ರಾಧಿಕಾ ನಾರಾಯಣ್ ಬೋಲ್ಡ್ ಫೋಟೋ ವೈರಲ್; ಹುಣ್ಣಿಮೆ ಚಂದಿರನೇ ಬರಬೇಕಿತ್ತಾ ಎಂದ ನೆಟ್ಟಿಗರು!
ಚಂದಿರನ ಮುಂದೆ ಬೊಂಬೆಯಂತೆ ನಿಂತ ರಾಧಿಕಾ. ಹಾಲಿವುಡ್ ನಟಿನೂ ನಿಮ್ಮ ಮುಂದೆ ಕಮ್ಮಿನೇ ಎಂದ ನೆಟ್ಟಿಗರು.....
ರಂಗಿತರಂಗ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಉಡುಪಿ ಸುಂದರಿ ರಾಧಿಕಾ ನಾರಾಯಣ್. ಅದಾದ ಮೇಲೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಯು-ಟರ್ನ್.
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ರಾಧಿಕಾ ನಾರಾಯಣ್ ಬೋಲ್ಡ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಿಳಿ ಬಣ್ಣದ ಸ್ಕರ್ಟ್‌ಗೆ ಕ್ರಾಪ್ ಟಾಪ್ ಆಂಡ್ ವೈಟ್ ಬಣ್ಣದ ಜಾಕೆಟ್ ಧರಿಸಿದ್ದಾರೆ. 'It takes a full moon to bring a side of me' ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಅಯ್ಯೋ ಆ ಹುಣ್ಣಿಮೆ ಚಂದಿರ ನಿಮ್ಮ ಹಿಂದೆ ಬರಬೇಕಿತ್ತಾ?, ನೀವು ಇಷ್ಟೋಂದು ಬ್ಯೂಟಿಫುಲ್ ಎಂದು ತೋರಿಸಲು ಹುಣ್ಣಿಮೆನೇ ಆಗಬೇಕಿತ್ತು ನೋಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ರಾಧಿಕಾ ನಾರಾಯಣ್ ಈ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಡ್ಯಾನ್ಸ್ ಶೂಟ್ ಸಮಯದಲ್ಲಿ. ಬಿಗ್ ಬಾಸ್ ಕಿಶನ್ ಜೊತೆ ಡ್ಯಾನ್ಸ್ ರೀಲ್ ಮಾಡಿದ್ದಾರೆ.
ಕಾಫಿ ತೋಟ, ಬಿಬಿ5, ದಿ ವಿಲನ್, ಮುಂದಿನ ನಿಲ್ದಾಣ, ಶಿವಾಜಿ ಸೂರತ್ಕಲ್,ಚೇಸ್, ಶಿವಾಜಿ ಸೂರತ್ಕಲ್ ಭಾಗ 2 ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.