ಸ್ಯಾಂಡಲ್​ವುಡ್​​ನಲ್ಲಿ ವರ್ಷಾಂತ್ಯದಲ್ಲೊಂದು ಯುದ್ಧಕಾಂಡ ಶುರುವಾಗಿದೆ. ಕಿಚ್ಚ ಸುದೀಪ್ ಮತ್ತು ದಾಸ ದರ್ಶನ್ ಅಭಿಮಾನಿಗಳು ಒಬ್ಬರ ಮೇಲೊಬ್ರು ಕಿಡಿ ಕಾರ್ತಾ ಇದ್ದಾರೆ. ಅಷ್ಟಕ್ಕೂ ಈ ಫ್ಯಾನ್ಸ್ ವಾರ್​ಗೆ ಕಾರಣ ಆಗಿದ್ದು ಬೇರ್ರಾರೂ ಅಲ್ಲ.

ಸ್ಯಾಂಡಲ್​ವುಡ್​​ನಲ್ಲಿ ವರ್ಷಾಂತ್ಯದಲ್ಲೊಂದು ಯುದ್ಧಕಾಂಡ ಶುರುವಾಗಿದೆ. ಕಿಚ್ಚ ಸುದೀಪ್ ಮತ್ತು ದಾಸ ದರ್ಶನ್ ಅಭಿಮಾನಿಗಳು ಒಬ್ಬರ ಮೇಲೊಬ್ರು ಕಿಡಿ ಕಾರ್ತಾ ಇದ್ದಾರೆ. ಅಷ್ಟಕ್ಕೂ ಈ ಫ್ಯಾನ್ಸ್ ವಾರ್​ಗೆ ಕಾರಣ ಆಗಿದ್ದು ಬೇರ್ರಾರೂ ಅಲ್ಲ ಖುದ್ದು ಕಿಚ್ಚ ಸುದೀಪ್ & ದರ್ಶನ್ ಪತ್ನಿ ವಿಜಯಲಕ್ಷ್ಮೀ ಆಡಿದ ಈ ಮಾತುಗಳು. ಈ ಇಬ್ಬರ ಮಾತುಗಳು ಈಗ ಕಿಚ್ಚು ಹಚ್ಚಿವೆ. ಈ ಮಾತುಗಳನ್ನೇ ಇಟ್ಟುಕೊಂಡು ಈಗ ಫ್ಯಾನ್ಸ್ ವಾರ್ ದೊಡ್ಡದಾಗಿ ಶುರುವಾಗಿದೆ. ಅಷ್ಟಕ್ಕೂ ಈ ಫ್ಯಾನ್ಸ್ ವಾರ್ .. ಸ್ಟಾರ್ ವಾರ್ ಹಿಂದೆ ದೊಡ್ಡ ಕಥೆನೇ ಇದೆ. ಯೆಸ್ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ರಿಲೀಸ್​ಗೆ ಇನ್ನೆರಡೇ ದಿನ ಬಾಕಿ ಇವೆ. ಗುರುವಾರ ಮಾರ್ಕ್ ಪ್ಯಾನ್ ಇಂಡಿಯಾ ರಿಲೀಸ್ ಆಗ್ತಾ ಇದೆ.

ಸೋ ಹುಬ್ಬಳ್ಳಿಯಲ್ಲಿ ಮಾರ್ಕ್ ಪ್ರೀ ಲಾಂಚ್ ಇವೆಂಟ್ ನಡೆದಿದ್ದು ಸುದೀಪ್ ತಮ್ಮ ಸ್ನೇಹಬಳಗದ ಸಮೇತ ಭಾಗಿ ಆಗಿದ್ದಾರೆ. ಹುಬ್ಬಳ್ಳಿಯ ಗಂಡುಮೆಟ್ಟಿದ ನೆಲದಲ್ಲಿ ನಿಂತು ಮಾತನಾಡಿದ್ರೆ ಇಡೀ ಕರುನಾಡಿಗೆ ಕೇಳಿಸುತ್ತೆ ಅಂತ ಮಾತು ಶುರು ಮಾಡಿದ ಕಿಚ್ಚ, ಆಮೇಲೆ ಆಡಿದ್ದೆಲ್ಲಾ ಕಿಡಿನುಡಿಗಳೇ. ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಒಂದೇ ಕಾರಣಕ್ಕೋಸ್ಕರ, ನಾನು ಬಾಯಿ ಮುಚ್ಚಿಕೊಂಡು ಇದ್ದೆ ಹೊರತು ಬಾಯಿ ಇಲ್ಲ ಅಂತಲ್ಲ’ . ಈಗ ನಾನು ಯುದ್ಧಕ್ಕೆ ಸಿದ್ದ ಅಂದುಬಿಟ್ರು ಕಿಚ್ಚ. ಹೌದು ಸುದೀಪ್ ಆಡಿರೋ ಮಾತುಗಳನ್ನ ಕೇಳಿದವರಿಗೆ , ಈ ಯುದ್ಧ ಯಾರ ವಿರುದ್ದ ಅನ್ನೋ ಡೌಟ್ ಶುರುವಾಗಿದೆ.

