ಶಿವರಾಜ್‌ಕುಮಾರ್ ಮತ್ತು ಸುಧಾರಾಣಿ ಜೋಡಿ ೧೯೮೬ರ 'ಆನಂದ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ೨೫ ವಾರಗಳ ಯಶಸ್ಸು ಕಂಡು ಸೂಪರ್ ಹಿಟ್ ಜೋಡಿಯಾಗಿ ಹೊರಹೊಮ್ಮಿತು. ೪.೫೦ ರೂ. ಟಿಕೆಟ್ ದರದಲ್ಲಿ ೨.೫ ಕೋಟಿ ಗಳಿಸಿ ದಾಖಲೆ ನಿರ್ಮಿಸಿತು. 'ಮನಮೆಚ್ಚಿದ ಹುಡುಗಿ' ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ಈ ಜೋಡಿ ಇಂದಿಗೂ ಅನ್ಯೋನ್ಯವಾಗಿದೆ.

ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ ಶಿವರಾಜ್‌ಕುಮಾರ್ ಹಾಗೂ ಸುಧಾರಾಣಿ ಬಹಳಷ್ಟು ಹಿಟ್ ಸಿನಿಮಾಗನ್ನು ಕೊಟ್ಟಿದ್ದಾರೆ. 1986ರಲ್ಲಿ ಆನಂದ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಈ ಜೋಡಿ ಮೊದಲ ಚಿತ್ರದಲ್ಲಿಯೇ ಭಾರೀ ಕಮಾಲ್ ಮಾಡಿದ್ದಾರೆ. ಆನಂದ್ ಚಿತ್ರವು 25 ವಾರಗಳ ಯಶಸ್ವಿ ಪ್ರದರ್ಶನ ಕಂಡು ಆ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ಇದೇ ಜೋಡಿಯ ನಟನೆಯಲ್ಲಿ ಮತ್ತೆ 'ಮನಮೆಚ್ಚಿದ ಹುಡುಗಿ' ಸಿನಿಮಾ ತೆರೆಗೆ ಬಂದು, ಅದೂ ಕೂಡ ಸೂಪರ್ ಹಿಟ್ ಆಗಿತ್ತು.

ಆ ಮೂಲಕ ಶಿವರಾಜ್‌ಕುಮಾರ್ (Shivarajkumar) ಹಾಗು ಸುಧಾರಾಣಿ (Sudharani) ಜೋಡಿ ಜನಪ್ರಿಯ ಜೋಡಿ ಆಗಿದೆ. ಆ ಬಳಿಕ ಕೂಡ ಅವರಿಬ್ಬರ ನಟನೆಯ ಹಲವು ಚಿತ್ರಗಳು ತೆರೆಗೆ ಬಂದು ಹಿಟ್ ಆಗಿವೆ. 1986ರಲ್ಲಿ ತೆರೆಗೆ ಬಂದ ಆನಂದ್ ಚಿತ್ರ ವೇಳೆ ಬೆಂಗಳೂರಿನ ಥಿಯೇಟರ್‌ನಲ್ಲಿ ಟಿಕೆಟ್ ಗರಿಷ್ಠ ಬೆಲೆ 4.50 ರೂಪಾಯಿ ಇತ್ತು. ಆಗ ಈ ಚಿತ್ರದ ಗಳಿಕೆ 2.5 ಕೋಟಿ ಆಗಿತ್ತು. ಅಷ್ಟು ಕಡಿಮೆ ಬೆಲೆ ಇದ್ದಾಗಲೇ ಈ ಚಿತ್ರದ ಕಲೆಕ್ಷನ್ 2.5 ಕೋಟಿ ಆಗಿತ್ತು ಎಂದರೆ, ಈ ಚಿತ್ರವು ಅದೆಷ್ಟು ಮಟ್ಟಿಗಿನ ಯಶಸ್ಸು ಗಳಿಸಿತ್ತು ಎಂಬುದನ್ನು ಊಹಿಸಬಹುದು. ಹೊಸ ನಟನಟಿಯ ಚಿತ್ರವೊಂದು ಆ ಪರಿಯ ಯಶಸ್ಸು ಪಡೆದಿದ್ದು ಅದೇ ಮೊದಲು.

Mahesh Babu: ಮಹೇಶ್ ಬಾಬುಗೆ ಶಾಕ್ ನೀಡಿದ ಇಡಿ, ಟಾಲಿವುಡ್ ಪ್ರಿನ್ಸ್ ಮಾಡಿದ ತಪ್ಪೇನು?

