ಸ್ಯಾಂಡಲ್​ವುಡ್​ ತಾರೆ ನಿವೇದಿತಾ ಗೌಡ ಅವರು ಅಮೆರಿಕದಲ್ಲಿರುವ ಸೇಂಟ್​ ಮೇರಿಸ್​ ಚರ್ಚ್​ಗೆ ಭೇಟಿ ಕೊಟ್ಟಿದ್ದು, ಮಳೆಯನ್ನು ಎಂಜಾಯ್​ ಮಾಡ್ತಿದ್ದಾರೆ. ಫ್ಯಾನ್ಸ್​ ಏನಂದ್ರು?  

ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಸಿದ್ದಾರೆ. ವಿಭಿನ್ನ ಸ್ಕಿಟ್‍ಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಬಿಗ್​ ಬಾಸ್​ ಶೋನಲ್ಲಿ ಪರಿಚಯವಾದ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರಿಗೆ ಹೃದಯ ನೀಡಿ ಮದುವೆಯಾದವರು ನಿವೇದಿತಾ. ಈ ಜೋಡಿ ಕ್ಯೂಟ್​ ಜೋಡಿ ಎಂದೇ ಫೇಮಸ್​ ಆಗಿದೆ. ಇಬ್ಬರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದು, ಅವರ ವಿಡಿಯೋಗಳು ಸಹಜವಾಗಿ ವೈರಲ್​ ಆಗುತ್ತವೆ. ಅದೇ ಇನ್ನೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕಾರಣಕ್ಕೆ ನಿವೇದಿತಾ ಗೌಡ (Niveditha Gowda) ಹೆಚ್ಚಾಗಿ ರೀಲ್ಸ್​ ಮಾಡಿ ಫ್ಯಾನ್ಸ್​ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಕಲರ್​ಫುಲ್​ ಫೋಟೋಶೂಟ್​ ಮಾಡಿಸಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಕೆಲವೊಮ್ಮೆ ಚಿತ್ರ ವಿಚಿತ್ರ ರೀಲ್ಸ್​ಗಳಿಂದ ಟ್ರೋಲ್​ ಆಗುವುದೂ ಇದೆ. ಆದರೆ ಗೊಂಬೆ ಎಂದೇ ಕರೆಸಿಕೊಳ್ಳುವ ನಿವೇದಿತಾ ಅವರಿಗೆ ಅಪಾರ ಪ್ರಮಾಣದ ಫ್ಯಾನ್ಸ್​ ಇದ್ದು ಸದಾ ತಮ್ಮ ನೆಚ್ಚಿನ ನಟಿ ಏನು ಶೇರ್​ ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ. ಒಳ್ಳೆಯ ಕಮೆಂಟ್ಸ್​ ಮಾಡುವ ನೆಟ್ಟಿಗರಿಗೆ ಥ್ಯಾಂಕ್ಸ್​ ಹೇಳುತ್ತಾ ಟ್ರೋಲ್​ಗಳಿಗೆ ತಲೆ ಕೆಡಿಸಿಕೊಳ್ಳದವರಲ್ಲಿ ನಿವೇದಿತಾ ಗೌಡ ಕೂಡ ಒಬ್ಬರು.

ಇಂತಿಪ್ಪ ನಟಿ, ಕೆಲ ದಿನಗಳ ಹಿಂದೆ ಹೇಳಿಕೆಯೊಂದನ್ನು ನೀಡಿ ಶಾಕ್​ (Shocking) ನೀಡಿದ್ದರು. ಡಿಫರೆಂಟ್ ಆಗಿರುವ ಕಾಟನ್ ಕ್ಯಾಂಡಿ ಸೇವಿಸಬೇಕು ಎಂದು ಕೊರಮಂಗಲದಲ್ಲಿರುವ ಕ್ಯಾಂಡಿ ಅಂಗಡಿಗೆ ಭೇಟಿ ನೀಡಿ ಇಡೀ ದಿನ ಎಂಜಾಯ್ ಮಾಡಿ ವಿಡಿಯೋ ಮಾಡಿದ್ದ ನಿವೇದಿತಾ ಅವರು ತಮ್ಮ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದರು. ಮೈಸೂರಿನಲ್ಲಿ ನೆನೆದ ಘಟನೆಯನ್ನು ನೆನೆದು ತಾವು ಸಾಯುವ ಹಾದಿಯಲ್ಲಿ ಇದ್ದುದಾಗಿ ಅಂದುಕೊಂಡಿದ್ದರ ಕುರಿತು ಹೇಳಿಕೊಂಡಿದ್ದರು. 'ಮೈಸೂರಿನಲ್ಲಿ ಒಮ್ಮೆ ನಾನು ಮ್ಯಾಜಿಕ್ ಪಾಪ್ (Magic Pop) ಸೇವಿಸಿದೆ. ಆಗ ಅದರ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ ನನ್ನ ಬ್ರೈನ್ ಪಾಪ್ ಆಗುತ್ತಿದೆ ಅಂದುಕೊಂಡು ಫುಲ್ ಹೆದರಿಕೊಂಡು ಸತ್ತು ಹೋಗುವೆ ಅಂದುಕೊಂಡಿದ್ದೆ. ಮ್ಯಾಜಿಕ್ ಪಾಪ್ ಬಗ್ಗೆ ಅವರಿಗೆ ಹೇಳಿರಲಿಲ್ಲ. ಆದರೆ ಅಂದು ನನ್ನ ಲಾಸ್ಟ್‌ ದಿನ ಎಂದು ಎಂಜಾಯ್ ಮಾಡಿಕೊಂಡು ಖುಷಿಯಾಗಿದ್ದೆ. ಎರಡು ದಿನಗಳ ನಂತರ ಅದು ಚಾಕೋಲೇಟ್ ಎಂದು ತಿಳಿಯಿತ್ತು' ಎಂದು ನಿವೇದಿತಾ ಹೇಳಿದ್ದರು. ಹೀಗೆ ತಾವು ಸಾಯುವ ಭಯದಲ್ಲಿದ್ದ ಬಗ್ಗೆ ಹೇಳಿದ್ದರು.

