ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ನಟ ಶಿವರಾಜ್‌ಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. 

ನಟ ಶಿವರಾಜ್‌ಕುಮಾರ್ ಮಂಗಳವಾರ ಏಪ್ರಿಲ್ 2ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಚುನಾವಣಾ ಪ್ರಚಾರದಲ್ಲಿ ಕೆಲ ದಿನಗಳಿಂದ ತೊಡಗಿದ್ದ ಶಿವಣ್ಣ ಚೆಕಪ್‌ಗಾಗಿ ಏ.1ರಂದು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದರು. ನಟನಿಗೆ ಅನಾರೋಗ್ಯ ಎಂದು ಅಭಿಮಾನಿಗಳು ಆತಂಕಗೊಂಡಿದ್ದರು.

ಆದರೆ, ಇಂದು ನಟ ಡಿಸ್ಚಾರ್ಜ್ ಆಗಿ ಆರೋಗ್ಯವಾಗಿ ನಾಗವಾರದ ನಿವಾಸಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಮಗನಿಗಾಗಿ ಬದಲಾಗ್ತಿರೋ ಹೊತ್ತಲ್ಲೇ ತುಳಸಿಗೆ ತಿಳಿಯುತ್ತಾ ಸೊಸೆ ಪೂರ್ಣಿಯ ಜನ್ಮ ರಹಸ್ಯ?