ನಿರ್ದೇಶಕ ಹರ್ಷ ಹೇಳುವಂತೆ, ಚಿತ್ರದಲ್ಲಿ ಭಾವನಾ ಅವರದ್ದು ಒಂದು ವಿಶೇಷವಾದ ಪಾತ್ರ. ಇದುವರೆಗೂ ಅವರನ್ನು ನೋಡಿರದ ಪಾತ್ರದಲ್ಲಿ ನೋಡುತ್ತೀರಿ. ಈ ಪಾತ್ರಕ್ಕೆ ಭಾವನಾ ಅವರು ಸಾಕಷ್ಟುಬದಲಾವಣೆ ಮಾಡಿಕೊಂಡಿದ್ದಾರಂತೆ.

ಮೈ ನೇಮ್ ಈಸ್ ಆಂಜಿ ಎಂದ ಜಾಕಿ ಭಾವನ!

ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಏಳು ಪ್ರಮುಖ ಪಾತ್ರಗಳ ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ಜತೆಗೆ ‘ಭಜರಂಗಿ 2’ ಚಿತ್ರದ ರಿಯಲ್‌ ಪೋಸ್ಟರ್‌ ಆಚೆ ಬರಲಿದೆ. ಶೇ.75 ಭಾಗ ಶೂಟಿಂಗ್‌ ಮುಗಿಸಿದ್ದು, ಇನ್ನೂ 23 ದಿನಗಳ ಕಾಲ ಚಿತ್ರೀಕರಣ ಮಾಡುವ ಪ್ಲಾನ್‌ ನಿರ್ದೇಶಕರು ಹಾಕಿಕೊಂಡಿದ್ದಾರೆ. ಜ.10ರಿಂದ ಶೂಟಿಂಗ್‌ ಶುರುವಾಗಲಿದೆ. ವಿಶೇಷ ಅಂದರೆ ಇಡೀ ಸಿನಿಮಾ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತಿದ್ದು, ಸೆಟ್‌ಗಳಲ್ಲಿ ಸಂಪೂರ್ಣವಾಗಿ ಮೇಕಿಂಗ್‌ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚು ತಂತ್ರಜ್ಞರು ಕಾಡು, ಹಳ್ಳಿ ಸೇರಿದಂತೆ ಬೇರೆ ಬೇರೆ ರೀತಿಯ ಸೆಟ್‌ಗಳನ್ನು ರೀ-ಕ್ರಿಯೇಟ್‌ ಮಾಡಿದ್ದಾರೆ. ಸೆಟ್‌ಗಳ ಹೊರತಾಗಿ ಒಂದೊಂದು ದೃಶ್ಯವನ್ನೂ ಚಿತ್ರೀಕರಣ ಮಾಡಿಲ್ಲ.

ನಾಯಕಿಯಿಂದ ನಿರ್ದೇಶಕಿಯಾದ 'ಗಾಳಿಪಟ' ಹುಡುಗಿ!

‘ಹಬ್ಬಕ್ಕೆ ಚಿತ್ರದ ಪಾತ್ರಗಳನ್ನು ರಿವಿಲ್‌ ಮಾಡಿದ ಮೇಲೆ ‘ಭಜರಂಗಿ 2’ ಏನೂ ಅಂತ ಗೊತ್ತಾಗಲಿದೆ. ತುಂಬಾ ಕಡಿಮೆ ಜನಕ್ಕೆ ಗೊತ್ತಿರುವ ಮತ್ತು ಪುರಾಣಗಳ ಬಗ್ಗೆ ತಿಳುವಳಿಕೆ ಇರುವವರಿಗೆ ಮಾತ್ರ ಗೊತ್ತಿರುವ ಕತೆಯೊಂದನ್ನು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ. ಎಲ್ಲವೂ ಅಂದುಕೊಂಡಂತೆ ಆದರೆ, ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ದೃಶ್ಯ ವೈಭವ ಹಾಗೂ ಕಟೆಂಟ್‌ ಈ ಚಿತ್ರದ ಹೈಲೈಟ್‌. ಮೊದಲ ಭಾಗದ ಮುಂದುವರಿದ ಕತೆ ಅಲ್ಲ ಇದು. ‘ಭಜರಂಗಿ 2’ ಚಿತ್ರದ್ದು ಬೇರೆಯದ್ದೇ ಕತೆ’ ಎನ್ನುತ್ತಾರೆ ನಿರ್ದೇಶಕ ಹರ್ಷ.