ಪ್ರೀತ್ಸೆ ಚಿತ್ರದ ಮೂಲಕ ಗಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕನ್ನಡದ ಪ್ರಸಿದ್ಧ ಗಾಯ ಹೇಮಂತ್ ವಿವಾಹ ಇಂದು ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಹೇಮಂತ್

ಪ್ರೀತ್ಸೆ ಚಿತ್ರದ ಮೂಲಕ ಗಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕನ್ನಡದ ಪ್ರಸಿದ್ಧ ಗಾಯ ಹೇಮಂತ್ ಇಂದು ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಉಪೇಂದ್ರ, ಶಿವರಾಜ್ ಕುಮಾರ್,ಪುನೀತ್ ರಾಜ್ ಕುಮಾರ್, ಯಶ್,ಗಣೇಶ್, ಶ್ರೀನಗರ ಕಿಟ್ಟಿ ಸೇರಿದಂತೆ ಸಾಕಷ್ಟು ನಟರ ಚಿತ್ರಗಳಲ್ಲಿ ಹಾಡಿರುವ ಹೇಮಂತ್ ಹಂಸಲೇಖ ಅವರ ಗರಡಿಯಲ್ಲಿ ಪಳಗಿದ ಕಲಾವಿದರಾಗಿದ್ದಾರೆ. 

ಲ್ಯಾಗ್‌ ಮಂಜನ್ನ ಕಂಡ್ರೆ ದಾರೀಲಿ ಹೋಗೋರೆಲ್ಲ ನಿಲ್ಸಿ ಮಾತಾಡಿಸ್ತಾರಂತೆ!

ಹಂಸಲೇಖ,ವಿ.ಮನೋಹರ್, ಗುರುಕಿರಣ್,ಮನೋಮೂರ್ತಿ,ಅರ್ಜುನ್ ಜನ್ಯ,ಹರಿಕೃಷ್ಣ ,ಸಾಧು ಕೋಕಿಲ,ರಿಕ್ಕಿ ಕೇಜ್, ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತಕ್ಕೆ ಹೇಮಂತ್ ದನಿ ನೀಡಿದ್ದಾರೆ

ವೈದ್ಯೆಯಾಗಿರುವ ಕೃತಿಕ ಜೊತೆ ಹೇಮಂತ್ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬೆಂಗಳೂರಿನಲ್ಲಿ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಹೇಮಂತ್ ಕೃತಿಕಾ ಮದುವೆ ನೇರವೇರಿದೆ. ಹೇಮಂತ್ ವಿವಾಹವಾಗಿರು ವೈದ್ಯೆ ಕೃತಿಕ ನಗರದ ಸೆಂಟ್ ಜಾನ್ ಅಸ್ಪತ್ರೆಯಲ್ಲಿ Nephrologist ಆಗಿ ಕೆಲಸ ಮಾಡುತ್ತಿದ್ದಾರೆ. 

ಲವ್ 360 ಪಾತ್ರ ಸಖತ್ ಚಾಲೆಂಜಿಂಗ್ ಎಂದ ಲವ್‌ ಮಾಕ್ಟೇಲ್ ಚೆಲುವೆ

ಹೇಮಂತ್ ಸ್ಟಾರ್ ನಟರ ಚಿತ್ರಗಳಲ್ಲಿ ಹಾಡಿದ್ದು, ಪ್ರೀತ್ಸೆ ಚಿತ್ರದ ಪ್ರೀತ್ಸೆ ಪ್ರೀತ್ಸೆ ಹಾಡು ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತ್ತು. ಬಳಿಕ ಅನೇಕ ಚಿತ್ರಗಳಲ್ಲಿ ಹಾಡಿದ್ದು ಸ್ಯಾಂಡಲ್‌ವುಡ್ ಖ್ಯಾತ ಗಾಯಕರ ಸಾಲಿಗೆ ಸೇರಿದ್ದಾರೆ

ಗಾಯಕ ಹೇಮಂತ್ ಮದುವೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಭಾಗಿಯಾಗಿ ನವದಂಪತಿಗಳಿಗೆ ಶುಭ ಕೋರಿದರು.