ಬೆಂಗಳೂರು (ಮಾ. 06): ಈಗ ನಟ ದರ್ಶನ್‌ ಅವರ ಅಂಗಳದಲ್ಲಿ ‘ಒಡೆಯ’ ಹಾಗೂ ‘ಮುನಿರತ್ನ ಕುರುಕ್ಷೇತ್ರ’ದ ದರ್ಬಾರ್‌. ಈ ಎರಡೂ ಚಿತ್ರಗಳಿಗೆ ಸಂಬಂಧಿಸಿದಂತೆ ಈಗಷ್ಟೇ ಒಂದು ಸುದ್ದಿ ಒಂದಿದೆ. ನಾಗಣ್ಣ ನಿರ್ದೇಶನದ ಬಹು ನಿರೀಕ್ಷೆಯ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಬಿಡುಗಡೆ ದಿನಾಂಕ ಪಕ್ಕಾ ಆಗಿದೆ.

’ಇವರಿಗೆ ಕಿಸ್ ಕೊಡೋಕೆ ಚಾನ್ಸ್ ಸಿಕ್ರೆ ಬಿಡೋದೇ ಇಲ್ಲ’: ಮಿಲ್ಕ್ ಬ್ಯೂಟಿ

ಈಗ ಬಂದಿರುವ ಮಾಹಿತಿ ಪ್ರಕಾರ ಮುನಿರತ್ನ ಅವರು ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವುದಕ್ಕೆ ಹೊರಟಿದ್ದಾರೆ. ಏಪ್ರಿಲ್‌ 5 ರಂದು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಆ ನಿಟ್ಟಿನಲ್ಲಿ ತಯಾರಿಗಳು ನಡೆಯುತ್ತಿದ್ದು, ಇನ್ನೂ 3ಡಿ ಹಾಗೂ ಗ್ರಾಫಿಕ್ಸ್‌ ಕೆಲಸ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ.

ಅಗ್ನಿಸಾಕ್ಷಿ: ಚಂದ್ರಿಕಾ ಗುಟ್ಟು ಬಯಲಾಗಲು ಬೇಕಾಯ್ತು ವರ್ಷ 6!

ಮೈದಾನಕ್ಕಿಳಿದ ಒಡೆಯ

ಈ ನಡುವೆ ದರ್ಶನ್‌ ಅವರು ‘ಒಡೆಯ’ನ ಜತೆಗೆ ಶೂಟಿಂಗ್‌ ಮೈದಾನಕ್ಕಿಳಿದ್ದಾರೆ. ಮೇ.5ರಿಂದ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆ, ಚಿತ್ರದುರ್ಗದಲ್ಲಿ ಚಿತ್ರೀಕರಣ ಮುಗಿಸಿಕೊಂಡು ವಿದೇಶಕ್ಕೆ ಹಾರಲಿದೆ ‘ಒಡೆಯ’ ಸಿನಿಮಾ.

‘ಇಲ್ಲಿವರೆಗೂ ಆಗಿರುವ ಚಿತ್ರೀಕರಣ ತುಂಬಾ ಚೆನ್ನಾಗಿ ಬಂದಿದೆ. ಒಂದಿಷ್ಟುದೃಶ್ಯಗಳು ಹಾಗೂ ಫೈಟ್‌ ಸೀನ್‌ಗಳು ಬಾಕಿ ಉಳಿದಿವೆ. ಜತೆಗೆ ಮೂರು ಹಾಡುಗಳ ಚಿತ್ರೀಕರಣ ಬಾಕಿ ಉಳಿದ್ದು, ಇದರಲ್ಲಿ ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಯಾವ ದೇಶ, ಯಾವ ಜಾಗ ಎಂಬುದು ಇನ್ನೂ ನಿರ್ಧರಿಸಿಲ್ಲ. ಆದರೆ, ಹಾಡುಗಳ ಚಿತ್ರೀಕರಣಕ್ಕೆ ಸದ್ಯದಲ್ಲೇ ವಿದೇಶಕ್ಕೆ ಹೊರಡಲಿದ್ದೇವೆ’ ಎನ್ನುತ್ತಾರೆ ‘ಒಡೆಯ’ ಚಿತ್ರದ ನಿರ್ದೇಶಕ ಎಂ ಡಿ ಶ್ರೀಧರ್‌.

ವಿಮಾನ ನಿಲ್ದಾಣದಲ್ಲಿ ಪ್ರಭಾಸ್ ಕೆನ್ನೆಗೆ ಬಾರಿಸಿದ ಯುವತಿ!

ಸಂದೇಶ್‌ ನಾಗರಾಜ್‌ ನಿರ್ಮಾಣದ ಈ ಚಿತ್ರಕ್ಕೆ ಇನ್ನೂ 25 ರಿಂದ 30 ದಿನಗಳ ಚಿತ್ರೀಕರಣ ಬಾಕಿ ಉಳಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್‌ ತಿಂಗಳಿಗೆ ಸಿನಿಮಾ ತೆರೆಗೆ ತರುವ ಯೋಚನೆ ನಿರ್ಮಾಪಕರದ್ದು. ಆದರೆ, ‘ಮುನಿರತ್ನ ಕುರುಕ್ಷೇತ್ರ’ ಬಂದು ಹೋದ ಮೇಲೆ ‘ಒಡೆಯ’ನಿಗೆ ಬಿಡುಗಡೆಯ ಭಾಗ್ಯ ದೊರೆಯಲಿದ್ದು, ಒಂದು ವೇಳೆ ಏಪ್ರಿಲ್‌ನಲ್ಲಿ ಕುರುಕ್ಷೇತ್ರ ಬಂದರೆ ಅಕ್ಟೋಬರ್‌ಗೆ ‘ಒಡೆಯ’ನ ದರ್ಶನ ಪಕ್ಕಾ.