ಸ್ಯಾಂಡಲ್‌ವುಡ್‌ ಮಾಸ್ಟರ್ ಮೈಂಡ್ ನಿರ್ದೇಶಕ ಶಶಾಂಕ್ ಹೊಸ ಚಿತ್ರಕಥೆಗೆ ಕೈ ಹಾಕಿದ್ದಾರೆ. ಹೆಸರಿಡದ ಹೊಸ ಸಿನಿಮಾಗೆ ಮೆಡಿಕಲ್ ಪದವೀಧರ ಪ್ರವೀಣ್‌ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದಾರೆ.  ಈ ಮೂಲಕ ಪ್ರವೀಣ್‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 

ಶಶಾಂಕ್ ನಿರ್ದೇಶನ ಹೊಸ ಚಿತ್ರ ಶಶಾಂಕ್ ಸಿನಿಮಾಸ್‌ ಬ್ಯಾನರ್‌ ಅಡಿ ತಯಾರಾಗಲಿದ್ದು, ಎಮೋಷನಲ್‌ ಲವ್‌ ಸ್ಟೋರಿ ಹೊಂದಿರುವ ಸಿನಿಮಾವಿದು. ಜೂನ್‌ನಿಂದ ಚಿತ್ರೀಕರಣ ಆರಂಭವಾಗಲಿದ್ದು, ಅರ್ಜುನ್ ಜನ್ಯಾ ಸಂಗೀತ ನೀಡಲಿದ್ದಾರೆ. 

ಕೌಟುಂಬಿಕ ಮನೋರಂಜನೆ ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ಹರಿಪ್ರಿಯಾ! 

ಚಿತ್ರದುರ್ಗದ ಸಣ್ಣ ಗ್ರಾಮದಲ್ಲಿ ರೈತನ ಪುತ್ರನಾಗಿ ಬೆಳೆದ ಶಶಾಂಕ್ ಇಂದು ಕನ್ನಡ ಚಿತ್ರರಂಗದ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ. ಚಿಕ್ಕಮಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಶಶಾಂಕ್ 'ತಾಯಿ ಇಲ್ಲದ ತವರು' ಚಿತ್ರದ ಮೂಲಕ ಅಸಿಸ್ಟೆಂಟ್ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಚಿತ್ರರಂಗದಲ್ಲಿ ಹೊಸಬರು ಮಿಂಚಬೇಕು, ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಬೇಕು ಎಂಬುದು ಶಶಾಂಕ್‌ರ ಗುರಿ.