ಡ್ರಗ್ಸ್‌ ಮಾಫಿಯಾ ಪ್ರಕರಣದಿಂದ ಬರೋಬ್ಬರಿ 3 ತಿಂಗಳ ಕಾಲ ಪರಪ್ಪನ ಅಗ್ರಹಾರದಲ್ಲಿದ್ದ ನಟಿ ಸಂಜನಾ ಗಲ್ರಾನಿ ಬೇಲ್‌ ಪಡೆದು ಹೊರ ಬಂದ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಹಾಗೂ ಯಾರೊಟ್ಟಿಗೂ ಮಾತನಾಡಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ದಿನೇ ದಿನೆ ಆ್ಯಕ್ಟಿವ್ ಆಗುತ್ತಿದ್ದಂತೆ ಅಭಿಮಾನಿಗಳು ಲೈವ್ ಬರಲು ಡಿಮ್ಯಾಂಡ್‌ ಮಾಡಿದ್ದಾರೆ. ಯಾವೆಲ್ಲಾ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಇಲ್ಲಿದೆ ನೋಡಿ...

ಜೈಲಿನಲ್ಲಿ ಕಿತ್ತಾಡಿದವ್ರು....ಕೋರ್ಟ್‌ನಲ್ಲಿ ಮುದ್ದಾಡಿದ್ರು ರಾಗಿಣಿ-ಸಂಜನಾ

ಅರ್ಧಗಂಟೆ ಮಾತುಕತೆ:
ಆರಂಭದಲ್ಲಿ ಹಾಯ್ ಹಲೋ ಎಂದು ಮಾತನಾಡುತ್ತಿದ್ದ, ಸಂಜತಾ ಪೋಷಕರ ಸಹಾಯ ಹಾಗೂ ಫಾಲೋವರ್ಸ್ ಕೇಳಿದ ಡ್ರಗ್ಸ್ ಕೇಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

'ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದು, ನನ್ನ ಜೀವನದಲ್ಲಾದ ಕಹಿ ಘಟನೆ. ಈ ಘಟನೆಯಿಂದ ಸಾಕಷ್ಟು ಪಾಠ ಕಲಿತಿರುವೆ. ಅಪ್ಪ ಅಮ್ಮನ ಬೆಲೆ ಏನು ಅಂತ ಗೊತ್ತಾಗಿದೆ. ಕಷ್ಟ ಇದ್ದಾಗ ನಮ್ಮ ಜೊತೆ ಇರೋದು ತಾಯಿ, ತಂದೆ ಅಷ್ಟೆ. ಯಾವತ್ತೂ ಯಾರೂ ಅಮ್ಮ ಅಪ್ಪ ಪ್ರೀತಿ ಕಳೆದುಕೊಳ್ಳಬೇಡಿ,' ಎಂದು ಸಂಜನಾ ಮಾತು ಕಿವಿ ಮಾತು ಹೇಳಿದ್ದಾರೆ.

'ನಮ್ಮ ಅಪ್ಪ, ಅಮ್ಮ ಕುಟುಂಬದಿಂದ ದೂರವಾಗಿದ್ದು ನನಗೆ ಸ್ವಂತ ಅನುಭವ ಆಗಿದೆ.  ಜೀವನ ಅನ್ನೋದು ತುಂಬಾ ಚಿಕ್ಕದು. ನಮ್ಮ ಅಮ್ಮ, ಅಪ್ಪ ಜೊತೆಗಿದ್ದರೆ ನಮ್ಮ ಹತ್ತಿರ ಯಾವ ಕೆಟ್ಟ ವಿಚಾರವೂ ಸುಳಿಯುವುದಿಲ್ಲ. ನನಗೂ ಮನಸ್ಸಿದೆ. ನಾನು ನಟಿಯಾದರೆೇನು? ನನಗೆ ಭಾವನೆಗಳು ಇರೋದಿಲ್ವಾ? ಒಂದು ಕೆಟ್ಟ ಮಾತು ಕೇಳಿದ್ರೆ ಸ್ಪಷ್ಟನೆ ನೀಡಬಹುದು. ಸಾವಿರ ಕೆಟ್ಟ ಮಾತುಗಳನ್ನು ಕೇಳಿದ್ದೀನಿ ಅನಿಸುತ್ತಿದೆ,' ಎಂದು ಸಂಜತಾ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. 

