ಡಿಸೆಂಬರ್‌ ಮಾಸದಲ್ಲಿ ಬಿಡುಗಡೆಯಾದ ಮೂರು ಸ್ಟಾರ್‌ ಸಿನಿಮಾಗಳು ಚಿತ್ರರಂಗಕ್ಕೆ ತಕ್ಕಮಟ್ಟಿನ ಚೈತನ್ಯ ತಂದಿವೆ. ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿ ಸ್ಯಾಂಡಲ್‌ವುಡ್‌ ಕಳೆಗಟ್ಟುತ್ತಿದೆ.

2025 ಕ್ಯಾಲೆಂಡರ್‌ನ ಕೊನೆಯ ಹಾಳೆ ಹರಿಯುವ ದಿನ ಸಮೀಪಿಸುತ್ತಿದ್ದಂತೇ ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿ ಸ್ಯಾಂಡಲ್‌ವುಡ್‌ ಕಳೆಗಟ್ಟುತ್ತಿದೆ. ಡಿಸೆಂಬರ್‌ ಮಾಸದಲ್ಲಿ ಬಿಡುಗಡೆಯಾದ ಮೂರು ಸ್ಟಾರ್‌ ಸಿನಿಮಾಗಳು ಚಿತ್ರರಂಗಕ್ಕೆ ತಕ್ಕಮಟ್ಟಿನ ಚೈತನ್ಯ ತಂದಿವೆ.

ಡಿ.12ರಂದು ರಿಲೀಸ್‌ ಆದ ದರ್ಶನ್‌ ನಟನೆಯ ‘ಡೆವಿಲ್‌’ ಸಿನಿಮಾ ಕೆಲವೊಂದು ಥೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದರೆ, ಗುರುವಾರ ಬಿಡುಗಡೆಯಾದ ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆಯ ‘45’ ಸಿನಿಮಾ, ಕಿಚ್ಚ ಸುದೀಪ್‌ ಅಭಿನಯದ ‘45’ ಸಿನಿಮಾಗಳು ಬಹುತೇಕ ಚಿತ್ರಮಂದಿರಗಳು ಭರ್ತಿ ಆಗುವಂತೆ ಮಾಡಿದವು.

ರೇಟಿಂಗ್‌ಗೆ ಕೊಕ್‌: ಸಿನಿಮಾ ಬಗೆಗಿನ ಅಪಪ್ರಚಾರ ತಡೆಯುವ ನಿಟ್ಟಿನಲ್ಲಿ ಬುಕ್‌ ಮೈ ಶೋದಲ್ಲಿ ರೇಟಿಂಗ್‌, ಕಾಮೆಂಟ್‌ ನೀಡದಂತೆ ‘ಮಾರ್ಕ್‌’ ಹಾಗೂ ‘45’ ಚಿತ್ರತಂಡಗಳು ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದವು. ಈ ಹಿಂದೆ ‘ಡೆವಿಲ್‌’ ಸಿನಿಮಾ ತಂಡ ಇಂಥದ್ದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿತ್ತು.

ಸ್ಯಾಂಡಲ್‌ವುಡ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ: ಕ್ರಿಸ್‌ಮಸ್‌ ಖುಷಿಯನ್ನು ಸ್ಯಾಂಡಲ್‌ವುಡ್‌ ತಾರೆಗಳು ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್‌ ಮನೆಯಲ್ಲೇ ಕ್ರಿಸ್‌ಮಸ್‌ ಟ್ರೀ, ಲೈಟಿಂಗ್‌ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಒಂದೇ ಬಗೆಯ ಉಡುಗೆಯಲ್ಲಿ ಕ್ರಿಸ್‌ಮಸ್‌ ಆಚರಿಸುವ ಫೋಟೋ ಹಂಚಿಕೊಂಡಿದ್ದಾರೆ. ರುಕ್ಮಿಣಿ ವಸಂತ್‌ ಕ್ರಿಸ್‌ಮಸ್‌ ಟ್ರೀ ಮುಂದೆ ಕ್ಯಾಂಡಲ್‌ ಹಚ್ಚಿಟ್ಟು ಶುಭಾಶಯ ಕೋರಿದ್ದಾರೆ. ಡಾಲಿ ಧನಂಜಯ ಪತ್ನಿ ಡಾ.ಧನ್ಯತಾ ಗಾಂವ್ಕರ್‌ ಜೊತೆಗೆ ವರ್ಷದ ಕೊನೆಯ ಹಬ್ಬದ ಖುಷಿ ಹಂಚಿಕೊಂಡಿದ್ದಾರೆ. ರಮೇಶ್‌ ಅರವಿಂದ್‌, ಪ್ರಿಯಾಂಕಾ ಉಪೇಂದ್ರ, ಮೇಘನಾ ರಾಜ್‌ ಸೇರಿದಂತೆ ಸ್ಯಾಂಡಲ್‌ವುಡ್‌ನ ಬಹಳಷ್ಟು ಮಂದಿ ಕ್ರಿಸ್‌ಮಸ್‌ ಆಚರಣೆಯ ಖುಷಿ ಹಂಚಿಕೊಂಡಿದ್ದಾರೆ.

2025ರ ಸಂಗೀತ ಲೋಕ

2025ರಲ್ಲಿ ಗಮನ ಸೆಳೆದ ಸಂಗೀತ ನಿರ್ದೇಶಕರ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಅಜನೀಶ್‌ ಲೋಕನಾಥ್‌. ‘ಕಾಂತಾರ 1’, ‘ದಿ ಡೆವಿಲ್‌’ ಹಾಗೂ ‘ಮಾರ್ಕ್‌’ ಹೀಗೆ ಒಂದೇ ವರ್ಷದಲ್ಲಿ ಮೂರು ಅದ್ದೂರಿ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ ‘ವರ್ಷದ ಸಂಗೀತ ನಿರ್ದೇಶಕ’ ಎನಿಸಿಕೊಂಡಿದ್ದಾರೆ.

1. ಅಜನೀಶ್‌ ಲೋಕನಾಥ್‌: ಕಾಂತಾರ 1, ದಿ ಡೆವಿಲ್‌, ಮಾರ್ಕ್‌
2. ಅರ್ಜುನ್ ಜನ್ಯ: ಬ್ರ್ಯಾಟ್‌, 45
3. ಚರಣ್‌ ರಾಜ್‌: ಎಕ್ಕ
4. ಸುಮೇಧ್‌ ಕೆ: ಸು ಫ್ರಮ್ ಸೋ
5. ವಿ. ಹರಿಕೃಷ್ಣ: ಮನದ ಕಡಲು