Asianet Suvarna News Asianet Suvarna News

Yenammi Yenammi ಹಾಡಿಗೆ 100 ಮಿಲಿಯನ್ ವೀಕ್ಷಣೆ, ಹಾಡು ಹುಟ್ಟಿಕೊಂಡಿದ್ದು ಹೀಗಂತೆ!

ವಿಜಯ್ ಪ್ರಕಾಶ್ ಹಾಡಿಗೆ 100 ಮಿಲಿಯನ್ ವೀಕ್ಷಣೆ, ಸಕ್ಸಸ್ ಕಾರ್ಯಕ್ರಮದಲ್ಲಿ ಯಾರೆಲ್ಲಾ ಏನೆಲ್ಲಾ ಮಾತನಾಡಿದ್ದಾರೆ ಗೊತ್ತಾ?

Sathish Rachita Ram Ayogya Yenammi Yenammi song hits 100 million views vcs
Author
Bangalore, First Published Feb 25, 2022, 1:55 PM IST | Last Updated Feb 25, 2022, 1:55 PM IST

ಸ್ಯಾಂಡಲ್‌ವುಡ್ (Sandalwood) ಸಿಂಪಲ್ ನಟ ಸತೀಶ್ ನೀನಾಸಂ (Sathish Ninasam) ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಮೊದಲ ಸಿನಿಮಾ ಅಯೋಗ್ಯ (Ayogya). 2018ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕಥೆ ಸಿಂಪಲ್ ಆಗಿದ್ದರೂ, ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಎಸ್‌. ಮಹೇಶ್ ಕುಮಾರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕ್ರಿಸ್ಟಲ್ ಪಾರ್ಕ್ ಬಂಡವಾಳ ಹಾಕಿದ್ದಾರೆ. 

ಈ ಚಿತ್ರದ ಸ್ಪೆಷಲ್ ಹಾಡು ಏನಮ್ಮಿ ಏನಮ್ಮಿ (Yenammi Yenammi) ಸಖತ್ ವೈರಲ್ ಆಗಿದ್ದು 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ದೊಡ್ಡ ಹಿಟ್ ಕಂಡಿರುವ ಚಿತ್ರ ಇದಾಗಿರುವ ಕಾರಣ ಇಡೀ ತಂಡ ಒಂದು ಸಕ್ಸಸ್‌ ಮೀಟ್ ಹಮ್ಮಿಕೊಂಡಿದ್ದರು. ಈ ಹಾಡು ಹುಟ್ಟಿದ್ದು ಹೇಗೆ? ಯಾರೆಲ್ಲಾ ಏನೆಲ್ಲಾ ಐಡಿಯಾ ಕೊಟ್ಟರೂ, ಈ ಹಾಡು ಎಷ್ಟು ಹೆಸರು ತಂದುಕೊಟ್ಟಿದೆ, ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರೂ ಮಾತನಾಡಿದ್ದಾರೆ. 

ರಚಿತಾ ರಾಮ್:
'ಅಯೋಗ್ಯ ಸಿನಿಮಾ ತಂಡ ಸೇರಿ ಮೂರು ವರ್ಷ ಅಗಿತ್ತು. ಇದೊಂದು ರೀ ಯೂನಿಯನ್ ಆಯ್ತು. ಈ ಹಾಡು ಇಷ್ಟು ಚೆನ್ನಾಗಿದೆ. ಪ್ರತಿಯೊಬ್ಬರಿಗೂ ಇಷ್ಟ ಆಗಿರುವುದಕ್ಕೆ ಖುಷಿಯಾಗಿದೆ. ಆರ್ಜುನ್ ಜನ್ಯ, ವಿಜಯ್ ಪ್ರಕಾಶ್, ಚೇತನ್ ಮತ್ತು ಆಡಿಯೋ ಕಂಪನಿಗೆ ಈ ಕ್ರೆಡಿಟ್ ಸೇರುತ್ತೆ. ಡ್ಯಾನ್ಸರ್, ಮೇಕಪ್ ಆರ್ಟಿಸ್ಟ್‌, ವಸ್ತ್ರ ವಿನ್ಯಾಸ ಮಾಡಿದವರಿಗೂ ಕ್ರಿಡಿಟ್ ಇದೆ. ಇನ್‌ಸ್ಟಾಗ್ರಾಂನಲ್ಲಿ ನೋಡ್ತಾ ಇರ್ತೀನಿ. ಇವತ್ತಿಗೂ ಈ ಹಾಡಿಗೆ ರೀಲ್ಸ್ ಮಾಡ್ತಾರೆ. ಆ ಹಾಡಿನ ಮೇಲಿರುವ ಪ್ರೀತಿ ಜನರಿಗೆ ಕಡಿಮೆ ಆಗಿಲ್ಲ,' ಎಂದು ರಚಿತಾ ಮಾತನಾಡಿದ್ದಾರೆ.

