Asianet Suvarna News Asianet Suvarna News

Jalappa Passes Away: ಕರ್ನಾಟಕದ ಹಿರಿಯ ರಾಜಕಾರಣಿ ನಿಧನ

* ಕರ್ನಾಟಕದ ಹಿರಿಯ ರಾಜಕಾರಣಿ ಜಾಲಪ್ಪ  ವಿಧಿವಶ 
* ಅಂಗಾಂಗಳ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ  ಜಾಲಪ್ಪ
* ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ನಿಧನ

Veteran Karnataka Congress leader RL Jalappa Passes Away at Kolar rbj
Author
Bengaluru, First Published Dec 17, 2021, 5:29 PM IST

ಕೋಲಾರ, (ಡಿ.17):  ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆರ್.ಎಲ್ ಜಾಲಪ್ಪ (RL Jalappa) ನಿಧನರಾಗಿದ್ದಾರೆ.

ಅಂಗಾಂಗಳ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ  98 ವರ್ಷದ  ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ಇಂದು (ಶುಕ್ರವಾರ) ಸಂಜೆ ಕೊನೆಯುಸಿರೆಳೆದಿದ್ದಾರೆ.

Jalappa Hospitalized ಕರ್ನಾಟಕದ ಹಿರಿಯ ರಾಜಕಾರಣಿ ಆಸ್ಪತ್ರೆಗೆ ದಾಖಲು, ಪರಿಸ್ಥಿತಿ ಗಂಭೀರ

ಶ್ವಾಸಕೋಶ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಡಿ.10ರಂದು ಕೋಲಾರದ(olar) ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿಲ್ಲ.

ಇದೇ  ಫೆಬ್ರವರಿಯಲ್ಲಿ ಜಾಲಪ್ಪ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದು, ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಆದ್ದರಿಂದ ಸತತ ಎರಡು ಗಂಟೆಗಳ ಕಾಲ ಶಸ್ತ್ರ ಚಿಕತ್ಸೆ ಮಾಡಲಾಗಿತ್ತು. 

ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿದ್ದ ಜಾಲಪ್ಪ 4 ಬಾರಿ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸಚಿವರಾಗಿದ್ದರು. ಚಿಕ್ಕಬಳ್ಳಾಪುರ(Chikkaballapur) ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. 

ಆರ್.ಎಲ್ ಜಾಲಪ್ಪ ರಾಜಕೀಯ ಹಾದಿ 
ಆರ್.ಎಲ್. ಜಾಲಪ್ಪ  19 ಅಕ್ಟೋಬರ್  1925  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಜನಿಸಿದ್ದರು. 
ಮೈಸೂರು ಮಹಾರಾಜ ಕಾಲೇಜಿನಲ್ಲಿ  ಬಿ.ಎ.ಪದವಿ ಪಡೆದಿರುವ ಆರ್ ಎಲ್ ಜಾಲಪ್ಪ ಅವರು ಬಳಿಕ  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದರು.

1980-83 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1983-96 ಸದಸ್ಯರು, ಕರ್ನಾಟಕ ವಿಧಾನಸಭೆ
1983-84 ಮತ್ತು 1985-86 ಮಂತ್ರಿ, ಸಹಕಾರ, ಕರ್ನಾಟಕ ಸರ್ಕಾರ
1986-87 ಮಂತ್ರಿ, ಗೃಹ ವ್ಯವಹಾರಗಳ, ಕರ್ನಾಟಕ ಸರ್ಕಾರ
1995-96 ಸಚಿವ, ಕಂದಾಯ, ಕರ್ನಾಟಕ ಸರ್ಕಾರ
1996 11 ನೇ ಲೋಕಸಭೆಗೆ ಚುನಾಯಿತ ಜವಳಿ
1996-98 ಕೇಂದ್ರ ಜವಳಿ ಸಚಿವ
1998 12 ನೇ ಲೋಕಸಭೆ ಮರುಚುನಾಯಿತರಾದವರು(2 ನೇ ಪದ)
1998-99 ಸದಸ್ಯರು, ಹಣಕಾಸು ಸಮಿತಿ ಸದಸ್ಯ, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸದಸ್ಯರು ಸಮಿತಿ , ಸಲಹಾ ಸಮಿತಿಯ ಸದಸ್ಯರು ಕೃಷಿ ಸಚಿವಾಲಯ.
1999 ಮರುಚುನಾಯಿತರಾದವರು 13 ನೇ ಲೋಕಸಭೆ (3 ನೇ ಪದ)
1999-2000 ಸದಸ್ಯರು, ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರು.
2004 ಮರುಚುನಾಯಿತರಾದವರು 14 ಲೋಕಸಭೆ (4ನೇ ಅವಧಿಗೆ),
2006 ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರು 

ಜಾಲಪ್ಪ ನಿಧನಕ್ಕೆ ಸಿಎಂ ಸಂತಾಪ
ಕೇಂದ್ರದ ಮಾಜಿ ಸಚಿವ  ಹಿರಿಯ ರಾಜಕಾರಣಿ ಆರ್ ಎಲ್  ಜಾಲಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ...

ಆರ್ ಎಲ್  ಜಾಲಪ್ಪ ಅವರು ರಾಜ್ಯ ರಾಜಕಾರಣದ ಹಿರಿಯ ಮುಖಂಡರು.  ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಮುಖಿ ಕೆಲಸ ಮಾಡಿದ್ದರು.  ಜಾಲಪ್ಪ ಅವರ ನಿಧನದಿಂದ ರಾಜ್ಯದ ಸಾತ್ವಿಕ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ಕರುಣಿಸಲಿ.. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಮುಖ್ಯಮಂತ್ರಿಗಳು ಕೋರಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ
ಡಿ.12ರಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದ ಆಸ್ಪತ್ರೆಗೆ ಭೇಟಿ ನೀಡಿಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ರಾಜಕಾರಣಿ ಆರ್.ಎಲ್ ಜಾಲಪ್ಪ ಆರೋಗ್ಯ ವಿಚಾರಿಸಿದ್ದರು.

ಅವರ ಜೊತೆಗಿನ ಕೆಲವು ಹಳೆಯ ನೆನಪುಗಳನ್ನು ಸಿದ್ದರಾಮಯ್ಯ ಮೆಲುಕು ಹಾಕಿದರು. ನಾವು ಜನತಾ ಪರಿವಾರದಿಂದಲೂ ಒಟ್ಟಿಗಿದ್ದೇವೆ. ಅವರು ಸದಾ ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದವರ ಪರವಾಗಿದ್ದರು. ಕೋಲಾರದಿಂದಲೇ ಅಹಿಂದ ಪ್ರಾರಂಭ ಆಗಿದ್ದು, ನಾನು ಉದ್ಘಾಟನೆ ಮಾಡಿದ್ದೆ. ಜಾಲಪ್ಪನವರೇ ಅಧ್ಯಕ್ಷತೆ ವಹಿಸಿದ್ರು ಎಂದು ಸ್ಮರಿಸಿದ್ದರು. 

Follow Us:
Download App:
  • android
  • ios