ನಿರ್ದೇಶಕ ಶಶಾಂಕ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದ ಹೆಸರು ಲವ್ 360. ಏನಿರಬಹುದು ಈ ಚಿತ್ರದ ವಿಶೇಷತೆ? 

ಸ್ಯಾಂಡಲ್‌ವುಡ್‌ಗೆ 'ಕೃಷ್ಣನ್ ಲವ್‌ ಸ್ಟೋರಿ' ಪರಿಚಯಿಸಿಕೊಟ್ಟ ನಿರ್ದೇಶಕ ಶಶಾಂಕ್ ಇದೀಗ ನಿರ್ಮಾಣದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಅವರು ಮುಂದಿನ ಚಿತ್ರಕ್ಕೆ ಲವ್ 360 ಎಂಬ ಶೀರ್ಷಿಕೆ ಇಟ್ಟಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಪ್ರವೀಣ್, ಈ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. 

ಕರಾವಳಿ ಭಾಗದ ಒಂದು ಸಣ್ಣ ನಗರ ಪ್ರದೇಶದಲ್ಲಿ ನಡೆಯುವ ಕತೆಯೇ ಈ ಚಿತ್ರದ್ದು. ಬೆಂಗಳೂರು, ಕರಾವಳಿ ಭಾಗದಲ್ಲಿ ಆಗಸ್ಟ್‌ ತಿಂಗಳಿನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ‘ಈ ಚಿತ್ರದ ಮೂಲಕ ಹೊಸ ನಟನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಆಪ್ತವಾದ ಪ್ರೇಮ ಕತೆಯ ಸಿನಿಮಾವಿದು,’ಎನ್ನುತ್ತಾರೆ ಶಶಾಂಕ್.

ನಿರ್ದೇಶಕ ಶಶಾಂಕ್ ಹೊಸ ಚಿತ್ರದಲ್ಲಿ ಮೆಡಿಕಲ್ ಪದವೀಧರ ಪ್ರವೀಣ್‌ ನಾಯಕ!

ಎಮೋಷನಲ್‌ ಲವ್ ಸ್ಟೋರಿ ಹೊಂದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಲಿದ್ದಾರೆ. ಸಖತ್ ಡಿಫರೆಂಟ್ ಅಗಿರುವ ಲವ್ ಸ್ಟೋರಿಯನ್ನು ಜನರಿಗೆ ಪರಿಚಯಿಸಿಕೊಡುವ ಶಶಾಂಕ್, ಈ ಚಿತ್ರದ ಮೂಲಕ ಮತ್ತೊಂದು ನೈಜ ಘಟನೆ ಹೇಳಲು ಮುಂದಾಗಿದ್ದಾರೆ. ಚಿತ್ರರಂಗದಲ್ಲಿ ಹೊಸಬರು ಮಿಂಚಬೇಕು, ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಬೇಕು ಎಂಬುದು ಶಶಾಂಕ್‌ ಅವರ ಗುರಿ.