ಆದರೆ, ಆ ಬಳಿಕ ಶಿವರಾಜ್‌ಕುಮಾರ್ ತಮ್ಮ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಮಾಲಾಶ್ರೀ ನಟನೆಯ 'ನಂಜುಂಡಿ ಕಲ್ಯಾಣ' ಈ ದಾಖಲೆಯನ್ನೂ ಮೀರಿಸಿ ಹೊಸ ದಾಖಲೆ ನಿರ್ಮಿಸಿತ್ತು. ಆನಂದ್ ಚಿತ್ರದಲ್ಲಿ ಸುಧಾರಾಣಿ ಹಾಗೂ ಶಿವರಾಜ್‌ಕುಮಾರ್ ಚಿತ್ರಕಥೆ, ನಟನೆ ಹಾಗೂ ಹಾಡುಗಳು ಕೂಡ ಈ ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಹೌದು, ನಟ ಶಿವರಾಜ್‌ಕುಮಾರ್ ಹಾಗೂ ಸುಧಾರಾಣಿ ಜೋಡಿ ಈಗಲೂ ಕೂಡ ಅನ್ಯೋನ್ಯವಾಗಿಯೇ ಇದ್ದಾರೆ. ಯಾವುದೋ ಕಾರ್ಯಕ್ರಮದಲ್ಲಿ, ವೇದಿಕೆಗಳಲ್ಲಿ ಸಿಕ್ಕಾಗ ಮಾತನ್ನಾಡುತ್ತಾರೆ, ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ರಣರಂಗ ಇರಬಹುದು, ಅಥವಾ ಇನ್ನೂ ಹಲವು ಸಿನಿಮಾಗಳು ಇರಬಹುದು, ಸುಧಾರಾಣಿ ಹಾಗೂ ಶಿವಣ್ಣ ಜೋಡಿಯ ಚಿತ್ರಗಳು ಸೂಪರ್ ಹಿಟ್ ಆಗಿದ್ದೇ ಹೆಚ್ಚು. ಶಿವರಾಜ್‌ಕುಮಾರ್ ಹಾಗೂ ಸುಧಾರಾಣಿ ನಟನೆಯ ಚಿತ್ರಗಳು ಎಂದರೆ, ಸೋತಿದ್ದು ಇಲ್ಲವೇ ಇಲ್ಲ ಎನ್ನಬಹುದು, ಕೆಲವು ಸೂಪರ್ ಹಿಟ್, ಇನ್ನೂ ಕೆಲವು ಹಿಟ್ ಎಂದಷ್ಟೇ ವಿಭಾಗಿಸಬಹುದು. ಇಂದು ಕರ್ನಾಟಕದ ಥಿಯೇಟರ್‌ಗಳಲ್ಲಿ ಸಿನಿಮಾ ಟಿಕೆಟ್ ಬೆಲೆ 100 ರೂಗಳನ್ನೂ ಮೀರಿದೆ. ಬಾಲ್ಕನಿ ಬೇಕು ಎಂದರೆ 150 ರೂಪಾಯಿ ಕೊಡಲೇಬೇಕು. ಇನ್ನು ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ 200 ರೂಪಾಯಿ ಆಗಿದೆ.

ಪುನೀತ್ ರಾಜ್‌ಕುಮಾರ್ 'ಜೀವನಚರಿತ್ರೆ' ಮಾಡಲು ಸಾಧ್ಯವೇ ಇಲ್ಲ ಅಂದಿದ್ಯಾಕೆ ಶಿವಣ್ಣ..!?

ಆದರೆ, 1986ರಲ್ಲಿ ಗರಿಷ್ಠ ಬೆಲೆ ಕೇವಲ 4.50 ರೂಪಾಯಿ ಎಂದರೆ ಈಗಿನ ಜನರೇಶನ್‌ಗೆ ನಂಬಲು ಕಷ್ಟವಾಗಬಹುದು. ಆದರೆ, ಇದು ನಿಜ. ಎನೇ ಆಗಲಿ, ಕನ್ನಡ ಚಿತ್ರಗಳು ಇಂದು ಕನ್ನಡದ ಸೀಮಿತ ಮಾರುಕಟ್ಟೆ ದಾಟಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಿಯಾಗಿದೆ. ಇನ್ನು ಯಶ್ ನಟನೆಯ ಟಾಕ್ಸಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಇನ್ನೂ ಮುಂದೆ ಹೋಗಿ ಹಾಲಿವುಡ್‌ ಸಿನಿಮಾಗಳಂತೆ ವಿಶ್ವ ಮಟ್ಟದಲ್ಲಿ ಮಿಂಚಲಿದೆ. ಆ ಕಾಲ ಆದಷ್ಟೂ ಬೇಗ ಬರಲಿ ಎಂದು ಸಮಸ್ತ ಕನ್ನಡಿಗರು ಕಾಯುತ್ತಿದ್ದಾರೆ ಎನ್ನಬಹುದು.

View post on Instagram