ನನ್ನ ಕೊನೆ ದಿನವೆಂದು ಖುಷಿಯಾಗಿರುವೆ; ಬ್ರೈನ್ ಪಾಪ್ ತಿಂದು ಸಾಯುವ ಭಯದಲ್ಲಿದ್ದ ನಿವೇದಿತಾ ಗೌಡ!

ಇದನ್ನು ಹೇಳುತ್ತಲೇ ಫ್ಯಾನ್ಸ್​ಗೆ ಶಾಕ್​ ನೀಡಿದ್ದ ಬೆನ್ನಲ್ಲೇ ನಟಿ ಈಗ ಅಮೆರಿಕಕ್ಕೆ ಹಾರಿದ್ದಾರೆ. ಹೌದು! ನಿವೇದಿತಾ ಅವರು ಅಮೆರಿಕದಲ್ಲಿರುವ ಸೇಂಟ್​ ಮೇರಿ ಚರ್ಚ್​ಗೆ ಭೇಟಿ ಕೊಟ್ಟಿದ್ದು ಅದರ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ (instagram) ಶೇರ್​ ಮಾಡಿಕೊಂಡಿದ್ದಾರೆ. ತುಂತುರು ಮಳೆ ಬೀಳುತ್ತಿರುವಾಗ ಹೀಗೊಂದು ವಾಕಿಂಗ್​ಗೆ ಬಂದಿರುವುದಾಗಿ ನಿವೇದಿತಾ ಬರೆದುಕೊಂಡಿದ್ದಾರೆ. 

ವಿಡಿಯೋದಲ್ಲಿ ಸೇಂಟ್​ ಮೇರಿ ಚರ್ಚ್​ (Saint Mary Church) ನೋಡಬಹುದು. ಅದರ ಮುಂದುಗಡೆ ನಿಂತು ವಿಡಿಯೋ ಶೂಟ್​ ಮಾಡಿರುವ ನಿವೇದಿತಾ, ಅಲ್ಲಿಯ ಹವಾಮಾನವನ್ನು ಸಕತ್​ ಎಂಜಾಯ್​ ಮಾಡುತ್ತಿರುವಂತೆ ತೋರುತ್ತಿದೆ. ಈಕೆಯ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದು, ಸೋ ಕ್ಯೂಟ್​ ಎಂದು ಹೇಳುತ್ತಿದ್ದಾರೆ. ಚರ್ಚ್​ ಎದುರು ನಿಂತಿರುವ ನೀರಿನಲ್ಲಿ ಹಾರಿ ಚಿಕ್ಕಮಕ್ಕಳಂತೆ ನಿವೇದಿತಾ ಕುಣಿದಾಡಿದ್ದನ್ನು ಕಂಡು ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವಿಡಿಯೋ ತುಂಬೆಲ್ಲಾ ಹಾರ್ಟ್​ ಎಮೋಜಿ ಕಾಣಿಸುತ್ತಿದೆ. 

ನಿವೇದಿತಾ ಗೌಡ ಅಡುಗೆ ತಿಂದು ಆಂಬ್ಯುಲೆನ್ಸ್‌ ಕೇಳಿದ ಕ್ಯಾಮೆರಾ ಮ್ಯಾನ್; ವಿಡಿಯೋ ವೈರಲ್!

View post on Instagram