Asianet Suvarna News Asianet Suvarna News

ಅಕ್ಟೋಬರ್ 20 ರಂದು ಶಿವಣ್ಣನ ಭಜರಂಗಿ 2 ಟೀಸರ್ ರಿಲೀಸ್

-ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್‌ನ 3ನೇ ಚಿತ್ರ
-ಯೂಟ್ಯೂಬ್‌ನಲ್ಲಿ ಚಿತ್ರದ ಹಾಡುಗಳ ಅಬ್ಬರ
-ಅಕ್ಟೋಬರ್ 29 ರಾಜ್ಯಾದ್ಯಂತ ಬಿಡುಗಡೆ

Shivarajakumar Bhajarangi 2 teaser to be released on October 20
Author
Bangalore, First Published Oct 18, 2021, 6:40 PM IST
  • Facebook
  • Twitter
  • Whatsapp

ಹ್ಯಾಟ್ರಿಕ್ ಹೀರೋ , ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivarajkumar) ಅಭಿನಯದ ಬಹು ನಿರೀಕ್ಷಿತ ಚಿತ್ರ 'ಭಜರಂಗಿ 2' (Bhajarangi 2) ಚಿತ್ರದ ಟೀಸರ್ (Teaser) ಅಕ್ಟೋಬರ್ 20 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ವಿಶಿಷ್ಟವಾದ ಪೋಸ್ಟರ್ (Poster), ಪ್ರೋಮೊ (Promo), ಹಾಗೂ ಹಾಡುಗಳಿಂದ (Songs) 'ಭಜರಂಗಿ 2' ಚಿತ್ರ ಭಾರೀ ನಿರೀಕ್ಷೆಯನ್ನು ಅಭಿಮಾನಿಗಳಲ್ಲಿ (Fans) ಹುಟ್ಟುಹಾಕಿದೆ. ಈ ಹಿಂದೆ ಶಿವಣ್ಣನ ಹುಟ್ಟುಹಬ್ಬಕ್ಕೆ ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. 

ಮುಖ್ಯವಾಗಿ ಇದೇ ಅಕ್ಟೋಬರ್ 29ರಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರಕ್ಕೆ ಎ.ಹರ್ಷ (A.Harsha) ಆಕ್ಷನ್ ಕಟ್ ಹೇಳುತ್ತಿದ್ದು, ಶಿವಣ್ಣ ಕಾಂಬಿನೇಷನ್‌ನಲ್ಲಿ ಇದು ಮೂರನೇ ಚಿತ್ರ. 'ತುಂಬಾ ಕಡಿಮೆ ಜನಕ್ಕೆ ಗೊತ್ತಿರುವ ಮತ್ತು ಪುರಾಣಗಳ ಬಗ್ಗೆ ತಿಳುವಳಿಕೆ ಇರುವವರಿಗೆ ಮಾತ್ರ ಗೊತ್ತಿರುವ ಕತೆಯೊಂದನ್ನು ಈ ಚಿತ್ರದ ಮೂಲಕ ನಿರ್ದೇಶಕ ಹರ್ಷ ತೆರೆ ಮೇಲೆ ತೋರಿಸಲು ತಯಾರಾಗಿದ್ದಾರೆ.

ಶಿವಣ್ಣ ಅಭಿನಯದ ಭಜರಂಗಿ-2 ಪೋಸ್ಟರ್ ರಿಲೀಸ್!