ಯಾಕಂದ್ರೆ ಮಾರ್ಕ್ ಸಿನಿಮಾ ಬಿಡುಗಡೆ ದಿನವೇ ಶಿವಣ್ಣ, ಉಪೇಂದ್ರ ರಾಜ್ ಶೆಟ್ಟಿ ನಟಿಸಿರೋ 45 ಸಿನಿಮಾ ರಿಲೀಸ್ ಆಗ್ತಾ ಇದೆ. ಮಾರ್ಕ್ ಮತ್ತು 45 ಸಿನಿಮಾಗಳ ನಡುವೆ ಬಾಕ್ಸಾಫೀಸ್ ಸಮರ ನಡೆಯಲಿದೆ. ಈಗಾಗ್ಲೇ 45 ತಂಡದವರು ನಮ್ಮ ಸಿನಿಮಾನೂ ಗೆಲ್ಲಲಿ ಮಾರ್ಕ್ ಕೂಡ ಗೆಲ್ಲಲಿ ಅಂತ ಹಾರೈಸಿದ್ದಾರೆ. ಆದ್ರೆ ಕಿಚ್ಚ ಯಾಕೆ ಸಮರದ ಮಾತನಾಡಿದ್ರು ಅಂತ ಫ್ಯಾನ್ಸ್​ಗೆ ಡೌಟ್ ಬಂದಿದೆ. ಅಸಲಿಗೆ ಕಿಚ್ಚ ಸಮರ ಸಾರಿರೋದು 45 ಮೇಲಲ್ಲ. ಡೆವಿಲ್ ಮೇಲೆ. ಹೌದು ಸುದೀಪ್ ಸಮರಕ್ಕೆ ಸಿದ್ದ ಅಂದಿರೋದು ಡೆವಿಲ್ ಅಭಿಮಾನಿಗಳಿಗೆ. ಅಸಲಿಗೆ ಡಿಸೆಂಬರ್ 11ರಂದು ತೆರೆಗೆ ಬಂದಿದ್ದ ಡೆವಿಲ್ ಸಿನಿಮಾ ಮೊದಲ ದಿನ ಬಿಗ್ ಓಪನಿಂಗ್ ಪಡೆದುಕೊಂಡ್ರೂ, ಆ ಬಳಿಕ ಡಲ್ ಆಗಿತ್ತು.

