಹೆಸರು ಎಂಬುದು ಈ ತಿಂಗಳ ಕೊನೆಯಲ್ಲಿ ರಿವೀಲ್‌ ಮಾಡುವ ಪ್ಲಾನ್‌ ಮಾಡಿಕೊಂಡಿದ್ದೇವೆ. ಒಟ್ಟು ಎರಡು ಟೈಟಲ್‌ ನಮ್ಮ ಬಳಿ ಇವೆ’ ಎನ್ನುತ್ತಾರೆ.

ಭಜರಂಗಿ 2 ಚಿತ್ರಕ್ಕೆ 5.5 ಕೋಟಿ

ಈಗ ‘ಭಜರಂಗಿ 2’ ಚಿತ್ರಕ್ಕೆ ಶೂಟಿಂಗ್‌ ಮುಗಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಜತೆಗೆ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಗ್ರಾಫಿಕ್ಸ್‌ ಕೆಲಸ ನಡೆಯುತ್ತಿದೆ. ಆದರೆ, ಇದರ ನಡುವೆ ಚಿತ್ರದ ಹಿಂದಿ ಡಬ್ಬಿಂಗ್‌ ರೈಟ್ಸ್‌ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ. 5.5 ಕೋಟಿಗೆ ಡಬ್ಬಿಂಗ್‌ ಹಕ್ಕುಗಳು ಮಾರಾಟಗೊಂಡಿದೆ. ಶಿವಣ್ಣ ನಟನೆಯ ಚಿತ್ರಗಳ ಪೈಕಿ ಅತಿ ಹೆಚ್ಚು ಡಬ್ಬಿಂಗ್‌ ರೈಟ್ಸ್‌ ಹಣ ಮಾಡಿರುವ ಸಿನಿಮಾ ಇದೆ ಎನ್ನಲಾಗುತ್ತಿದೆ. ಇದರಿಂದ ಚಿತ್ರತಂಡಕ್ಕೆ ಮತ್ತಷ್ಟುಉತ್ಸಾಹ ಹೆಚ್ಚಾಗಿದೆ.

ಬೀದಿ ಬದಿ ಟೀ ಕುಡಿದ ನಟ ಶಿವರಾಜ್‌ಕುಮಾರ್; ಅಭಿಮಾನಿಗಳು ಫುಲ್ ಖುಷ್!