ಬೆಂಗಳೂರು (ಮಾ. 05): ನಟಿ ತಮನ್ನಾ ಭಾಟಿಯಾ ತೆರೆ ಮೇಲೆ ಯಾವ ನಟನಿಗೂ ಮುತ್ತು ಕೊಡುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದಾರೆ. ಒಂದು ವೇಳೆ ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಜೊತೆ ನಟಿಸುವ ಅವಕಾಶ ಸಿಕ್ಕರೆ ನನ್ನ ರೂಲ್ಸನ್ನು ಬ್ರೇಕ್ ಮಾಡಿ ಅವರಿಗೆ ಮುತ್ತು ಕೊಡುತ್ತೇನೆ ಎಂದಿದ್ದಾರೆ. 

ಅಗ್ನಿಸಾಕ್ಷಿ: ಚಂದ್ರಿಕಾ ಗುಟ್ಟು ಬಯಲಾಗಲು ಬೇಕಾಯ್ತು ವರ್ಷ 6!

ಹೃತಿಕ್ ರೋಷನ್ ನ್ನು ಮೊದಲ ಬಾರಿ ಭೇಟಿ ಮಾಡಿದ ಅನುಭವಗಳನ್ನು ಹೇಳಿಕೊಳ್ಳುತ್ತಾ, ಮೊದಲ ಬಾರಿ ಭೇಟಿ ಮಾಡಿದಾಗ ಅವರ ಮುಂದೆ ಹೇಗೆ ನಡೆದುಕೊಳ್ಳಬೇಕೆಂದು ನನಗೆ ಬಹಳ ಮುಜುಗರವಾಯಿತು ಎಂದಿದ್ದಾರೆ. 

ಕಂಗನಾ ಸಿಂಗಲ್ ಅಲ್ಲ, ಡೇಟಿಂಗ್‌ನಲ್ಲಿದ್ದಾರೆ!

ನನ್ನ ಕರಿಯರ್ ನ ಆರಂಭದಲ್ಲೇ ಹೃತಿಕ್ ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರ ವೃತ್ತಿ ನಿಷ್ಠೆ ಹಾಗೂ ಪ್ರಾಮಾಣಿಕತೆ ನನಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ. ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇದೊಂದು ಸವಿ ನೆನಪು. ಥ್ಯಾಂಕ್ಸ್ ಹೃತಿಕ್ ಜೀ ಎಂದು ತಮನ್ನಾ ಹೇಳಿದ್ದಾರೆ.