ಬೆಂಗಳೂರು(ಮಾ. 11)  ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಮೊಡವೆ ಹೆಸರಿನ ಚಿತ್ರದೊಂದಿಗೆ ಹೀರೋ ಆಗಿದ್ದರು. ಈಗ ಅದು ಮುಗಿಯುವ ಮೊದಲೆ ಮತ್ತೊಂದು ಸಿನಿಮಾಕ್ಕೆ ನಾಯಕರಾಗಿದ್ದಾರೆ. ಹೆಸರನ್ನು ಅಕ್ಷಿತ್ ಶಶಿಕುಮಾರ್ ಎಂದು ಬದಲಾಯಿಸಿಕೊಂಡು ಸೀತಾಯಣ ಎಂಬ ಚಿತ್ರದ ಮೂಲಕ ಮುಂದೆ ಬರುತ್ತಿದ್ದಾರೆ. 

ಸೀತಾಯಣ ಚಿತ್ರದ ಪಸ್ಟ್ ಲುಕ್ ಹೊರ ಬರುತ್ತಿದೆ.  ಈ ಚಿತ್ರ ಕನ್ನಡದ ಜತೆಗೆ ತೆಲುಗು ಹಾಗೂ ತಮಿಳಿನಲ್ಲೂ ನಿರ್ಮಾಣವಾಗಿದೆ. ಕನ್ನಡದಲ್ಲೇ ಈ ಚಿತ್ರವನ್ನು ಮೊದಲು ತೆರೆಗೆ ತರಲು ಹೊರಟಿದೆ ಚಿತ್ರತಂಡ. 

ಅದೊಂದು ಅಪಘಾತ ಆಗದಿದ್ದರೆ..ಶಶಿಕುಮಾರ್ ಜೀವನ!

ಶಶಿ ಕುಮಾರ್ ತಮ್ಮ ಪುತ್ರನನ್ನು ಈಗ ಕನ್ನಡದ ಜತೆಗೆ ತೆಲುಗು ಹಾಗೂ ತಮಿಳಿಗೂ ಪರಿಚಯಿಸಲು ಮುಂದಾಗಿದ್ದಾರೆ. ಅದಕ್ಕಾಗಿಯೇ ಪುತ್ರನ ಹೆಸರನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ.

‘ಸೀತಾಯಣ’ಲ್ಲಿ ಲಕ್ನೋ ಮೂಲದ ಮಾಡೆಲಿಂಗ್ ಬೆಡಗಿ ಅನ್ ಹಿತ್ ಭೂಷಣ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿಗೂ ಅವರೇ ನಾಯಕಿ. ಹೈದರಾಬಾದ್ ಮೂಲದ ಕಲರ್ ಕ್ಲೌಡ್ಸ್ ಎಂಟರ್ ಟೈನ್ ಮೆಂಟ್ ಬ್ಯಾನರ್ ನಲ್ಲಿ ರೋಹನ್ ಭಾರದ್ವಜ್ ಈ ಚಿತ್ರ ನಿರ್ಮಿಸಿದ್ದರೆ. ಪ್ರಭಾಕರ್ ಆರಿಪಿಕ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.