ನಿವೇದಿತಾ ಗೌಡ ಅಡುಗೆ ತಿಂದು ಆಂಬ್ಯುಲೆನ್ಸ್‌ ಕೇಳಿದ ಕ್ಯಾಮೆರಾ ಮ್ಯಾನ್; ವಿಡಿಯೋ ವೈರಲ್!

ಇರೋ ಬರೋ ಉಳಿದಿರುವ ಐಟಂಗಳಿಂದ ನಿವಿ ಮಾಡಿರುವ ಸ್ಯಾಂಡ್ವಿಚ್  ತಿಂದು ಆಂಬ್ಯುಲೆನ್ಸ್‌ ಕೇಳಿ ಟೀಂ...ರೆಸಿಪಿ ಇಲ್ಲಿದೆ...
 

Colors Kannada Gicchi Giligili Niveditha Gowda sandwich recipe viral vcs

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಸಾಮಾನ್ಯವಾಗಿ ನಿವಿ ಅಡುಗೆ ಮಾಡೋದಲ್ಲಿ ದೊಡ್ಡ ಎಡವಟ್ಟು ಆದರೂ ಏನೋ ಒಂದು ಮಾಡಿದಾಗ ಚಂದನ್ ಅಥವಾ ಅವರ ಯುಟ್ಯೂಬ್ ತಂಡ ಟೇಸ್ಟ್‌ ಮಾಡುತ್ತಾರೆ. ಆದರೆ ಈ ಸಲ ಮಾತ್ರ ಯಾರೂ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ತಯಾರಿಸುತ್ತಿದ್ದಾರೆ ನಿವಿ. ಏನಪ್ಪಾ ಸ್ಪೆಷಲ್ ಅಂತಾನಾ? ಅದೇ ಉಳಿದಿರೋ ಐಟಂ ಹಾಕಿ ಮಾಡಿರುವ ಸ್ಯಾಂಡ್ವಿಚ್.

ಹೌದು! ಸ್ಯಾಂಡ್ವಿಚ್ ಮಾಡೋಣ ಅಂತ ನಿವಿ ಟೊಮ್ಯಾಟೋ, ಈರುಳ್ಳಿ ಮತ್ತು ದೊಣ್ಣೆ ಮೆಣಸಿನಕಾಯಿ ಕಟ್ ಮಾಡಿಟ್ಟುಕೊಂಡಿದ್ದಾರೆ. ಅಷ್ಟರಲ್ಲಿ ಯುಟ್ಯೂಬ್ ಟೀಂ ಒಂದು ಸರ್ಪ್ರೈಸ್‌ ಬ್ಯಾಗ್ ಕೊಟ್ಟಿದ್ದಾರೆ. ಆ ಬ್ಯಾಗ್‌ನಲ್ಲಿರುವ ಎಲ್ಲಾ ಐಟಂಗಳನ್ನು ಸೇರಿಸಿ ಸ್ಯಾಂಡ್ವಿಚ್ ಮಾಡಬೇಕು ಎಂದು. ಬ್ಯಾಗ್‌ನಿಂದ ನಿವಿ ಒಂದೊಂದೆ ಐಟಂ ತೆಗೆದು ನೋಡಿದರೆ ಆಗಲಕಾಯಿ, ಐಸ್‌ ಕ್ರೀಂ, ಹುಣಸೆಹಣ್ಣಿನ ಪೇಸ್ಟ್‌, ಉಪ್ಪಿನಕಾಯಿ, ಚಾಕೋಲೇಟ್‌ ಸಾಸ್ ಮತ್ತು ಬಾಳೆಹಣ್ಣು ಕೊಟ್ಟಿದ್ದಾರೆ.

