ನಟರಾಗಿ ಸಾಕಷ್ಟು ವರ್ಷಗಳನ್ನು ಕಳೆದಿರುವ ಶಿವಣ್ಣ ಅವರು ಕ್ಯಾನ್ಸರ್‌ ಕಾಯಿಲೆಯನ್ನು ಸಹ ಗೆದ್ದು ಬಂದಿದ್ದಾರೆ. ಇದೀಗ ಸಾಕ್ಷ್ಯಚಿತ್ರದ ಮೂಲಕ ಶಿವರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಅಜರಾಮರರಾಗಿಸುವ ಪ್ರಯತ್ನ ನಡೆದಿದೆ. ಟೀಸರ್ ಬಳಿಕ ಶಿವಣ್ಣ ಅವರ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ.

ಶಿವರಾಜ್‌ಕುಮಾರ್ ಸಾಕ್ಷ್ಯಚಿತ್ರ ಸರ್ವೈವರ್

ಕರುನಾಡ ಚಕ್ರವರ್ತಿ ಬಿರುದು ಪಡೆದಿರುವ ನಟ ಶಿವರಾಜ್‌ಕುಮಾರ್ (Shivarajkumar) ಅವರು ಕನ್ನಡದ ಆಸ್ತಿ ಎಂಬಂತೆ ಇದ್ದಾರೆ. ಕರ್ನಾಟಕ ರತ್ನ ಡಾ ರಾಜ್‌ಕುಮಾರ್ ಅವರ ಹಿರಿಯ ಮಗ ಶಿವರಾಜ್‌ಕುಮಾರ್ ಅವರು ಕನ್ನಡಿಗರ ಪಾಲಿಗೆ ಈಗ ಹೆಮ್ಮೆಯ ಶಿವಣ್ಣ ಎನ್ನಿಸಿದ್ದಾರೆ. ಅವರು ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ನೋಡಿದ್ದಾರೆ, ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. ಇದೀಗ ಇಂಥಹ ನಟ ಶಿವಣ್ಣ ಅವರ ಬಗ್ಗೆ ಸಾಕ್ಷ್ಯಚಿತ್ರ (Documentary) ನಿರ್ಮಾಣ ಮಾಡಲು ತಯಾರಿ ನಡೆದಿದೆ.

ಹೌದು, ನಟ ಶಿವರಾಜ್ ಕುಮಾರ್ ತನ್ನ ಬದುಕಿನಲ್ಲಿ ಸಾಕಷ್ಟು ಸವಾಲು ಎದುರಿಸಿದ್ದಾರೆ. ಆದರೆ ಯಾವುದಕ್ಕೂ ಹೆದರದೇ ಎಲ್ಲವನ್ನೂ ಎದುರಿಸಿ ಧೈರ್ಯದಿಂದ ಇಂದಿಗೂ ಕೂಡ ಸಮರ್ಥ ಬದುಕು ನಡೆಸುತ್ತಿದ್ದಾರೆ. ಆದರೆ ಅವರು ಎದುರಿಸಿದ ಸವಾಲುಗಳ ಕುರಿತು ಸಾಕ್ಷ್ಯಚಿತ್ರಕ್ಕೆ ತಯಾರಿ ನಡೆಸಲಾಗುತ್ತಿದೆ.

ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಚಿಕಿತ್ಸೆ ಬಳಿಕ ಸಾವನ್ನೇ ಗೆದ್ದು ಬಂದಿರುವ ನಟ ಶಿವರಾಜ್ ಕುಮಾರ್:

ಹೌದು, ನಟ ಶಿವಣ್ಣ ಅವರು ಕ್ಯಾನ್ಸರ್ ಖಾಯಿಲೆಯಿಂದ ಬಳಲಿ, ಬಳಿಕ ಅದನ್ನು ಗೆದ್ದು ಬಂದಿದ್ದಾರೆ. ಇದೀಗ ಗಂಡನ ರಿಯಲ್ ಬದುಕನ್ನ ರೀಲ್ ಮೇಲೆ ತರಲು ಹೊರಟಿದ್ದಾರೆ ಶಿವಣ್ಣರ ಪತ್ನಿ ಗೀತಾ ಶಿವರಾಜ್ ಕುಮಾರ್.

