ಬೆಂಗಳೂರು(ಜ.14): ಸಂಕ್ರಾತಿ ಹಬ್ಬಕ್ಕೆ ಸಿನಿ ರಸಿಕರಿಗೆ ಡಬಲ್ ಧಮಾಕ. ಒಂದೆಡೆ ಹಬ್ಬದ ಸಂಭ್ರಮ, ಮತ್ತೊಂದೆಡೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಚಿತ್ರದ ಪೋಸ್ಟ್ ರಿಲೀಸ್ ಆಗಿದೆ. ಪೋಸ್ಟರ್ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. 

ಇದನ್ನೂ ಓದಿ: ಟಗರು' ಹಾಡಿಗೆ ಸಖತ್ ಸ್ಟೆಪ್ ಹಾಕಿದ ಶಿವಣ್ಣ; ಇಲ್ಲಿದೆ ವಿಡಿಯೋ!

ಪೋಸ್ಟರ್‌ನಲ್ಲಿ ಶಿವರಾಜ್ ಕುಮಾರ್ ಶಿವನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ವೈಬ್ರೆಂಟ್ ಆಗಿದೆ. ಫಸ್ಟ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಶಿವರಾಜ್ ಕುಮಾರ್ ಭಜರಂಗಿ ಚಿತ್ರ ಯಶಸ್ವಿಯಾಗಿತ್ತು. ಹೀಗಾಗಿ ಭಜರಂಗಿ 2 ಚಿತ್ರದ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ: ನೋವು ಮರೆಯಲು ಆಪರೇಶನ್ ಥಿಯೇಟರ್‌ನಲ್ಲಿ ಶಿವಣ್ಣ ಹಾಡಿಗೆ ಕೈ ಆಡಿಸಿದ ಅಭಿಮಾನಿ!

ಭಜರಂಗಿ 2 ಚಿತ್ರಕ್ಕೆ ಎ ಹರ್ಷಾ ಆ್ಯಕ್ಷನ್ ಕಟ್ ಹೇಳಿದ್ದು, ಜಯಣ್ಣ ಭೋಗೇಂದ್ರ ಚಿತ್ರ ನಿರ್ಮಾಣ ಮಾಡಿದ್ದಾರೆ. ಬಹುಕೋಟಿ ವೆಚ್ಚದ ಭಜರಂಗಿ-2 ಚಿತ್ರ ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.