ಹಾಸಿಗೆಯಿಂದ ಎದ್ದೇಳಲು ಆಗಲ್ಲ, ಟೂತ್‌ಬ್ರಶ್‌ನಲ್ಲಿ ಉಗುರು ಕ್ಲೀನ್ ಮಾಡುವೆ: ನಿವೇದಿತಾ ಗೌಡ

'ನಾನು ಮಾಡುವುದನ್ನು ನನಗೆ ತಿನ್ನಲು ಆಗುವುದಿಲ್ಲ ಅದಿಕ್ಕೆ ನನ್ನ ಟೀಂ ತಿನ್ನುತ್ತಾರೆ' ಎಂದು ನಿವಿ ಅಡುಗೆ ಶುರು ಮಾಡಿದ್ದಾರೆ. ಎಲ್ಲಾ ತರಕಾರಿಗಳನ್ನು ಕಟ್ ಮಾಡಿಟ್ಟುಕೊಂಡು ಬ್ರೆಡ್‌ನ ಟೋಸ್ಟ್‌ ಮಾಡಿಕೊಂಡಿದ್ದಾರೆ ಆನಂತರ ಒಂದೊಂದೆ ಐಟಂಗಳನ್ನು ಬಳಸಿ ಅಲಂಕಾರ ಮಾಡಿದ್ದಾರೆ. ನೋಡುವಾಗಲೇ ವಾಂತಿ ಬರುತ್ತಿದೆ ಎಂದ ನಿವಿ ತಟ್ಟೆ ತುಂಬಾ ಐಟಂ ತುಂಬಿಸಿ ಕ್ಯಾಮೆರಾ ಮ್ಯಾನ್‌ನ ಕರೆದಿದ್ದಾರೆ. ಫುಲ್ ಖುಷಿಯಿಂದ ಕ್ಯಾಮೆರಾ ಮ್ಯಾನ್ ತಿನ್ನುವ ಮೊದಲು ದೇವರನ್ನು ನೆನಪಿಸಿಕೊಂಡಿದ್ದಾರೆ ಆನಂತರ ಒಂದು ಬೈಟ್‌ ತೆಗೆದುಕೊಳ್ಳುತ್ತಾರೆ...ತಕ್ಷಣವೇ ಎರಡು ಕಣ್ಣುಗಳನ್ನು ಮೇಲೆ ಮಾಡಿಕೊಂಡು ದಯವಿಟ್ಟು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಎಂದಿದ್ದಾರೆ. 

ಈ ವಿಡಿಯೋವನ್ನು ನಿವಿ ಅಪ್ಲೋಡ್ ಮಾಡಿ 'ಮನೆಯಲ್ಲಿ ಯಾರೂ ದಯವಿಟ್ಟು ಪ್ರಯೋಗ ಮಾಡಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ. 'ನಿಮ್ಮ ಅಡುಗೆ ಡಬ್ಬ ತರ ಇರುತ್ತೆ ಆದರೆ ನಿವೇದಿತಾ ಮಾತನಾಡುವ ಶೈಲಿ ಹಾಗೂ ಪೆದ್ದಿ ತರ ವರ್ತಿಸುವ ರೀತಿ ನನಗೆ ಇಷ್ಟ' ಎಂದು ನೆಟ್ಟಿಗನೋರ್ವ ಕಾಮೆಂಟ್ ಮಾಡಿದ್ದಾರೆ. 

ಬರ್ತಡೆ ಕ್ಯಾಂಡಲ್‌ನ ಸಿಗರೇಟ್‌ ರೀತಿ ಹಚ್ಚಿದ ನಿವೇದಿತಾ ಗೌಡ; ಚಿನ್ನದ ಸರ ಗಿಫ್ಟ್‌ ಕೊಟ್ಟ ಚಂದನ್!

ಕಿಸ್ ವಿಡಿಯೋ ವೈರಲ್!

ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಸಖತ್ ಆಕ್ಟಿವ್ ಆಗಿದ್ದು ಸೆನ್ಸೇಷನ್ ಕ್ರಿಯೇಟ್ ಮಾಡುವ ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ನಿವೇದಿತಾ ಮತ್ತು ಚಂದನ್ ಡೈವ್ ಮಾಡಿ ಲಿಕ್‌ ಲಾಕ್ ಮಾಡಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. 'ನೀವು ಗಂಡ-ಹೆಂಡತಿ ಇದೆಲ್ಲಾ ನಿಮ್ಮ Bedroom ಇಟ್ಕೊಳ್ಳಿ Public ಎಕೆ ತೋರಿಸುತ್ತೀರ. ಅಸಹ್ಯ, ಅನಾಗರಿಕ ತೆಯ ಪರಮವಾದಿ' ಎಂದು ಗೋಕಾಕ್ ಗೋವಿಂದರಾಜು ಖಾತೆಯವರು ಕಾಮೆಂಟ್ ಮಾಡಿದ್ದರು. 'ಇದುನ್ನೆ ಬೇರೆಯವರು ಮಾಡಿದ್ರೆ ಚಂದ ಆದ್ರೆ ಚಂದನ್ ಶೆಟ್ಟಿ ನಿವೇದಿತಾ ಗೌಡ ಮಾಡಿದ್ರೆ ತಪ್ಪು ಏನಾಗಿದೆ ಈ ಜನಕ್ಕೆ ಅಂತ' ಎಂದು ಮೇಘಾಶ್ರೀ ಕಾಮೆಂಟ್ ಮಾಡಿದ್ದರು.

 

Latest Videos
Follow Us:
Download App:
  • android
  • ios