ಜೈಲಿನಿಂದ ಹೊರ ಬಂದ ಸಂಜನಾ ಗಲ್ರಾನಿ ಈಗ ಎಲ್ಲಿದ್ದಾರೆ ನೋಡಿ? 

ಸೆಲೆಬ್ರಿಟಿ ಆಗಿದ್ದೇ ತಪ್ಪು?
'ಸಂಜನಾ ಅನ್ನೋ ಹೆಸರು ಬಳಸಿಕೊಂಡು ಈ ರೀತಿ ಸೀನ್ ಕ್ರಿಯೇಟ್ ಮಾಡಿದ್ದರೆ, ನೋವಾಗಲ್ವಾ? ಈ ರೀತಿ ನೋವು ಅನುಭವಿಸುವುದಕ್ಕೆ ನಾವೇನು ಅಷ್ಟು ದೊಡ್ಡ ತಪ್ಪು ಮಾಡಿದ್ದೀನಿ? ಜನರು ಆಡಿಕೊಳ್ಳುವ ಸಾವಿರ ಕೆಟ್ಟ ಮಾತುಗಳನ್ನ ಕೇಳಿದ್ರೆ, ಕಿವಿಯಲ್ಲಿ ರಕ್ತ ಬರುತ್ತದೆ.  ಯಾರು ಕಣ್ಣೀರು ನೋಡಿಲ್ಲ. ಒಂದೇ ಒಂದು ಎವಿಡೆನ್ಸ್‌ ಇಲ್ಲದೇ, ನನ್ನ ಬಗ್ಗೆ ಸಾವಿರಾರು ಕೆಟ್ಟ ಮಾತುಗಳನ್ನು ಆಡಿದ್ದೀರಿ. ನಾನು ಸೆಲೆಬ್ರಿಟಿ ಆಗಿದ್ದೇ ತಪ್ಪಾಯಿತು. ನಾನು  ಯಾರಿಗೂ ಮೋಸ ಮಾಡಿಲ್ಲ. ತಪ್ಪು ಮಾಡಿಲ್ಲ. ಒಂದು ರೂಪಾಯಿ ಯಾಮಾರಿಸಿಲ್ಲ. ಅದರಲ್ಲೂ ಡ್ರೆಗ್ಸ್‌ ವಿಚಾರವನ್ನು ಆ ದೇವರೇ ನೋಡಿ ಕೊಳ್ಳುತ್ತಾನೆ. ಆದರೆ ಜನ ಹರ್ಟ್ ಮಾಡಿರೋದು, ನನಗೆ ಜಾಸ್ತಿ ನೋವುಂಟು ಮಾಡಿದೆ. ನಮಾಜ್ ಮಾಡುವಾಗ ನಾನು ಕೇಳಿಕೊಂಡಿದ್ದು, ಭಗವಂತ ನನಗೆ ಸಾವು ಕೊಡು ಅಂತ. ಜೈಲಿನಲ್ಲಿದ್ದ ಮೂರು ತಿಂಗಳು ಹಗಲು ರಾತ್ರಿ ಅತ್ತಿದ್ದೇನೆ. ಈಗ ನೋಡಿದರೆ ನನ್ನ ಕಣ್ಣಲ್ಲಿ ನೀರೇ ಇಲ್ಲ. ನಾನು ಇನ್ನೂ ನೋವಿನಿಂದ ಸಂಪೂರ್ಣವಾಗಿ ಹೊರ ಬಂದಿಲ್ಲ' ಎಂದು ಸಂಜನಾ ಮಾತನಾಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಬಂಧಿತರಾಗಿದ್ದು, ಮೂರು ತಿಂಗಳಿಗೂ ಹೆಚ್ಚು ಕಾಲ ಕಂಬಿ ಎಣಿಸಿದ್ದಾರೆ. ಷರತ್ತುಗಳೊಂದಿಗೆ ಈ ಇಬ್ಬರೂ ನಟಿಯರಿಗೆ ಜಾಮೀನು ಸಿಕ್ಕಿದೆ.