ಕ್ಯಾನ್ಸರ್ ಕಾಯಿಲೆಯಿಂದ ಚೇತರಿಸಿಕೊಂಡ ಶಿವರಾಜ್‌ಕುಮಾರ್ ಅವರು ಸದ್ಯ ಚಿತ್ರರಂಗದಲ್ಲಿ ಸಕ್ರಿಯರಾಗಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಶಿವರಾಜ್ ಕುಮಾರ್ ಬದುಕಿನ ಹೋರಾಟದ ಕುರಿತು ರೆಡಿಯಾಗುತ್ತಿದೆ ಡಾಕ್ಯೂಮೆಂಟರಿ. 'ಸರ್ವೈವರ್' ಹೆಸರಿನಲ್ಲಿ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ ಗೀತಾ ಶಿವರಾಜ್ ಕುಮಾರ್. ಈ ಸಾಕ್ಷ್ಯಚಿತ್ರವನ್ನು ಪ್ರದೀಪ್‌ ನಿರ್ದೇಶನ ಮಾಡುತ್ತಿದ್ದಾರೆ.

ಪ್ರದೀಪ್ ನಿರ್ದೇಶನ

ಪ್ರದೀಪ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಾಕ್ಷ್ಯಚಿತ್ರದ ಟೀಸರ್‌ಅನ್ನು ಇಂದು, ಅಂದರೆ 26 ಜನವರಿ 2026ರ ಗಣರಾಜ್ಯೋತ್ಸವದಂದು ರಿಲೀಸ್ ಮಾಡಲಾಗುತ್ತಿದೆ. ಈ ಸಮಯದಲ್ಲಿ ನಟ ಶಿಚರಾಜ್‌ಕುಮಾರ್ ಅವರು 'ನಾನು ಚಿಕಿತ್ಸೆಗೆ ಹೋಗುವಾಗ ನಿಮ್ಮ ಹಾರೈಕೆಗಳನ್ನು ಹೊತ್ತು ಸಾಗಿದ್ದೆ.. ಅಲ್ಲಿದ್ದಾಗ ನಿಮ್ಮ ಪ್ರಾರ್ಥನೆಗಳನ್ನು ನೆನೆಪಿಸಿಕೊಂಡಿದ್ದೆ. ಮರಳಿ ಬಂದಾಗ ನಿಮ್ಮ ನಗುವಿನಲ್ಲಿ ಮೆರೆದು ನಿಮ್ಮೆಲ್ಲರೊಂದಿಗೆ ನಾನು ಕೂಡ ಗೆದ್ದು ಬಂದು ಕಥೆ ಹೇಳಲು ಹೊರಟಿರುವೆ' ಎಂದು ಹೇಳಿದ್ದಾರೆ ನಟ ಶಿವಣ್ಣ.

ಟೀಸರ್ ಬಿಡುಗಡೆಯಾಯ್ತು

ಒಟ್ಟಿನಲ್ಲಿ, ನಟರಾಗಿ ಸಾಕಷ್ಟು ವರ್ಷಗಳನ್ನು ಕಳೆದಿರುವ ಶಿವಣ್ಣ ಅವರು ಕ್ಯಾನ್ಸರ್‌ ಕಾಯಿಲೆಯನ್ನು ಸಹ ಗೆದ್ದು ಬಂದಿದ್ದಾರೆ. ಇದೀಗ ಸಾಕ್ಷ್ಯಚಿತ್ರದ ಮೂಲಕ ಶಿವರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಅಜರಾಮರರಾಗಿಸುವ ಪ್ರಯತ್ನ ನಡೆದಿದೆ. ಟೀಸರ್ ಬಳಿಕ ಶಿವಣ್ಣ ಅವರ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ.

View post on Instagram