Asianet Suvarna News Asianet Suvarna News

KV Raju Passed Away: 50ಕ್ಕೂ ಹೆಚ್ಚು ಹಿಟ್‌ ಚಿತ್ರಗಳ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ

*   ಅಮಿತಾಭ್‌ ಬಚ್ಚನ್‌ಗೂ ಆ್ಯಕ್ಷನ್‌, ಕಟ್‌ ಹೇಳಿದ್ದ ಕೆ.ವಿ.ರಾಜು 
*   ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ರಾಜು 
*   ಯಶ್‌ ನಟನೆಯ ‘ರಾಜಧಾನಿ’ ರಾಜು ನಿರ್ದೇಶನದ ಕೊನೆಯ ಸಿನಿಮಾ

Sandalwood Veteran Director KV Raju Passed Away in Bengaluru grg
Author
Bengaluru, First Published Dec 25, 2021, 6:19 AM IST

ಬೆಂಗಳೂರು(ಡಿ.25): ಅವಿನಾಶ್‌, ಶಶಿಕುಮಾರ್‌ರಂತಹ ನಟರನ್ನು ಕನ್ನಡ ಚಿತ್ರರಂಗಕ್ಕೆ(Sandalwood) ಪರಿಚಯಿಸಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು(KV Raju) (67) ಶುಕ್ರವಾರ ನಿಧನರಾಗಿದ್ದಾರೆ(Death).

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ(Bengaluru) ಬಸವೇಶ್ವರ ನಗರದ ತಮ್ಮ ನಿವಾಸದಲ್ಲೇ ಚಿಕಿತ್ಸೆ(Treatment) ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಬೆಳಗ್ಗೆ 8 ಗಂಟೆಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Jalappa Passes Away: ಕರ್ನಾಟಕದ ಹಿರಿಯ ರಾಜಕಾರಣಿ ನಿಧನ

ಹಾಸನದ(Hassan) ಬೆಳ್ಳೂರು ಕ್ರಾಸ್‌ನ ಬಳಿ ಇರುವ ಹಳ್ಳಿಯಿಂದ ಬೆಂಗಳೂರಿಗೆ ಬಂದ ಕೆ.ವಿ.ರಾಜು, ತಮ್ಮ ಅಣ್ಣ ಕೆ.ವಿ.ಜಯರಾಮ್‌ ಅವರ ಚಿತ್ರಗಳಿಗೆ ಬರಹಗಾರನಾಗಿ, ಸಹಾಯಕ ನಿರ್ದೇಶಕನಾಗುವ ಮೂಲಕ 70-80ರ ದಶಕದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ‘ಬಂಧಮುಕ್ತ’ ಸಿನಿಮಾ ಮೂಲಕ ನಿರ್ದೇಶಕರಾದರು(Film Director). ಅದೇ ಸಿನಿಮಾವನ್ನು ‘ಇಂದ್ರಜಿತ್‌’ ಹೆಸರಿನಲ್ಲಿ ನಿರ್ದೇಶಿಸಿದ್ದರು. ಅಮಿತಾಭ್‌ ಬಚ್ಚನ್‌(Amitabh Bachchan) ನಟಿಸಿದ್ದರು.

ಸುಂದರಕಾಂಡ, ಯುದ್ಧಕಾಂಡ, ಪೊಲೀಸ್‌ ಲಾಕಪ್‌, ಬೆಳ್ಳಿ ಮೋಡಗಳು, ಬೊಂಬಾಟ್‌ ಹುಡುಗ, ಅಭಿಜಿತ್‌, ಹುಲಿಯ, ಸಂಗ್ರಾಮ, ಕದನ, ನವಭಾರತ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಯಶ್‌(Yash) ನಟನೆಯ ‘ರಾಜಧಾನಿ’ ಇವರ ನಿರ್ದೇಶನದ ಕೊನೆಯ ಸಿನಿಮಾ.
 

Follow Us:
Download App:
  • android
  • ios