ಜಯಣ್ಣ-ಭೋಗೇಂದ್ರ ನಿರ್ಮಾಣದ 'ಭಜರಂಗಿ 2' ಚಿತ್ರದಲ್ಲಿ ಜಾಕಿ ಭಾವನಾ (Bhavana), ಸೌರವ್ ಲೋಕೇಶ್ (Sourav Lokesh), ಹಿರಿಯ ನಟಿ ಶ್ರುತಿ  (Shruti), ಶಿವರಾಜ್ ಕೆ.ಆರ್.ಪೇಟೆ, ಮಂಜು ಪಾವಗಡ ಸೇರಿದಂತೆ ವಿಶೇಷವಾದ ತಾರಾಗಣವಿದೆ. ಅದ್ದೂರಿ ಮೇಕಿಂಗ್‌ (Making) ಜೊತೆಗೆ ಶಿವಣ್ಣನ ಲುಕ್‌ಗಳು ಭಿನ್ನವಾಗಿವೆ. ಚಿತ್ರದಲ್ಲಿ ನಟಿ ಭಾವನಾ ಹಣೆ ಮೇಲೆ ಬೊಟ್ಟು, ಕಣ್ಣಿಗೆ ಕಾಡಿಗೆ, ಉದ್ದ ಕೂದಲು, ಕುತ್ತಿಗೆಯಲ್ಲಿ ತಾಯತ ಹಾಕಿರುವ ಡಿಫರೆಂಟ್‌ ಗೆಟಪ್‌ನಲ್ಲಿ ಕಾಣಿಸಿಕೊಂಡರೆ, ಶ್ರುತಿ ಹಿಂದೆಂದೂ ಕಾಣದ ವಿಭಿನ್ನ ಲುಕ್‌ನಲ್ಲಿ ಕೈಯಲ್ಲಿ ಸಿಗಾರ್ ಹಿಡಿದಿರುವ ಪೋಸ್ಟರ್‌ನ್ನು ಇತ್ತೀಚೆಗಷ್ಟೇ ಚಿತ್ರತಂಡ ಶ್ರುತಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿತ್ತು. 

ಭಜರಂಗಿ 2 ಚಿತ್ರದಲ್ಲಿ ಭಾವನಾ ಡಿಫರೆಂಟ್‌ ಗೆಟಪ್‌!

ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯಾ (Arjun Janya) ಸಂಗೀತ ಸಂಯೋಜಿಸಿದ್ದು, ಈಗಾಗಲೇ ಯೂಟ್ಯೂಬ್‌ನಲ್ಲಿ ಭಜರಂಗಿಯ ಹಾಡುಗಳಿಗೆ ಸಂಗೀತ ಆರಾಧಕರು ತಲೆದೂಗಿದ್ದಾರೆ. ಹಾಗೂ ಬಿಡುಗಡೆಯಾಗಿರುವ ಮೊದಲ ಟೀಸರ್​ ಮತ್ತು ಪೋಸ್ಟರ್​ಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸಿವೆ. ಇನ್ನು ದೀಪು ಎಸ್‌. ಕುಮಾರ್‌ ಸಂಕಲನ, ಸ್ವಾಮಿ ಅವರ ಕ್ಯಾಮೆರಾ ಕೈಚಳಕವಿದೆ.  ರವಿ ಸಂತೆಹೈಕ್ಲು ಕಲಾ ನಿರ್ದೇಶನವಿದ್ದು, ರಘು ನಿಡುವಳ್ಳಿ ಸಂಭಾಷಣೆ, ರವಿವರ್ಮ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.

'ಭಜರಂಗಿ 2' ಚಿತ್ರ 2013 ರಲ್ಲಿ ತೆರೆಕಂಡ  'ಭಜರಂಗಿ' (Bhajarangi) ಮಂದುವರಿದ ಭಾಗವಾಗಿದೆ. ಈ ಹಿಂದೆ ಹರ್ಷ ಶಿವಣ್ಣನಿಗೆ 'ಭಜರಂಗಿ' (Bhajarangi) ಮತ್ತು 'ವಜ್ರಕಾಯ' (Vajrakaya) ನಿರ್ದೇಶಿದ್ದರು. ಅದರಲ್ಲೂ 'ಭಜರಂಗಿ' ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಇದೀಗ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ 'ಭಜರಂಗಿ 2' ಬರುತ್ತಿದ್ದು, ಚಿತ್ರಮಂದಿರದಲ್ಲಿ ಸಿನಿರಸಿಕರಿಗೆ ಯಾವ ರೀತಿ ಕಮಾಲ್ ಮಾಡುತ್ತದೆ ಎನ್ನುವುದು ತೆರೆ ಮೇಲೆ ಬಂದ ಮೇಲಷ್ಟೇ ತಿಳಿಯುತ್ತದೆ. ಒಟ್ಟಿನಲ್ಲಿ ಶಿವಣ್ಣನ ಭಜರಂಗಿ ಅವತಾರವನ್ನು ನೋಡಲು ಅವರ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ.

"

Follow Us:
Download App:
  • android
  • ios