ಈ ಎರಡು ಚಿತ್ರಗಳ ಪೈಕಿ ಲಕ್ಕಿ ಗೋಪಾಲ್‌ ನಿರ್ದೇಶನದ ‘ಎಸ್‌ಆರ್‌ಕೆ’ ಚಿತ್ರಕ್ಕೆ ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ ಅದ್ದೂರಿಯಾಗಿ ಮುಹೂರ್ತ ನಡೆದಿತ್ತು. ರವಿ ಅರಸು ನಿರ್ದೇಶನದ ಸಿನಿಮಾ ‘ಆರ್‌ಡಿಎಕ್ಸ್‌’. ತಮಿಳಿನ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ ಸತ್ಯ ಜ್ಯೋತಿ ಫಿಲಮ್ಸ್‌ ಈ ಚಿತ್ರದ ನಿರ್ಮಾಣದ ಸಾರಥ್ಯ ವಹಿಸಿಕೊಂಡಿತ್ತು. ‘ಭಜರಂಗಿ 2’ ನಂತರ ‘ಆರ್‌ಡಿಎಕ್ಸ್‌’ ಸೆಟ್ಟೇರಲಿದೆ ಎನ್ನಲಾಗಿತ್ತು. ‘ಬೇರೆ ಬೇರೆ ಕಾರಣಗಳಿಗೆ ಈ ಎರಡೂ ಚಿತ್ರಗಳು ನಿಂತು ಹೋಗಿವೆ. ಆ ಬಗ್ಗೆ ಹೆಚ್ಚು ಮಾತು ಬೇಡ’ ಎಂಬುದು ಶಿವಣ್ಣ ಅವರ ಮಾತು.

ಬೀದಿ ಬದಿ ಟೀ ಕುಡಿದ ನಟ ಶಿವರಾಜ್‌ಕುಮಾರ್; ಅಭಿಮಾನಿಗಳು ಫುಲ್ ಖುಷ್! 

ಶಿವಣ್ಣ ಕೈಯಲ್ಲಿ 7 ಸಿನಿಮಾಗಳು

ಶೂಟಿಂಗ್‌ ಮಾಡಿಕೊಳ್ಳುತ್ತಿರುವ, ಬಿಡುಗಡೆಯ ಹಂತಕ್ಕೆ ಬಂದಿರುವ ಚಿತ್ರಗಳು ಸೇರಿದರೆ ಒಟ್ಟು ಏಳು ಚಿತ್ರಗಳು ಶಿವಣ್ಣ ಕೈಯಲ್ಲಿವೆ. ‘ಶಿವಪ್ಪ’ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ‘ಭಜರಂಗಿ 2’ ಶೂಟಿಂಗ್‌ ಮುಗಿಸಿಕೊಂಡು ಬರಬೇಕಿದೆ. ಹೀಗಾಗಿ ಶಿವಣ್ಣ ಈಗಲೂ ಕನ್ನಡ ಚಿತ್ರರಂಗದ ಬ್ಯುಸಿ ಸ್ಟಾರ್‌.

ಆಕ್ಟ್ 1978 ಚಿತ್ರ ನೋಡಿ

ಲಾಕ್‌ಡೌನ್‌ ನಂತರ ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರುವ ಸಿನಿಮಾ ‘ಆಕ್ಟ್ 1978’ ಚಿತ್ರಕ್ಕೆ ನನ್ನ ಬೆಂಬಲ ಇದೆ. ಒಬ್ಬ ನಟನಾಗಿ ಕೇಳುವುದೆಂದರೆ ಈ ಚಿತ್ರವನ್ನು ಹೆಚ್ಚು ಜನ ನೋಡಬೇಕು. ಆ ಮೂಲಕ ಬೇರೆ ಚಿತ್ರಗಳಿಗೆ ಸ್ಫೂರ್ತಿ ಆಗಬೇಕು. ಮತ್ತೆ ಎಂದಿನಂತೆ ಸಿನಿಮಾ ಸಂಭ್ರಮ ನೋಡಬೇಕು. ಆ ಕಾರಣಕ್ಕೆ ‘ಆಕ್ಟ್ 1978’ ಚಿತ್ರವನ್ನು ಎಲ್ಲರು ನೋಡಿ. - ಶಿವರಾಜ್‌ಕುಮಾರ್‌, ನಟ

ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಅಶ್ವತ್ಥಾಮನಾದ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ 

‘ಕೊರೋನಾ ನಂತರ 7 ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಈ ಚಿತ್ರಗಳ ಬಗ್ಗೆ ಆಯಾ ಸಮಯದಲ್ಲಿ ಹೇಳುತ್ತೇನೆ. ನನಗೆ ಕೊರೋನಾ ಸಂಕಷ್ಟದಿಂದ ಸಮಯ ವ್ಯರ್ಥ ಆಯಿತು ಅನಿಸಲಿಲ್ಲ. ವೆಬ್‌ ಸರಣಿಗಳನ್ನು ನೋಡಿದೆ, ಫೋನ್‌ನಲ್ಲೇ ಕತೆಗಳನ್ನು ಕೇಳಿದೆ, ಗಾಜನೂರಿನಲ್ಲಿ ಜಮೀನು ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ’ ಎಂಬುದು ಶಿವಣ್ಣ ಅವರ ಮಾತು.