ಡೆವಿಲ್ ಸಿನಿಮಾದ 10 ಸಾವಿರಕ್ಕೂ ಅಧಿಕ ಪೈರಸಿ ಲಿಂಕ್​ಗಳು ಪತ್ತೆಯಾಗಿವೆ, ಅವುಗಳನ್ನ ಡಿಲೀಟ್ ಮಾಡಿದ್ದೀವಿ ಅಂತ ಪೋಸ್ಟ್ ಹಂಚಿಕೊಂಡಿದ್ದ ದರ್ಶನ್ ಫ್ಯಾನ್ಸ್, ಮುಂದೆ ಬರಲಿರೋ ಸಿನಿಮಾಗೆ ನಾವೂ ಹೀಗೆ ಮಾಡ್ತಿನಿ ಅಂತ ಎಚ್ಚರಿಕೆ ಕೊಟ್ಟಿದ್ರು. ಬಹುಶಃ ಇದಕ್ಕೆ ಉತ್ತರವಾಗಿ ಸುದೀಪ್ ಈ ಮಾತು ಹೇಳಿದ್ದಾರೆ. ದರ್ಶನ್-ಸುದೀಪ್ ಕುಚಿಕುಗಳಾಗಿದ್ದಾಗ ಅವರ ಅಭಿಮಾನಿಗಳ ನಡುವೆ ಕೂಡ ಸ್ನೇಹ ಇತ್ತು. ಆದ್ರೆ ಈಗ ಕಿಚ್ಚ-ದಾಸನ ಫ್ಯಾನ್ಸ್ ಕಟ್ಟಾ ವೈರಿಗಳಾಗಿ ಬಿಟ್ಟಿದ್ದಾರೆ. ಆಧ್ರೆ ಈ ಫ್ಯಾನ್ಸ್ ವಾರ್​ನ ಕಡಿಮೆ ಮಾಡೋ ಬದಲು ಮತ್ತಷ್ಟು ಹೆಚ್ಚಿಸುವ ಮಾತನಾಡಿದ್ದಾರೆ ಸುದೀಪ್. ತಡೆಯೋ ತನಕ ತಡೆಯಿರಿ, ಮಾತಾಡೋ ಟೈಮ್​​ನಲ್ಲಿ ಮಾತಾಡಿ ಅಂತ ಹೇಳಿ ಕಿಚ್ಚ ಉರಿಯೋ ಬೆಂಕಿಗೆ ಇನ್ನಷ್ಟು ಕಿಚ್ಚು ಹಚ್ಚಿದಂತೆ ಕಾಣ್ತಾ ಇದೆ.

ಪೈರಸಿ ಮಾಡೋದಕ್ಕೆ ಮುಂದಾಗುವವರನ್ನ ಕಾನೂನು ಮೂಲಕ ಶಿಕ್ಷಿಸಬಹುದು. ಅದು ಬಿಟ್ಟು ಹೀಗೆ ಫ್ಯಾನ್ಸ್ ವಾರ್​ಗೆ ಪ್ರೇರೇಪಿಸಿದ್ದು ಬೇಕಿರಲಿಲ್ಲ ಅಂತ ಚಿತ್ರರಂಗದ ಹಿರಿಯರು ಮಾತನಾಡ್ತಾ ಇದ್ದಾರೆ. ಇನ್ನೂ ಶಿವಣ್ಣ, ಉಪೇಂದ್ರ ಫ್ಯಾನ್ಸ್ ಸುದೀಪ್ ತಮ್ಮ ಬಗ್ಗೆ ಹೇಳಿರಬಹುದು ಅಂದುಕೊಂಡು ಗರಂ ಆಗಿದ್ದಾರೆ. ಒಟ್ನಲ್ಲಿ ಕಿಚ್ಚನ ಯುದ್ಧದ ಮಾತು ನಿಜವಾಗಲೂ ಸ್ಯಾಂಡಲ್​ವುಡ್​ನಲ್ಲಿ ಯುದ್ಧವನ್ನೇ ಸೃಷ್ಟಿಮಾಡಿಬಿಟ್ಟಿದೆ. ಹೌದು ಕಿಚ್ಚ ಸುದೀಪ್ ಯುದ್ಧದ ಮಾತನಾಡಿದ್ದು ಪೈರಸಿ ಬಗ್ಗೆ. ಪೈರಸಿ ಅನ್ನೋದು ದೊಡ್ಡ ಪಿಡುಗಾಗಿ ಬಿಟ್ಟಿದೆ. ಅದನ್ನ ಮಟ್ಟ ಹಾಕಲಿಕ್ಕೆ ಸುದೀಪ್ ಯುದ್ಧ ಅನ್ನೋ ಪದ ಬಳಸಿದ್ರು ಅಂದಿದ್ದಾರೆ ಸುದೀಪ್ ಆಪ್ತ ರಾಜಕಾರಣಿ ರಾಜು ಗೌಡ.

