ನ.26ಕ್ಕೆ ಅಮೃತ ಅಪಾರ್ಟ್‌ಮೆಂಟ್ಸ್‌(Amrutha apartments) ಬಿಡುಗಡೆ ಗುರುರಾಜ್‌ ಕುಲಕರ್ಣಿ ನಿರ್ದೇಶನದ ನಗರಜೀವನದ(City life) ಕತೆ ಹೇಳುವ ಸಿನಿಮಾ

ನವೆಂಬರ್‌ 26ರಂದು ‘ಅಮೃತ ಅಪಾರ್ಟ್‌ಮೆಂಟ್ಸ್‌’(Amrutha Apartments) ಸಿನಿಮಾ(Cinema) ತೆರೆಗೆ ಬರುತ್ತಿದೆ. ಗುರುರಾಜ್‌ ಕುಲಕರ್ಣಿ ನಿರ್ಮಿಸಿ, ನಿರ್ದೇಶನ ಮಾಡಿರುವ ಚಿತ್ರವಿದು. ತಾರಕ್‌ ಪೊನ್ನಪ್ಪ, ಬಾಲಾಜಿ ಮನೋಹರ್‌, ಸಂಪತ್‌ಕುಮಾರ್‌, ಸೀತಾ ಕೋಟೆ, ಮಾನಸ ಜೋಷಿ, ಊರ್ವಶಿ ಗೋವರ್ಧನ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

‘ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆಂಬ ನಂಬಿಕೆ ಇದೆ. ಈಗಾಗಲೇ ಕೆಲ ಆತ್ಮೀಯರು ಈ ಚಿತ್ರವನ್ನು ನೋಡಿ ಖುಷಿ ಪಟ್ಟಿದ್ದಾರೆ. ಅವರ ಪ್ರೋತ್ಸಾಹದ ಮಾತುಗಳೇ ಚಿತ್ರದ ಮೇಲೆ ಮತ್ತಷ್ಟುಭರವಸೆ ಮೂಡಿಸಿವೆ. ಇದು ನಗರ ಜೀವನ ಕುರಿತು ಇರುವ ಕತೆ. ಸಂಬಂಧಗಳು, ಭಾವನೆಗಳು, ಅಧುನಿಕ ಜೀವನ ಹೀಗೆ ಸಾಕಷ್ಟುಅಂಶಗಳು ಚಿತ್ರದಲ್ಲಿ ಬರುತ್ತವೆ’ ಎಂದು ಚಿತ್ರದ ಕುರಿತು ಹೇಳಿದರು ಗುರುರಾಜ್‌ ಕುಲಕರ್ಣಿ.

ಎರಡೂವರೆ ಗಂಟೆ ನಗಿಸುವ ಸಿನಿಮಾ ಸಖತ್‌: ಸಿಂಪಲ್‌ ಸುನಿ

ನಟಿ ಮಾನಸ ಜೋಷಿ ಇಲ್ಲಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಪೊಲೀಸ್‌ ಪಾತ್ರ ಮಾಡುವುದಕ್ಕೆ ತುಂಬಾ ಆಸೆ ಇತ್ತಂತೆ. ಅದು ‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ಚಿತ್ರದ ಮೂಲಕ ಈಡೇರಿರುವುದು ಅವರ ಸಂಭ್ರಮಕ್ಕೆ ಕಾರಣವಾಗಿದೆ. ತಾರಕ್‌ ಪೊನ್ನಪ್ಪ ಚಿತ್ರದ ಮುಖ್ಯಪಾತ್ರಧಾರಿ. ‘ನಗರ ಪ್ರದೇಶದಲ್ಲಿ ನೆಲೆಸಿರುವ ಮಧ್ಯಮ ದಂಪತಿ ಮೂಲಕ ಒಂದು ದೊಡ್ಡ ಕತೆಯನ್ನು ನಿರ್ದೇಶಕರು ಹೇಳಿದ್ದಾರೆ’ ಎಂಬುದು ತಾರಕ್‌ ಪೊನ್ನಪ್ಪ ಮಾತು. ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ರಂಗಭೂಮಿ, ಸಿನಿಮಾ ಹೀಗೆ ಎರಡೂ ಕ್ಷೇತ್ರದವರು ಇಲ್ಲಿ ನಟಿಸಿರುವುದು ಚಿತ್ರದ ವಿಶೇಷ.

View post on Instagram

ಈ ಸಂದರ್ಭ 300 ಚಿತ್ರಗಳಿಗೆ ಸಂಕಲನ ಮಾಡಿರುವ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಕಲನಕಾರ ಬಿ ಎಸ್‌ ಕೆಂಪರಾಜು ಅವರಿಗೆ ಚಿತ್ರತಂಡದ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಚಿತ್ರದಲ್ಲಿ ನಟಿಸಿರುವ ಸೀತಾ ಕೋಟೆ, ಮಹಂತೇಶ್‌, ಬಾಲಾಜಿ ಮನೋಹರ್‌ ಚಿತ್ರದ ಕುರಿತು ಹೇಳಿಕೊಂಡರು.

YouTube video playerYouTube video playerYouTube video player