Sathish Rachita Ram Ayogya Yenammi Yenammi song hits 100 million views vcs

ಸತೀಶ್ ಮಾತು:
'100 ದಿನ ಆಚರಣೆ ಮಾಡ್ತಾರೆ. ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮ ಮಾಡ್ತಾರೆ. ಆದರೆ ಹಾಡಿಗೆ ಮಾಡಿರುವುದು ತುಂಬಾನೇ ಸ್ಪೆಷಲ್. ಗಾಯಕರಿಗೆ ಮತ್ತು ಸಂಗೀತ ನಿರ್ದೇಶಕರಿಗೆ ತುಂಬಾನೇ ಹಾಡುಗಳಿಂದ ಈ ಕ್ರೆಡಿಟ್ ಸಿಗುತ್ತದೆ. ಆದರೆ ನಟ ನಟಿಗೆ ಇದು ಗ್ರೇಟ್. ಸಿನಿಮಾ ಹಾಡು ಬಿಡುಗಡೆ ಸಮಯದಲ್ಲಿ ನಮ್ಮ ಜೊತೆ ಇದ್ರೆ, 100 ದಿನ ಸಿನಿಮಾ ಆಚರಣೆ ಸಮಯದಲ್ಲೂ ಇದ್ರಿ. ಆಮೇಲೆ ಈಗ 100 ಮಿಲಿಯನ್ ಸೆಲೆಬ್ರೇಷನ್‌ಗೆ ದೊಡ್ಡ ಮನೆಯಿಂದ ಶ್ರೀಮುರಳಿ ಸರ್ ಬಂದಿದ್ದಾರೆ. ತುಂಬಾ ತಾಳ್ಮೆ ಇದೆ, ಸರ್ ನಿಮಗೆ ಅಣ್ಣಾವ್ರ ಮನೆಯಿಂದ ನೀವು ನಮ್ಮ ಜೊತೆ ಇದ್ದೀರಾ. ಅಂಬರೀಶ್ ಅಣ್ಣ ಅವರನ್ನ ನೆನಪು ಮಾಡಿಕೊಳ್ಳಬೇಕು. ಇಂಟ್ರಡಕ್ಷನ್‌ ಸಾಂಗ್ ಬಿಡುಗಡೆ ಮಾಡಿದ್ದರು, ಧ್ರುವ ಸರ್ಜಾ ಅವರು ಏನಮ್ಮಿ ಏನಮ್ಮಿ.. ಬಿಡುಗಡೆ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಸರ್ ಹಿಂದೆ ಹಿಂದೆ ಹೋಗು ಹಾಡು ಬಿಡುಗಡೆ ಮಾಡಿಕೊಟ್ಟಿದ್ದರು. ಎಲ್ಲರಿಗೂ ಧನ್ಯವಾದಗಳು,' ಎಂದು ಸತೀಶ್ ಮಾತನಾಡಿದ್ದಾರೆ.

'ಅಯೋಗ್ಯ'ನ ಈ ಹಾಡಿಗೆ ನಟಿ ರಮ್ಯಾ ಫುಲ್ ಫಿದಾ!

ಅರ್ಜುನ್ ಜನ್ಯ:
'ಒಂದು ಹಾಡು 100 ಮಿಲಿಯನ್ ಆಗೋಕೆ ಗ್ರೇಟ್. ಇಲ್ಲಿ ಕೂತ್ಕೊಂಡು ನೋಡೋಕೆ...........ಇವೆಲ್ಲಾ ಹೇಗೆ ಆಯ್ತು ಅನ್ನೊದು ಗೊತ್ತಿಲ್ಲ. ಹೇಗ್ ಆಯ್ತು ಅಂತ ನಮಗೆ ಗೊತ್ತಾದರೆ, ಎಲ್ಲಾ ಹಾಡುಗಳನ್ನೂ 100 ಮಿಲಿಯನ್ ಮಾಡಬಹುದು. ಕೆಲವೊಂದು ಹಾಡುಗಳು ಯಾಕೆ ಆಗುತ್ತೆ ಅಂದ್ರೆ ಆ ತಂಡದ ಮೇಲೆ ದೇವರ ಕೃಪೆ ಇರುತ್ತೆ. ಅಷ್ಟು ಶ್ರಮದಿಂದ ಆ ತಂಡ ಕೆಲಸ ಮಾಡಿರುತ್ತೆ. ಅದ್ಭುತವಾದ ಹೃದಯ ಇರುವ, ಅದ್ಭುತವಾದ ವ್ಯಕ್ತಿಗಳು ಇರುವುದು ದೇವರ ಕೃಪೆಯಿಂದ,' ಎಂದು ಅರ್ಜುನ್ ಜನ್ಯ (Arjun Janya) ಮಾತನಾಡಿದ್ದಾರೆ.

Latest Videos
Follow Us:
Download App:
  • android
  • ios