ಶಶಿಕುಮಾರ್ ಪುತ್ರ ಸ್ಯಾಂಡಲ್’ವುಡ್’ಗೆ ಎಂಟ್ರಿ

Actor Shashikumar son enter to Sandalwood
Highlights

ನಟ ಶಿವರಾಜ್ ಕುಮಾರ್ ಪುತ್ರ ಸ್ಯಾಂಡಲ್’ವುಡ್’ಗೆ ಎಂಟ್ರಿಯಾಗ್ತಾ ಇದ್ದಾರೆ.  ಸಾಮಾನ್ಯವಾಗಿ ಸ್ಟಾರ್ ಪುತ್ರರು ಬೆಳ್ಳಿತೆರೆಗೆ ಎಂಟ್ರಿ ಆಗುವುದು ಪಕ್ಕಾ ಪ್ರೇಮ ಕತೆಯ ಮೂಲಕವೇ ಅನ್ನೋದು ಹಳೇ ಮಾತು. ಅದಕ್ಕೆ ತಕ್ಕಂತೆ ಆದಿತ್ಯ ಶಶಿಕುಮಾರ್ ಕ್ಯೂಟ್ ಲವ್ ಸ್ಟೋರಿ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದು, ಅವರೊಂದಿಗೆ ಅಪೂರ್ವ ಚಿತ್ರದ ನಾಯಕಿ ಅಪೂರ್ವ ಡ್ಯುಯೆಟ್ ಹಾಡಲು ರೆಡಿ ಆಗಿದ್ದಾರೆ.  

ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ನಟನ ಪುತ್ರನ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ಜುಲೈ ಎರಡನೇ  ವಾರಕ್ಕೆ ಆದಿತ್ಯ ಶಶಿಕುಮಾರ್ ಹೀರೋ ಆಗಿ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಸಿದ್ಧಾರ್ಥ್ ಮರದೆಪ್ಪ ನಿರ್ದೇಶನದ ಮೊದಲ ಚಿತ್ರದೊಂದಿಗೆ ಆದಿತ್ಯ ಶಶಿಕುಮಾರ್ ಹೀರೋಗಿರಿ ಶುರುವಾಗುತ್ತಿದೆ. ಈ ಹೊಸ ಪ್ರತಿಭೆ ಆದಿತ್ಯ ಶಶಿಕುಮಾರ್ ಬೇರಾರೂ ಅಲ್ಲ, ಆ್ಯಕ್ಟರ್ ಕಮ್ ಪೊಲಿಟೀಷಿಯನ್ ಶಶಿಕುಮಾರ್ ಅವರ ಪುತ್ರ.

23 ರ ತರುಣ ಆದಿತ್ಯ ತಂದೆಯಂತೆ ತಾನು ನಟ ಆಗಬೇಕೆಂದೇ ಹಠ ತೊಟ್ಟು ನಟನೆಯ ಕಲಿಕೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ನಟನೆಗೆ ಬೇಕಾದ ಆರಂಭಿಕ ತರಬೇತಿ ಮುಗಿಸಿಕೊಂಡೇ ಕ್ಯಾಮರಾ ಎದುರಿಸಲು ಮುಂದಾಗಿದ್ದು, ಬೆಳ್ಳಿತೆರೆಯ ಮೇಲೆ ತಂದೆಯ ವಾರಸುದಾರಿಕೆ ಮುಂದುವರೆಸುವ ತವಕದಲ್ಲಿದ್ದಾರೆ. ಶಶಿಕುಮಾರ್ ಒಂದು ಕಾಲದ ಸೂಪರ್ ಹೀರೋ ಎನಿಸಿಕೊಂಡಿದ್ದಕ್ಕೆ ಅವರ ಲುಕ್ ಕೂಡ ಕಾರಣವಾಗಿತ್ತು. ಆ ಹೊತ್ತಿನ ಕನ್ನಡದ ಅಷ್ಟು ಸ್ಟಾರ್‌ಗಳ ನಡುವೆ ಶಶಿಕುಮಾರ್ ಸ್ಮಾರ್ಟ್ ಹೀರೋ ಎನಿಸಿಕೊಂಡಿದ್ದರು. ಇವತ್ತು ಅವರ ಪುತ್ರ ಆದಿತ್ಯ ಕೂಡ ಅಷ್ಟೇ ಸ್ಫುರದ್ರೂಪಿ. ಚಾಕೋಲೆಟ್ ಬಾಯ್ ಥರ ಕಾಣಿಸಿಕೊಳ್ಳುತ್ತಿದ್ದಾರೆ.

ಅವರ ಲುಕ್‌ಗೆ ತಕ್ಕಂತೆ ನಿರ್ದೇಶಕ ಸಿದ್ಧಾರ್ಥ್ ಚಿತ್ರಕತೆ ರೆಡಿ ಮಾಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ಪುತ್ರರು ಬೆಳ್ಳಿತೆರೆಗೆ ಎಂಟ್ರಿ ಆಗುವುದು ಪಕ್ಕಾ ಪ್ರೇಮ ಕತೆಯ ಮೂಲಕವೇ ಅನ್ನೋದು ಹಳೇ ಮಾತು. ಅದಕ್ಕೆ ತಕ್ಕಂತೆ ಆದಿತ್ಯ ಶಶಿಕುಮಾರ್ ಕ್ಯೂಟ್ ಲವ್ ಸ್ಟೋರಿ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದು, ಅವರೊಂದಿಗೆ ಅಪೂರ್ವ ಚಿತ್ರದ ನಾಯಕಿ ಅಪೂರ್ವ ಡ್ಯುಯೆಟ್ ಹಾಡಲು ರೆಡಿ ಆಗಿದ್ದಾರೆ.  

loader