ಡಿಸೆಂಬರ್ 11ನೇ ತಾರೀಖು ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ತೆರೆಗೆ ಬಂದಿತ್ತು. ಮೊದಲ ದಿನ 10 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಸಿನಿಮಾ ಆ ಬಳಿಕ ಬಾಕ್ಸಾಫೀಸ್​​ನಲ್ಲಿ ಡಲ್ ಆಗಿತ್ತು. ಹೀಗೆ ಸಿನಿಮಾದ ಕಲೆಕ್ಷನ್ ಡ್ರಾಪ್ ಆಗೋದಕ್ಕೆ ಪೈರಸಿನೇ ಕಾರಣ ಅನ್ನೋದು ಡೆವಿಲ್ ತಂಡದ ಆರೋಪ. ಖುದ್ದು ಡೆವಿಲ್ ಸಿನಿಮಾ ತಂಡ ಈ ಬಗ್ಗೆ ಪೋಸ್ಟರ್ ವೊಂದನ್ನ ಹಂಚಿಕೊಂಡಿದ್ದು , 10, 500ಕ್ಕೂ ಅಧಿಕ ಪೈರಸಿ ಲಿಂಕ್ ಡಿಲೀಟ್ ಮಾಡಿದ್ದೀವಿ. ದಯವಿಟ್ಟು ಪೈರಸಿ ಹಂಚಬೇಡಿ ಥಿಯೇಟರ್​​ನಲ್ಲಿ ಸಿನಿಮಾ ನೋಡಿ ಅಂತ ಮನವಿ ಮಾಡಿಕೊಂಡಿದೆ. ದರ್ಶನ್ ಅಭಿಮಾನಿಗಳ ಪೇಜ್​ನಲ್ಲೂ ಈ ಪೋಸ್ಟ್ ಶೇರ್ ಮಾಡಲಾಗಿದೆ. ಆದ್ರೆ ಈ ಪೋಸ್ಟ್​​ಗೆ ಕೆಲ ಪುಂಡ ಅಭಿಮಾನಿಗಳು, ನಾವು ಕೂಡ ಮುಂದೆ ಬರಲಿರುವ ಸಿನಿಮಾದ ಪೈರಸಿ ಮಾಡಿ ಹಂಚೋಣ ಅಂತ ಕಮೆಂಟ್ ಮಾಡಿದ್ರು.

ತಲೆ ಕೆಡಿಸಿಕೊಳ್ಳಬೇಡಿ ಎಂದ ವಿಜಯಲಕ್ಷ್ಮೀ

ಗುರುವಾರ ಬರಲಿರೋ ಮಾರ್ಕ್ ಅವರ ಹಿಟ್ ಲಿಸ್ಟ್ ನಲ್ಲಿ ಇತ್ತು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೇ ಕಾರಣಕ್ಕೆ ಸುದೀಪ್ ಹುಬ್ಬಳ್ಳಿ ಇವೆಂಟ್ ನಲ್ಲಿ ಆ ಮಾತು ಹೇಳಿದ್ರು. ಕೆಲವರು ಕಾಯ್ತಾ ಇದ್ದಾರೆ ನಮ್ಮ ಸಿನಿಮಾದ ಪೈರಸಿ ಮಾಡೋದಕ್ಕೆ.. ಆದ್ರೆ ಅವರ ವಿರುದ್ದ ನಾವು ಯುದ್ಧಕ್ಕೆ ಸಿದ್ದ ಅಂತ. ಆದ್ರೆ ಇದಕ್ಕೆ ಟಾಂಗ್ ಅನ್ನುವಂತೆ ದಾವಣಗೆರೆಯ ಡೆವಿಲ್ ವಿಜಯಯಾತ್ರೆಯಲ್ಲಿ ವಿಜಯಲಕ್ಷ್ಮೀ ದರ್ಶನ್ ಮಾತನಾಡಿದ್ದಾರೆ. ದರ್ಶನ್ ಹೊರಗಿದ್ದಾಗ, ಇವರು ಬೆಂಗಳೂರಿನಲ್ಲಿ ಇದ್ದಾರೋ ಇಲ್ಲವೋ ಅನ್ನೋದೇ ಗೊತ್ತಿರಲ್ಲ. ಈಗ ದಾಸ ಒಳಗಿದ್ದಾಗ ಈ ರೀತಿ ಮಾತನಾಡ್ತಾರೆ.. ತಲೆ ಕೆಡಿಸಿಕೊಳ್ಳಬೇಡಿ ಅಂದಿದ್ದಾರೆ. ಒಟ್ಟಾರೆ ಇಬ್ಬರ ಮಾತುಗಳು ಅಭಿಮಾನಿಗಳನ್ನ ಕೆರಳಿಸಿವೆ. ಮತ್ತೆ ಫ್ಯಾನ್ಸ್ ವಾರ್ ಧಗಧಗಿಸ್ತಾ ಇದೆ. ಈ ಯುದ್ಧ ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲ..!