ಭಾವಚಿತ್ರ(Bhavachithra) ಸಿನಿಮಾದ ಟ್ರೇಲರ್‌ ಬಿಡುಗಡೆ ಗಾನವಿ ಲಕ್ಷ್ಮಣ್‌, ಚಕ್ರವರ್ತಿ ನಟನೆಯ ಥ್ರಿಲ್ಲರ್‌

ಬಿಡುಗಡೆಗೆ ತಯಾರಿ ಮಾಡಿಕೊಂಡಿರುವ ‘ಭಾವಚಿತ್ರ’(Bhavachithra) ಚಿತ್ರದ ಟ್ರೇಲರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಕ್ರವರ್ತಿ, ಗಾನವಿ ಲಕ್ಷ್ಮಣ್‌ ನಟನೆಯ, ಗಿರೀಶ್‌ ಕುಮಾರ್‌ ನಿರ್ದೇಶನದ ಚಿತ್ರವಿದು. ವುಡ್‌ಕ್ರೇಪರ್ಸ್‌ ಹೆಸರಿನ ಯೂಟ್ಯೂಬ್‌ ಚಾನಲ್‌ನಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.

‘ಈ ಹಿಂದೆ ನಾನು ಆವಾಹಯಾಮಿ ಚಿತ್ರ ಮಾಡಿದ್ದೆ. ಭಾವಚಿತ್ರ ನನ್ನ ಎರಡನೇ ಸಿನಿಮಾ. ಇದು ಫೋಟೋಗ್ರಫಿ(Photography) ಮೇಲೆ ರೂಪಿಸಲಾಗಿರುವ ಕತೆ. ಇಡೀ ಚಿತ್ರ ಥ್ರಿಲ್ಲರ್‌ ಜಾನರ್‌ನಲ್ಲಿ ಮೂಡಿ ಬಂದಿದೆ. ಭಾವನೆಗಳು, ಥ್ರಿಲ್ಲರ್‌ ಹಾಗೂ ಸೆಂಟಿಮೆಂಟ್‌ ಈ ಚಿತ್ರದ ಹೈಲೈಟ್‌. ಒಂದು ಭಾವಚಿತ್ರ ಹಾಗೂ ಅದನ್ನು ಸೆರೆ ಹಿಡಿಯುವ ಕ್ಯಾಮೆರಾ ಮೇಲೆ ಕತೆ ಸಾಗುತ್ತದೆ. ಟ್ರೇಲರ್‌ನಷ್ಟೇ ಸಿನಿಮಾ ಚೆನ್ನಾಗಿರುತ್ತದೆ’ ಎಂದು ನಿರ್ದೇಶಕ ಗಿರೀಶ್‌ ಕುಮಾರ್‌ ಹೇಳಿಕೊಂಡರು.

ನ.26ಕ್ಕೆ ಅಮೃತ ಅಪಾರ್ಟ್‌ಮೆಂಟ್ಸ್‌ ಬಿಡುಗಡೆ

ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬ ಫೋಟೋಗ್ರಫಿಯಲ್ಲಿ ಆಸಕ್ತಿ ಬೆಳೆಸಿಕೊಂಡು, ಆತ ತನಗೆ ಇಷ್ಟವಾದದ್ದನ್ನು ಫೋಟೋ ತೆಗೆಯುತ್ತಾ ಹೋಗುತ್ತಾನೆ. ಹಾಗೆ ಫೋಟೋಗಳನ್ನು ತೆಗೆಯುವಾಗ ಆತನ ಜೀವನದಲ್ಲಿ ಕೆಲ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಆ ಘಟನೆಗಳು ಏನು, ಅವರು ಭಾವಚಿತ್ರಗಳಾಗಿ ಹೇಗೆ ಮೂಡುತ್ತವೆ ಎಂಬುದನ್ನು ಇಲ್ಲಿ ನೋಡಬಹುದಂತೆ. ಇಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. ಇವರು ಈ ಹಿಂದೆ ‘ಯಾನ’ ಚಿತ್ರದಲ್ಲಿ ನಟಿಸಿದ್ದರು.

ಮಗಳು ಜಾನಕಿ ಧಾರಾವಾಹಿ ಮಾಡುವ ಸಿಕ್ಕ ಅವಕಾಶ ಇದು. ತುಂಬಾ ವಿಭಿನ್ನವಾದ ಕತೆಯನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ’ ಎಂದರು ಗಾನವಿ ಲಕ್ಷ್ಮಣ್‌. ಚಿತ್ರಕ್ಕೆ ಸಂಗೀತ ನೀಡಿರುವುದು ಗೌತಮ್‌ ಶ್ರೀವತ್ಸ. ಹಿನ್ನೆಲೆ ಸಂಗೀತ ಚಿತ್ರಕ್ಕೆ ವಿಶೇಷವಾದ ಮಹತ್ವ ನೀಡಿದೆ ಎಂಬುದು ಗೌತಮ್‌ ಹೇಳಿದ ಮಾತು. ಅಜಯ್‌ ಕುಮಾರ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದಾರೆ. ಇನ್ನೂ ಶಂಕರ್‌, ಸಚಿನ್‌, ರತೀಶ್‌ ಕುಮಾರ್‌ ಚಿತ್ರವನ್ನು ನಿರ್ಮಿಸಿದ್ದಾರೆ.

View post on Instagram